More

    ಸಕಾಲಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ

    ಯಲಬುರ್ಗಾ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಇಲ್ಲಿನ ಹಳೇ ಜಿಪಂ ಕಚೇರಿ ಆವರಣದಲ್ಲಿ ಶನಿವಾರ 2 ಕೋಟಿ ರೂ. ವೆಚ್ಚದಲ್ಲಿ ಪಪಂ ಹೊಸ ಕಚೇರಿ ಕಟ್ಟಡ ಹಾಗೂ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹಲವು ಯೋಜನೆ ಜಾರಿಗೆ ತಂದು ಪಟ್ಟಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಅಗತ್ಯ ಸೌಕರ್ಯಗಳ ಒದಗಿಸಲಾಗಿದೆ. ಹೊಸದಾಗಿ ಪಪಂ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಅಲ್ಲದೇ ಬೀದಿಬದಿ ವ್ಯಾಪಾರಸ್ಥರಿಗೆ ಮಾರುಕಟ್ಟೆ ಕಲ್ಪಿಸಲಾಗುವುದು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.

    ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಮಾತನಾಡಿ, ಪಪಂ ಕಟ್ಟಡಕ್ಕಾಗಿ ಎರಡು ಎಕರೆ ಭೂಮಿ ಪಿಡಬ್ಲುೃಡಿ ಇಲಾಖೆಯಿಂದ ಸಚಿವರು ಕೊಡಿಸಿದ್ದು, 2 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಇನ್ನೂ 50 ವಾಣಿಜ್ಯ ಮಳಿಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸುವಂತೆ ಸಚಿವರಿಗೆ ಮನವಿ ಮಾಡಿದರು.

    ಹೆಚ್ಚುವರಿ 3 ಕೋಟಿ ರೂ. ನೀಡಿ: ನೂತನವಾಗಿ ನಿರ್ಮಾಣವಾಗಲಿರುವ ಪಪಂ ಕಟ್ಟಡಕ್ಕೆ ಹೆಚ್ಚುವರಿಯಾಗಿ 3 ಕೋಟಿ ರೂ. ಅನುದಾನ ನೀಡಬೇಕು ಎಂದು ಸಚಿವ ಹಾಲಪ್ಪ ಆಚಾರ್‌ಗೆ ಪಪಂ ಕಾಂಗ್ರೆಸ್ ಸದಸ್ಯರು ಮನವಿ ಸಲ್ಲಿಸಿದರು.

    ಪಪಂ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಆಡಳಿತ ಮಂಡಳಿ ಇದ್ದಾಗ 3 ಕೋಟಿ ರೂ. ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಎರಡು ಕೋಟಿ ರೂ.ಗಳಲ್ಲಿ ಕಟ್ಟಡ ಮತ್ತು ಮಾರುಕಟ್ಟೆ ನಿರ್ಮಾಣ ಅಸಾಧ್ಯ. ಸಚಿವರು ಮುತುವರ್ಜಿ ವಹಿಸಿ ಹೆಚ್ಚುವರಿ 3 ಕೋಟಿ ರೂ. ಅನುದಾನ ನೀಡಬೇಕೆಂದು ಕಾಂಗ್ರೆಸ್ ಸದಸ್ಯರಾದ ರೇವಣಪ್ಪ ಹಿರೇಕುರುಬರ್, ನಂದಿತಾ ದಾನರಡ್ಡಿ, ರಿಯಾಜ್ ಅಹ್ಮದ್ ಖಾಜಿ, ಹನುಮಂತ ಭಜಂತ್ರಿಒತ್ತಾಯಿಸಿದರು.

    ಪಪಂ ಉಪಾಧ್ಯಕ್ಷೆ ಶಾಂತಾ ಮಾಟೂರು, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ಸದಸ್ಯರಾದ ವಿಜಯಲಕ್ಷ್ಮೀ ಸಿದ್ರಾಮೇಶ ಬೆಲೇರಿ, ಶ್ರೀದೇವಿ ದೊಡ್ಡಯ್ಯ ಗುರುವಿನ್, ವಸಂತ ಭಾವಿಮನಿ, ಬಸಲಿಂಗಪ್ಪ ಕೊತ್ತಲ್, ಅಶೋಕ ಅರಕೇರಿ, ಮುಖ್ಯಾಧಿಕಾರಿಗಳಾದ ಶಿವಕುಮಾರ ಕಟ್ಟಿಮನಿ, ಪ್ರಕಾಶ ಮಠದ, ಇಂಜಿನಿಯರ್ ಉಮೇಶ್ ಬೇಲಿ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ವಿಶ್ವನಾಥ ಮರಿಬಸಪ್ಪನವರ, ಕಳಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts