More

    ಸಂಗೀತದಿಂದ ಜೀವನಕ್ಕೆ ನೆಮ್ಮದಿ, ಜಿಪಂ ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ ಅನಿಸಿಕೆ

    ಯಲಬುರ್ಗಾ: ಸಂಗೀತಕ್ಕೆ ಭವರೋಗ ಕಳೆಯುವ ಶಕ್ತಿ ಇದೆ ಎಂದು ಜಿಪಂ ಮಾಜಿ ಸದಸ್ಯ ಸಿ.ಎಚ್.ಪೊಲೀಸ್ ಪಾಟೀಲ ಹೇಳಿದರು.

    ತಾಲೂಕಿನ ಕರಮುಡಿ ಗ್ರಾಮದಲ್ಲಿ ಕರ್ನಾಟಕ ಯುವಕ ಮಂಡಳಿ ಮಂಗಳವಾರ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಹಾಗೂ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೆಮ್ಮದಿ ಜೀವನ ನಡೆಸಲು ಪ್ರತಿಯೊಬ್ಬರೂ ಸಂಗೀತದ ಮೊರೆ ಹೋಗಬೇಕು ಎಂದರು.

    ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಜಿ.ಎಂ.ನಿಂಗೋಜಿ, ಮಹಿಬೂಬ್ ಪಾಷಾ, ಆನಂದ ಉಳ್ಳಾಗಡ್ಡಿ ಮಾತನಾಡಿ, ಅಂದಾಜು 1.50 ಲಕ್ಷ ರೂ. ವೆಚ್ಚದಲ್ಲಿ ಪುಟ್ಟರಾಜರ ಮೂರ್ತಿ ಮಾಡಿಸಿದ ದಳಪತಿ ಶರಣಪ್ಪಗೌಡ ಪೊಲೀಸ್ ಪಾಟೀಲ ದಂಪತಿ, ಗ್ರಿಲ್ ಮಾಡಿಸಿದ ಬಸವರಾಜ ರಾಂಪುರ ಹಾಗೂ ವಿಆರ್‌ಎಲ್ ಚಾಲಕರ ಬಳಗ ಮತ್ತು ಇನ್ನಿತರ ದಾನಿಗಳ ಕಾರ್ಯ ಶ್ಲಾಘನೀಯ ಎಂದರು.

    ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಗುಲಗಂಜಿಮಠದ ಶ್ರೀ ಗುರುಪಾದ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ, ಶರಣಬಸವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಪ್ರಮುಖರಾದ ಶಕುಂತಲಾ ಮಾಲಿಪಾಟೀಲ, ವೀರಬಸಪ್ಪ ಅರಳಿ, ಸಂಗಪ್ಪ ಬಂಡಿ, ಶರಣಪ್ಪಗೌಡ ಪೋ.ಪಾಟೀಲ, ಬಸವರಾಜ ರಾಂಪುರ, ಕಳಕಪ್ಪ ಕುರಿ, ವೀರಣ್ಣ ನಿಂಗೋಜಿ, ಭೀಮಪ್ಪ ಅವಳಿ, ಶಾಮೀದ್‌ಸಾಬ್ ಮುಲ್ಲಾ, ಗೌಡಪ್ಪ ಬಲಕುಂದಿ, ಬಸವರಾಜ ಉಳ್ಳಾಗಡ್ಡಿ, ಎಸ್.ಎಸ್.ಅರಳಿ, ವೀರಣ್ಣ ಉಳ್ಳಾಗಡ್ಡಿ ಸ.ಶರಣಪ್ಪ ಪಾಟೀಲ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts