More

    ದೆಹಲಿ ತಲುಪಿದ ಯೋಗಿ; ನಾಳೆ ಪ್ರಧಾನಿ ಜತೆ ಮಾತುಕತೆ

    ನವದೆಹಲಿ: ಉತ್ತರ ಪ್ರದೇಶದಲ್ಲಿ ಅನೇಕ ರಾಜಕೀಯ ಬೆಳವಣಿಗೆಗಳು ಆಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ರಾಷ್ಟ್ರ ರಾಜಧಾನಿ ನವದೆಹಲಿಗೆ ಗುರುವಾರದಂದು ತೆರಳಿದ್ದಾರೆ. ಇಂದು ಗೃಹ ಸಚಿವರೊಂದಿಗೆ ಸಭೆ ನಡೆಸಿರುವ ಅವರು ನಾಳೆ ಪ್ರಧಾನಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

    ಉತ್ತರ ಪ್ರದೇಶದ ಚುನಾವಣೆಗೆ ಕೆಲ ತಿಂಗಳುಗಳು ಬಾಕಿಯಿವೆ. ಯೋಗಿ ಸರ್ಕಾರವು ಕರೊನಾ ನಿಯಂತ್ರಣದಲ್ಲಿ ವಿಫಲವಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಾಯಕತ್ವವನ್ನು ಬದಲಾಯಿಸಲಿದೆ ಎನ್ನುವ ಊಹಾಪೋಹ ಆರಂಭವಾಗಿದೆ. ಈ ಬಗ್ಗೆ ಹೈ ಕಮಾಂಡ್​ ಪರಿಶೀಲನೆ ನಡೆಸುತ್ತಿರುವುದಾಗಿಯೂ ಹೇಳಲಾಗಿದೆ. ಈ ರೀತಿಯ ಸುದ್ದಿಯೊಂದು ಹರಿದಾಡುತ್ತಿರುವಾಗಲೇ ಯೋಗಿ, ಮೋದಿಯನ್ನು ಭೇಟಿ ಮಾಡಲು ಹೋಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಆದಿತ್ಯಾನಾಥ ಅವರು ಗುರುವಾರ ಮಧ್ಯಾಹ್ನ ಕೇಮದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಾಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ಯಾವ ವಿಚಾರದಲ್ಲಿ ಚರ್ಚೆಯಾಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. (ಏಜೆನ್ಸೀಸ್)

    ಹೆಣ್ಣು ಮಕ್ಕಳ ಕೈಗೆ ಮೊಬೈಲ್​ ಕೊಡುತ್ತಿರುವುದರಿಂದಲೇ ರೇಪ್​ ಆಗುತ್ತಿದೆ ಎಂದ ಮಹಿಳಾ ಆಯೋಗದ ಸದಸ್ಯೆ!

    ಸ್ನೇಹಿತರಿಂದ ಹೆಂಡತಿಯನ್ನೇ ರೇಪ್​ ಮಾಡಿಸಿದ ಗಂಡ! ಸಾಲದ ಬದಲು ಸೆಕ್ಸ್​ ಎಂದ ಪಾಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts