More

    ತುಮಕೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರುವಿಂಗಡನೆ ; ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ

    ತುಮಕೂರು: ತುಮಕೂರು ಜಿಲ್ಲಾ ಪಂಚಾಯಿತಿಗೆ ಸದಸ್ಯ ಸ್ಥಾನಗಳನ್ನು 64ಕ್ಕೆ ಹೆಚ್ಚಿಸಿದ್ದು ಕ್ಷೇತ್ರಗಳನ್ನು ಮರು ವಿಂಗಡಿಸಿ ರಾಜ್ಯ ಚುನಾವಣಾ ಆಯೋಗ ಮಾ.31ರಂದು ಅಧಿಸೂಚನೆ ಹೊರಡಿಸಿದೆ.

    57 ಸದಸ್ಯ ಬಲವಿದ್ದ ತುಮಕೂರು ಜಿಪಂ ಸದಸ್ಯ ಸ್ಥಾನಗಳು ಹೆಚ್ಚಿಗೆ ಹಾಗಲಿದ್ದು ಸಾಕಷ್ಟು ಹೊಸ ಕ್ಷೇತ್ರಗಳು ಸೃಷ್ಠಿಯಾಗಿವೆ, ಕೆಲವು ಕ್ಷೇತ್ರಗಳ ಹೆಸರು ಕೂಡ ಬದಲಾಗಿದ್ದು, ಕಳೆದೊಂದು ವಾರದಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ. ಶೀಘ್ರದಲ್ಲಿಯೇ ಕ್ಷೇತ್ರಗಳಿಗೆ ಮೀಸಲಾತಿ ಕೂಡ ಪ್ರಕಟವಾಗಲಿದ್ದು ಕದನ ಕುತೂಹಲ ಮೂಡಿಸಿದೆ.

    7 ಸ್ಥಾನಗಳಿದ್ದ ತುಮಕೂರು ಗ್ರಾಮೀಣ ವಿಧಾನ ಕ್ಷೇತ್ರದಲ್ಲಿ 2 ಹೊಸ ಕ್ಷೇತ್ರಗಳು ಸೃಷ್ಠಿಯಾಗಿದ್ದು 9ಕ್ಕೇರಿದೆ. ಪ್ರಸ್ತುತ ಸಿದ್ಧಗಂಗಾ ಮಠ ಕ್ಷೇತ್ರ, ಗೂಳೂರು, ಹೆಬ್ಬೂರು, ಸಿ.ಟಿ.ಕೆರೆ, ಹೊನ್ನುಡಿಕೆ, ಊರುಕೆರೆ, ಊರ್ಡಿಗೆರೆ, ಹೆಗ್ಗೆರೆ ಹಾಗೂ ನಾಗವಲ್ಲಿ ಕ್ಷೇತ್ರಗಳು ಇದ್ದು ಗ್ರಾಪಂಗಳನ್ನು ಇವುಗಳ ವ್ಯಾಪ್ತಿಗೆ ಸೇರಿಸಲಾಗಿದ್ದು ಕೆಲವು ಬಿಟ್ಟುಹೋಗಿದ್ದು, ಕೆಲವೆಡೆ ಸೇರ್ಪಡೆಯೂ ಆಗಿದೆ.

    ಗುಬ್ಬಿ ತಾಲೂಕಿನಲ್ಲಿ ಕಲ್ಲೂರು, ಚೇಳೂರು, ಅಮ್ಮನಘಟ್ಟ, ಹಾಗಲವಾಡಿ, ಕುನ್ನಾಲ(ಕಡಬ), ನಿಟ್ಟೂರು ಹಾಗೂ ಅಳಿಲುಘಟ್ಟ ಕ್ಷೇತ್ರ ಒಟ್ಟು 6 ಕ್ಷೇತ್ರಗಳಾಗಿವೆ. ಕುಣಿಗಲ್ ತಾಲೂಕಿನಲ್ಲಿ ಕೊತ್ತಗೆರೆ, ಕಿತ್ನಾಮಂಗಲ, ಇಪ್ಪಾಡಿ(ಹುತ್ರಿದುರ್ಗ), ಹುಲಿಯೂರು ದುರ್ಗ, ಅಮೃತೂರು, ಬೀರಗಾನಹಳ್ಳೊ(ಯಡಿಯೂರು) ಕ್ಷೇತ್ರಗಳಿದ್ದು ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧವಾಗಿದೆ.

    ತಿಪಟೂರು ತಾಲೂಕಿನಲ್ಲಿ ಹೊನ್ನವಳ್ಳಿ, ಹಾಲ್ಕುರಿಕೆ(ಹುಚ್ಚಗೊಂಡನಹಳ್ಳಿ), ಕಿಬ್ಬನಹಳ್ಳಿ, ಈಚನೂರು(ರಂಗಾಪುರ) ಹಾಗೂ ನೊಣವಿನಕೆರೆ ಕ್ಷೇತ್ರಗಳು ಉಳಿದಿದ್ದು ಯಾವುದೇ ಹೊಸಕ್ಷೇತ್ರ ಸೃಷ್ಠಿಯಾಗಿಲ್ಲ. ತುರುವೇಕೆರೆ ತಾಲೂಕಿನಲ್ಲಿ ಬಾಣಸಂದ್ರ, ಬೆನಕನಕೆರೆ(ದೆಬ್ಬೇಘಟ್ಟ), ಆದಿತ್ಯಪಟ್ಟಣ(ದಂಡಿನಶಿವರ), ಮಾಯಸಂದ್ರ ಹಾಗೂ ಹೊಸದಾಗಿ ಮುನಿಯೂರು ಕ್ಷೇತ್ರ ಸೃಷ್ಠಿಯಾಗಿದೆ. ಒಟ್ಟು 5 ಕ್ಷೇತ್ರಗಳಿದ್ದು ಟಿಕೆಟ್ ಆಕಾಂಕ್ಷಿಗಳ ದಂಡು ಪ್ರಮುಖ ಮೂರು ಪಕ್ಷದಲ್ಲಿದ್ದು ಮೀಸಲಾತಿಯನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

    ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹೊಸದಾಗಿ ತಮ್ಮಡಿಹಳ್ಳಿ(ಯಳನಡು, ಕೋರಗೆರೆ, ತಿಮ್ಮಲಾಪುರ, ದೊಡ್ಡಬಿದರೆ ಹಾಗೂ ಬರಗೂರು) ಕ್ಷೇತ್ರ ಸೃಷ್ಠಿಯಾಗಿದೆ, ಉಳಿದಂತೆ ಹೋಯ್ಸಳಕಟ್ಟೆ ಕ್ಷೇತ್ರ ಹೆಸರು ಬದಲಾಯಿಸಿಕೊಂಡು ಕೆಂಕೆರೆ ಕ್ಷೇತ್ರವಾಗಿದೆ, ಕಂದಿಕೆರೆ ಬದಲಾಗಿ ತಿಮ್ಮನಹಳ್ಳಿ, ಹಂದನಕೆರೆ ಹಾಗೂ ಶೆಟ್ಟಿಕೆರೆ ಉಳಿದಿವೆ. ಶಿರಾ ತಾಲೂಕಿನ ಬುಕ್ಕಾಪಟ್ಟಣ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬರಲಿದ್ದು ಒಟ್ಟು 6 ಕ್ಷೇತ್ರಗಳು ಉಳಿದಿವೆ.

    ಮಧುಗಿರಿ ಕ್ಷೇತ್ರದಲ್ಲಿ ಚಿನಕವಜ್ರ(ಸಿದ್ಧಾಪುರ ದೊಡ್ಡೇರಿ), ಬಡವನಹಳ್ಳಿ(ದೊಡ್ಡೇರಿ), ಹೊಸಕೆರೆ(ಸಿದ್ಧಾಪುರ, ಐಡಿಹಳ್ಳಿ, ಮಿಡಿಗೇಶಿ, ದೊಡ್ಡೇರಿ), ಗರಣಿ(ಮಿಡಿಗೇಶಿ), ಇಟಕದಿಬ್ಬನಹಳ್ಳಿ, ಕೊಡಿಗೇನಹಳ್ಳಿ, ಬ್ಯಾಲ್ಯ(ಪುರವರ) ಕ್ಷೇತ್ರಗಳು ಇದ್ದು ಕ್ಷೇತ್ರಗಳ ಭಗೋಳಿಕ ಲಕ್ಷಣ ಸಂಪೂರ್ಣ ಅದಲುಬದಲಾದಂತಾಗಿದೆ.

    ಕೊರಟಗೆರೆ ತಾಲೂಕಿನಲ್ಲಿ ದೊಮ್ಮಲದೇವಿಪುರ, ಹೊಳವನಹಳ್ಳಿ, ಹೂಲಿಕುಂಟೆ, ಕೋಳಾಲ, ತೋವಿನಕೆರೆ ಕ್ಷೇತ್ರಗಳು ಉಳಿದಿಕೊಂಡಿವೆ, ಶಿರಾ ತಾಲೂಕಿನಲ್ಲಿ ತಡಕಲೂರು(ಹುಲಿಕುಂಟೆ), ನಾದೂರು , ಬೇವಿನಹಳ್ಳಿ, ತಾವರೇಕೆರೆ, ಮದಲೂರು, ಚಿಕ್ಕನಹಳ್ಳಿ, ಕಳ್ಳಂಬೆಳ್ಳ ಹಾಗೂ ಬುಕ್ಕಾಪಟ್ಟಣ ಕ್ಷೇತ್ರವನ್ನು ಪುನರ್‌ವಿಂಗಡಿಸಿ ಉಳಿಸಿಕೊಳ್ಳಲಾಗಿದೆ.

    ಪಾವಗಡ ತಾಲೂಕು ಬ್ಯಾಡನೂರು, ಕೋಟಗುಡ್ಡ, ಅರಸೀಕೆರೆ(ಮಂಗಲವಾಡ), ಪಳವಳ್ಳಿ(ನಾಗಲಮಡಿಕೆ), ವೆಂಕಟಾಪುರ, ವೈ.ಎನ್.ಹೊಸಕೋಟೆ, ಕಾಮನದುರ್ಗ(ನೀಲಮ್ಮನಹಳ್ಳಿ) ಜಿಪಂ ಕ್ಷೇತ್ರಗಳು ಉಳಿದುಕೊಂಡಿದ್ದು ಹೊಸ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಲಿದೆ ಎಂದು ಕನಸುಕಟ್ಟಿಕೊಂಡ ಸಾಕಷ್ಟು ಆಕಾಂಕ್ಷಿಗಳು ಮೀಸಲಾತಿ ಲಾಬಿ ಅಧಿಕಾರಸ್ಥರ ಹಿಂದೆ ಸುತ್ತಲಾರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts