More

    ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ಭಾರತದ ಮಹಿಳಾ ಕುಸ್ತಿ ಪಟುವಿಗೆ ಎದುರಾಯಿತು ಸಂಕಷ್ಟ..!

    ನವದೆಹಲಿ: ಭಾರತದ ಸ್ಟಾರ್ ರೆಸ್ಲರ್ ವಿನೇಶ್ ಪೋಗಟ್, ಟೋಕಿಯೊ ಒಲಿಂಪಿಕ್ಸ್ ವೇಳೆ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಭಾರತೀಯ ರೆಸ್ಲಿಂಗ್ ಫೆಡರೇಷನ್ (ಡಬ್ಲ್ಯುಎಫ್ ಐ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಜತೆಗೆ ಮತ್ತೋರ್ವ ರೆಸ್ಲರ್ ಸೋನಮ್ ಮಲಿಕ್‌ಗೂ ನೋಟಿಸ್ ಜಾರಿ ಮಾಡಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವಿನೇಶ್ ಪೋಗಟ್ ಕ್ವಾರ್ಟರ್ ಫೈನಲ್ ನಲ್ಲೇ ಮುಗ್ಗರಿಸಿದ್ದರು. ಮೂರು ಹಂತದಲ್ಲಿ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಪೋಗಟ್ ಅವರನ್ನು ಅಮಾನತುಗೊಳಿಸಿ ನೋಟಿಸ್ ನೀಡಿದ್ದು, ಆಗಸ್ಟ್ 16ರೊಳಗೆ ಉತ್ತರಿಸುವಂತೆ ಹೇಳಲಾಗಿದೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ ಹೀರೋಗಳಿಗೆ ಅದ್ಧೂರಿ ಸ್ವಾಗತ

    ಹಂಗೆರಿಯಿಂದ ಟೋಕಿಯೊಗೆ ನೇರವಾಗಿ ತೆರಳಿದ ವಿನೇಶ್ ಪೋಗಟ್ ಅಲ್ಲಿ ಕೋಚ್ ವೊಲ್ಲೆರ್ ಅಕೊಸ್ ಅವರಿಂದ ತರಬೇತಿ ಪಡೆದಿದ್ದರು. ಬಳಿಕ ಕ್ರೀಡಾಗ್ರಾಮದಲ್ಲಿ ಉಳಿಯದೆ, ಭಾರತದ ಮತ್ತೋರ್ವ ಸದಸ್ಯನಿಂದ ತರಬೇತಿ ಪಡೆದಿದ್ದರು. ತಂಡದ ಅಧಿಕೃತ ಪ್ರಾಯೋಜಕ ಸಂಸ್ಥೆಯ ಜೆರ್ಸಿ ಧರಿಸದೆ ನೈಕಿ ಜೆರ್ಸಿ ತೊಟ್ಟು ಸ್ಪರ್ಧಿಸಿದ್ದರು. ಇದು ಕೂಡ ಡಬ್ಲ್ಯುಎಫ್ ಐ ಕೆಂಗಣ್ಣಿಗೆ ಗುರಿಯಾಗಿತ್ತು. ಇದಕ್ಕೂ ಸೂಕ್ಷ್ಮವಾಗಿ ಗಮನಿಸಿದ ಡಬ್ಲ್ಯುಎಫ್ ಐ, ಇಂಥ ಅಶಿಸ್ತನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಾತ್ಕಾಲಿಕವಾಗಿ ವಿನೇಶ್ ಅವರನ್ನು ಅಮಾನತುಗೊಳಿಸಲಾಗಿದೆ. ರೆಸ್ಲಿಂಗ್ ಚಟುವಟಿಕೆಗಳಿಂದ ದೂರ ಇರಲು ಸೂಚಿಸಲಾಗಿದೆ. ಅಲ್ಲದೆ, ಡಬ್ಲ್ಯುಎಫ್ ಐ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ರಾಷ್ಟ್ರೀಯ ಅಥವಾ ದೇಶೀಯ ಟೂರ್ನಿಗಳಲ್ಲೂ ವಿನೇಶ್ ಸ್ಪರ್ಧಿಸುವಂತಿಲ್ಲ ಎಂದು ಡಬ್ಲ್ಯುಎಫ್ ಐ ಮೂಲಗಳು ತಿಳಿಸಿವೆ.

    ಕ್ರೀಡಾಗ್ರಾಮದಲ್ಲಿ ನೀಡಲಾಗಿದ್ದ ಕೊಠಡಿಯಲ್ಲಿ ಭಾರತದ ಇತರ ಮಹಿಳಾ ರೆಸ್ಲರ್‌ಗಳೊಂದಿಗೆ ಉಳಿಯಲು ಹಿಂದೇಟು ಹಾಕಿದ್ದರು. ಭಾರತದಿಂದ ಟೋಕಿಯೊಗೆ ಆಗಮಿಸಿದ ರೆಸ್ಲರ್‌ಗಳಿಂದ ಕೋವಿಡ್ ಹರಡಲಿದೆ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಅಲ್ಲದೆ, ಭಾರತೀಯ ರೆಸ್ಲರ್‌ಗಳೊಂದಿಗೆ ತರಬೇತಿ ಪಡೆಯಲು ಹಿಂದೇಟು ಹಾಕಿದ್ದರು. ಕೂಟಕ್ಕೆ ಮುನ್ನ ವಿನೇಶ್ ಪೋಗಟ್ ಪದಕ ಫೇವರಿಟ್ ಎನಿಸಿದ್ದರೂ ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts