More

    ಮಾನಸಿಕ, ದೈಹಿಕ ಸಮತೋಲನ ಅಗತ್ಯ- ತಾಪಂ ಇಒ ಸಂತೋಷ ಪಾಟೀಲ್ ಸಲಹೆ

    ಯಲಬುರ್ಗಾ: ಗ್ರಾಮೀಣ ಪರಂಪರೆ ಬಿಂಬಿಸುವ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು. ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ತಾಪಂ ಹಾಗೂ ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ಗ್ರಾಪಂ ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

    ಆಟೋಟಗಳಿಂದ ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಕ್ರೀಡೆಯಿಂದ ದೂರ ಉಳಿಯದೇ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು. ಬಿಇಒ ಪದ್ಮನಾಭ ಕರ್ಣಂ, ಸಂಸ್ಥೆಯ ಕಾರ್ಯದರ್ಶಿ ದ್ಯಾಮಣ್ಣ ಗೊಂದಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸೋಮಲಿಂಗಪ್ಪ ಕೊಳಜಿ ಅಧ್ಯಕ್ಷತೆ ವಹಿಸಿದ್ದರು.

    ಎಸ್ಡಿಎಂಸಿ ಅಧ್ಯಕ್ಷ ಭೀಮಣ್ಣ ಕೊಳಜಿ, ಸಂಸ್ಥೆಯ ಅಧ್ಯಕ್ಷ ಕೂಡ್ಲೆಪ್ಪ ಗೊಂದಿ, ಮುಖ್ಯಶಿಕ್ಷಕ ಗಣೇಶ ಪಾಂಚಾಳ, ಪಿಡಿಒ ಅಬ್ದುಲ್ ಗಫಾರ್, ಬಿಆರ್‌ಪಿ ಶಿವಪ್ಪ ಉಪ್ಪಾರ, ವೈದ್ಯಾಧಿಕಾರಿ ನೇತ್ರಾವತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts