More

    ಸಿಡಿಲು ಬಡಿದು ಯುವಕ ಸಾವು

    ಚಿಟಗುಪ್ಪ: ಸಿಡಿಲು ಬಡಿದು ಯುವಕ ಸಾವಿಗೀಡಾದ ಘಟನೆ ತಾಲೂಕಿನ ಇಟಗಾ ಗ್ರಾಮದ ಬಳಿ ಭಾನುವಾರ ನಡೆದಿದೆ.
    ಪಟ್ಟಣದ ಇನಾಯತ್ ಸೈಯದ್ ಅಲಿ ಮುದನಾಳವಾಲೆ (17) ಮೃತ ಯುವಕ. ಕೂಲಿ ಕೆಲಸಕ್ಕಾಗಿ ಇಟಗಾ ಗ್ರಾಮಕ್ಕೆ ತೆರಳಿ ಮರಳಿ ಬರುವಾಗ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದ್ದಾಗ ಮರದ ಕೆಳಗೆ ಆಶ್ರಯ ಪಡೆದಿದ್ದಾನೆ. ಈ ಸಮಯದಲ್ಲಿ ಸಿಡಿಲು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಇನಾಯತ್ಗೆ ತಕ್ಷಣ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಮನಾಬಾದ್ ಗೆ ಅಂಬುಲೆನ್ ನಲ್ಲಿ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಚಿಟಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts