More

    ಅಂಕೋಲಾಕ್ಕೂ ಬಂತು ಕರೊನಾ

    ಕಾರವಾರ: ಅಂಕೋಲಾಕ್ಕೂ ಕರೊನಾ ಕಾಲಿಟ್ಟಿದೆ. ಈ ಮೂಲಕ ಒಟ್ಟಾರೆ ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಮಹಾಮಾರಿ ಆವರಿಸಿದಂತಾಗಿದೆ.

    ಮಹಾರಾಷ್ಟ್ರ ಥಾಣೆಯಿಂದ ಆಗಮಿಸಿದ್ದ ಕುಮಟಾದ 62 ವರ್ಷದ ಸೋಂಕಿತ (ಯುಕೆ-109) ಸಂಪರ್ಕಕ್ಕೆ ಬಂದ ಅಂಕೋಲಾದ 30 ವರ್ಷದ ಮಹಿಳೆಯಲ್ಲಿ (ಯುಕೆ-124) ರೋಗ ಕಾಣಿಸಿಕೊಂಡಿದೆ.

    ಅಲ್ಲದೆ, ಕಾರವಾರದ ಮೂವರಲ್ಲಿ ಬುಧವಾರ ರೋಗ ಖಚಿತವಾಗಿದೆ. ಸೊಲ್ಲಾಪುರದಿಂದ ಆಗಮಿಸಿದ ಸೋನಾರವಾಡದ 64 ವರ್ಷದ ಮಹಿಳೆ (ಯುಕೆ-123), ಥಾಣೆಯಿಂದ ಜೂನ್ 11ರಂದು ಆಗಮಿಸಿ ಸದಾಶಿವಗಡ ದೇಸಾಯಿವಾಡದಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದ 52 ವರ್ಷದ ಮಹಿಳೆ (ಯುಕೆ- 122) ಹಾಗೂ 65 ವರ್ಷದ ಪುರುಷ (ಯುಕೆ-1 21)ನಲ್ಲಿ ರೋಗ ಖಚಿತವಾಗಿದೆ. ಅವರ ಜತೆ ಇದ್ದ ಇನ್ನೊಬ್ಬ ವೃದ್ಧೆಯಲ್ಲಿ ಸೋಂಕು ಕಂಡುಬಂದಿಲ್ಲ. ಆದರೂ ಇವರನ್ನು ಆಂಬುಲೆನ್ಸ್​ನಲ್ಲಿ ಕರೆದೊಯ್ದು ಆಸ್ಪತ್ರೆಗೆ ಸೇರಿಸಲಾಗಿದೆ.

    ಜಿಲ್ಲೆಯ ಒಟ್ಟಾರೆ ರೋಗಿಗಳ ಸಂಖ್ಯೆ 124 ಕ್ಕೆ ಏರಿಕೆಯಾಗಿದೆ. ಒಂದೇ ವಾರದಲ್ಲಿ 24ಕ್ಕೂ ಹೆಚ್ಚು ರೋಗಿಗಳು ಕಂಡುಬಂದಿದ್ದಾರೆ. ಎಲ್ಲರೂ ಹೊರ ರಾಜ್ಯದಿಂದ ಬಂದವರೇ ಆಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದ ಹೆಚ್ಚಿನವರಿಗೆ ರೋಗ ಹರಡದೇ ಇರುವುದು ಸಮಾಧಾನದ ಸಂಗತಿಯಾಗಿದೆ. ಇದುವರೆಗೆ 93 ಜನರು ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts