More

    ಪೊಟ್ಯಾಟೋ ಕ್ಲಬ್ ಸೇವಾ ಕಾರ್ಯಗಳಿಗೆ ಮರು ಚಾಲನೆ ನೀಡಿದ ಎಚ್. ಯೋಗಾ ರಮೇಶ್

    ಅರಕಲಗೂಡು: ರಾಜಕಾರಣಿಗಳು ಹಾಗೂ ಆಳುವ ವರ್ಗ ಅನುಸರಿಸುತ್ತಿರುವ ದ್ವಿಮುಖ ನೀತಿ ಧೋರಣೆ ಪರಿಣಾಮ ರೈತಾಪಿ ವರ್ಗದ ಜನರ ಮೇಲಿನ ಶೋಷಣೆಗೆ ಕಡಿವಾಣ ಬೀಳದಾಗಿದೆ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೋಗಾ ರಮೇಶ್ ಹೇಳಿದರು.

    ಪಟ್ಟಣದ ವಿನಾಯಕನಗರದಲ್ಲಿ ಶುಕ್ರವಾರ ಪೊಟ್ಯಾಟೋ ಕ್ಲಬ್ ಸೇವಾ ಕಾರ್ಯಗಳಿಗೆ ಮರು ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ  ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ರಾಜಕಾರಣಿಗಳಿಗೆ ಈವರೆಗೆ ಅನ್ನದಾತರ ಮೇಲೆ ಆಗುತ್ತಿರುವ ಅನ್ಯಾಯ, ಅಕ್ರಮಗಳಿಗೆ ಮುಕ್ತಿ ದೊರಕಿಸಲು ಸಾಧ್ಯವಾಗಿಲ್ಲ.

    ಕನಿಷ್ಠ ಸವಲತ್ತುಗಳನ್ನು ಕಲ್ಪಿಸಲಾಗದೆ ರಾಜಕಾರಣ ಮಾಡಿ‌ ವಂಚಿಸಲಾಗುತ್ತಿದೆ. ತಂಬಾಕು ಮಾರುಕಟ್ಟೆಯಲ್ಲಿ ದರ ಕುಸಿತದಿಂದ ನಷ್ಟ ಅನುಭವಿಸುತ್ತಿರುವ ಬೆಳೆಗಾರರು  ಬೇಡಿಕೆಗೆ ಸ್ಪಂದಿಸಲು‌ ಸಾಧ್ಯವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿರುವೆ.

    ನಾನು ಅಧಿಕಾರದ ಹಿಂದೆ ಹೋದವನಲ್ಲ, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ನಾಯಕರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ‌ ಶ್ರಮಿಸಿದ ನನ್ನನ್ನು ನಿರ್ಲಕ್ಷಿಸಿದರು. ಇದೀಗ ರಾಜಕೀಯ ಧ್ರವೀಕರಣವಾಗಿದೆ. ಒಂದು ವೇಳೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾ ಗೆದ್ದಿದ್ದರೆ ಮಂತ್ರಿಯಾಗುತ್ತಿದ್ದೆ. ಕ್ಷೇತ್ರದಿಂದ ನಾ ಹೆದರಿ ಹೋಗಲು ೧೬ ವರ್ಷದ ಸೇವೆ ಬಿಟ್ಟು ಬಂದಿಲ್ಲ, ಕರೊನಾ ಕಾರಣ ದೂರವಾಗಿದ್ದೆ, ರೈತ ಹಿತಕ್ಕಾಗಿ ಇನ್ನು ಮುಂದೆ ಪೊಟ್ಯಾಟೋ ಕ್ಲಬ್ ಸೇವಾ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಎಲ್ಲರ‌ ಸಹಕಾರ ಅತ್ಯಗತ್ಯವಾಗಿದೆ ಎಂದು ಕೋರಿದರು.

    ಕಾಮಿಡಿ ಕಿಲಾಡಿ ಸಂತೋಷ್, ವಕೀಲರಾದ ಎಸ್.ಪಿ. ಜಯಪ್ಪ, ಎಂ.ಟಿ. ಸತ್ಯನಾರಾಯಣ, ಶಿವಲಿಂಗಶಾಸ್ತ್ರಿ, ಭುವನಾಕ್ಷ, ಕ್ಲಾಸಿಕ್ ರವಿ, ಪ್ರಸನ್ನ, ಸುಬ್ಬೇಗೌಡ, ಲೋಕೇಶ್, ಸಲೀಂ, ಆಟೋ ರಾಜಣ್ಣ, ಎಸ್.ಟಿ.ಡಿ. ರಾಮಣ್ಣ, ವಿಜಯಕುಮಾರ್, ನಾಗರಾಜು,  ನಾಗೇಶ್, ಮಹಾದೇವ, ರಾಜೇಗೌಡ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts