More

    ಯೋಗಕ್ಷೇಮ: ಸ್ಟಾಂಡಿಲೈಟಿಸ್ ನಿವಾರಣೆಗೆ ಯೋಗದಲ್ಲಿ ಪರಿಹಾರ

    ಅಂಕೈಲೋಸಿಂಗ್ ಸ್ಟಾಂಡಿಲೈಟಿಸ್ ನಿವಾರಣೆಗೆ ಯೋಗದ ಪರಿಹಾರಗಳನ್ನು ತಿಳಿಸಿ.
    | ಮಲ್ಲಿನಾಥ ಯಲಹಂಕ ಬೆಂಗಳೂರು

    ಯೋಗಕ್ಷೇಮ: ಸ್ಟಾಂಡಿಲೈಟಿಸ್ ನಿವಾರಣೆಗೆ ಯೋಗದಲ್ಲಿ ಪರಿಹಾರಇದು ಪ್ರಾಥಮಿಕವಾಗಿ ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಬೆನ್ನು ಮೂಳೆಯ ಕೀಲುಗಳ ಉರಿಯೂತವನ್ನು ಉಂಟುಮಾಡುತ್ತದೆ. ಇದು ತೀವ್ರ ದೀರ್ಘಕಾಲದ ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಯೋಗದ ಮೂಲಕ ನಿಯಂತ್ರಣ ಸಾಧಿಸಬಹುದು. ನೋವನ್ನು ನಿವಾರಿಸಲು ನಮ್ಯತೆಯನ್ನು ಹೆಚ್ಚಿಸಲು ಯೋಗದ ಸೌಮ್ಯವಾದ ಸ್ಟ್ರೆಚಿಂಗ್ ವ್ಯಾಯಾಮಗಳು ಬೆನ್ನುಮೂಳೆಯನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಯೋಗ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಆತಂಕ ಕಡಿಮೆಯಾಗಿ ನರಮಂಡಲವನ್ನು ಶಾಂತಗೊಳಿಸಬಹುದು. ದೀರ್ಘಕಾಲದ ಅನಾರೋಗ್ಯವನ್ನು ಎದುರಿಸಲು, ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಯೋಗದ ಭಂಗಿಗಳನ್ನು ಮಾಡುವುದರಿಂದ ನಿಮಗೆ ನೋವು ನಿವಾರಣೆಯಾಗುವ ಸಾಧ್ಯತೆ ಹೆಚ್ಚು.

    ಸೂಚಿತ ಆಸನಗಳು: ಮಾರ್ಜಾಲಾಸನ, ಸೇತುಬಂಧ, ಭುಜಂಗಾಸನ, ಮಕರಾಸನ, ಏಕಪಾದ ಶಲಭಾಸನ ಗೋಮುಖಾಸನ, ತಾಡಾಸನ, ಶವಾಸನ ಹಾಗೂ ತಲಾ ಹತ್ತು ನಿಮಿಷ ಮುಂಜಾನೆ ನಾಡಿಶುದ್ಧಿ ಪ್ರಾಣಾಯಾಮ, ಧ್ಯಾನ ಮಾಡಿ. ಆರಂಭದಲ್ಲಿ ವೈದ್ಯರೊಂದಿಗೆ ಹಾಗೂ ಯೋಗ ಗುರುಗಳೊಂದಿಗೆ ಸಮಾಲೋಚಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts