More

    ನಿಸ್ವಾರ್ಥ ಸೇವೆ ಅನುಕರಣೀಯ, ವಸತಿ ಶಾಲೆ ಪ್ರಾಚಾರ್ಯ ಯಲ್ಲಪ್ಪ ಹೇಳಿಕೆ

    ಯಲಬುರ್ಗಾ: ರಜೆ ಅವಧಿಯಲ್ಲಿ ಮಕ್ಕಳಿಗೆ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಕುರಿತು ತರಬೇತಿ ನೀಡುತ್ತಿರುವ ವಿಶ್ವಬಂಧು ಸೇವಾ ಗುರುಬಳಗದ ಕಾರ್ಯ ಶ್ಲಾಘನೀಯ ಎಂದು ರ‌್ಯಾವಣಕಿ ಇಂದಿರಾಗಾಂಧಿ ವಸತಿ ಶಾಲೆ ಪ್ರಾಚಾರ್ಯ ಯಲ್ಲಪ್ಪ ಸೋಂಪುರ ಹೇಳಿದರು.

    ತಾಲೂಕಿನ ತಿಪ್ಪನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ವಸತಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿವಿಧ ವಸತಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ. ಇಂಥ ರಚನಾತ್ಮಕ ಕಾರ್ಯ ಮಾಡುತ್ತಿರುವ ಸೇವಾ ಗುರುಬಳಗಕ್ಕೆ ಸಹಾಯ, ಸಹಕಾರ ಇರುತ್ತದೆ ಎಂದರು.

    ಶಿಕ್ಷಕ ಸಂಗಯ್ಯ ಹಿರೇಮಠ, ಗ್ರಾಪಂ ಸದಸ್ಯ ಹನುಮಂತಪ್ಪ ಗೌಡ್ರ, ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಬಸವರಾಜ ಮುಳಗುಂದ ಮಾತನಾಡಿದರು. ತರಬೇತಿ ಕಾರ್ಯಾಗಾರದಲ್ಲಿ 80 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಿಸಲಾಯಿತು.

    ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಯಡ್ಡೋಣಿ, ಪ್ರಾಚಾರ್ಯ ಗುರುಪಾದಗೌಡ ಸೂಡಿ, ಗ್ರಾಪಂ ಸದಸ್ಯರಾದ ಹನಮಂತಪ್ಪ ಕಂಬಳಿ, ಕಾಮಣ್ಣ ಹೊಸಮನಿ, ವಿಶ್ವಬಂಧು ಸೇವಾ ಗುರು ಬಳಗದ ಸದಸ್ಯರಾದ ನಾಗರಾಜ ಪಟಗಾರ, ಮಹೇಂದ್ರ, ಮರ್ದಾನ್‌ಸಾಬ್ ನದಾಫ್, ವಸಂತಕುಮಾರ, ರಮೇಶ ಕಾರಬಾರಿ, ನಿಂಗಪ್ಪ ರಾಥೋಡ್, ಶಂಕರ್ ಇಂಗಳದಾಳ, ಶಿಕ್ಷಕರಾದ ಶಿವಕುಮಾರ ಹೊಂಬಳ, ದೊಡ್ಡಬಸನಗೌಡ ಇತರರಿದ್ದರು.

    ಕ್ರಿಯಾಶೀಲ ಹಾಗೂ ಸಮರ್ಪಣಾ ಮನೋಭಾವದ ಸ್ನೇಹಿತರ ತಂಡ ಇರುವುದರಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದರೆ ನಮ್ಮೆಲ್ಲರ ಶ್ರಮ ಸಾರ್ಥಕವಾಗುತ್ತದೆ.
    | ಸಿದ್ಧಲಿಂಗಪ್ಪ ಶ್ಯಾಗೋಟಿ, ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts