More

    ಬ್ರಾಹ್ಮಣ ಸಂಘ ಜಿಲ್ಲಾಧ್ಯಕ್ಷರಾಗಿ ಕುಲಕರ್ಣಿ

    ಬೀದರ್: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬೀದರ್ ಜಿಲ್ಲಾ ಅಧ್ಯಕ್ಷರಾಗಿ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ, ಕಲ್ಯಾಣ ಕರ್ನಾಟಕ ಭಾಗದ ಖ್ಯಾತ ಶೈಕ್ಷಣಿಕ ಚಿಂತಕರೂ ಆಗಿರುವ ರಮೇಶ ಕುಲಕರ್ಣಿ(ರಮೇಶ ಸರ್) ನೇಮಕಗೊಂಡಿದ್ದಾರೆ.

    ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಜಿ.ಆರ್.ಪ್ರದೀಪ್ ಅವರು ರಮೇಶ ಕುಲಕರ್ಣಿ ಅವರಿಗೆ ಪತ್ರ ಬರೆದು ನೇಮಕ ಕುರಿತು ತಿಳಿಸಿದ್ದಾರೆ. ಕಳೆದ ಮೂರು ದಶಕಗಳಿಂದ ತಾವು ಸಮಾಜದ ಹಿತದಿಂದ ಶೃದ್ಧೆಯಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು,ಇದೀಗ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಘಟಕದ ಜವಾಬ್ದಾರಿ ವಹಿಸಿಕೊಂಡು ಸಮಾಜ ಸೇವಾ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತಾರಗೊಳಿಸುವಂತೆ ಸೂಚಿಸಿದ್ದಾರೆ.  

    ಬ್ರಾಹ್ಮಣ ಮಹಾಸಂಘವು ರಾಜ್ಯಾದ್ಯಂತ ಸಮಾಜದ ಬೇಕು-ಬೇಡಗಳಿಗೆ ಸ್ಪಂದಿಸುವ ಜೊತೆಯಲ್ಲಿ ಸಮಾಜದ ಅಭಿವೃದ್ಧಿ, ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಹಾಗೂ ಸಮಾಜದ ಸಂಘಟನೆ ಬಲಪಡಿಸುವ ಕಾರ್ಯ ಮಾಡುತ್ತಿದೆ. ಬೀದರ್ ಜಿಲ್ಲೆಯಲ್ಲೂ ತಾವು ಸಂಘದ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ, ಸಂಘಟನೆ ಬಲಪಡಿಸುವ ಕೆಲಸ ಮಾಡಬೇಕು. ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಿಸಬೇಕು. ತಾಲೂಕು ಘಟಕಗಳನ್ನು ಸಹ ರಚಿಸಿ ಕಾರ್ಯೋನ್ಮುಖರಾಗಬೇಕು. ಸಮಾಜದ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಕ್ಕೆ ಸೇರಿಸಲು ಆದ್ಯತೆ ನೀಡಬೇಕೆಂದು ತಿಳಿಸಿದ್ದಾರೆ.

    ರಮೇಶ ಕುಲಕರ್ಣಿ ಮೂಲತಃ ಭಾಲ್ಕಿ ತಾಲೂಕಿನ ಹಲಬರ್ಗಾ ನಿವಾಸಿ. ಕಳೆದ ನಾಲ್ಕು ದಶಕಗಳಿಂದ ಬೀದರ್ ನಗರದಲ್ಲಿಯೇ ವಾಸವಾಗಿದ್ದಾರೆ. ಇವರು ಈ ಭಾಗದಲ್ಲಿ ಗಣಿತ ಬೋಧನೆ ಮಾಡುವಲ್ಲಿ ಪರಿಣಿತರಾಗಿದ್ದಾರೆ. ಮೂರೂವರೆ ದಶಕದಿಂದ ಗಣಿತ ಶಿಕ್ಷಣದ ಮೂಲಕ ಸಹಸ್ರಾರು ಶಿಷ್ಯವೃಂದ ಹೊಂದಿದ್ದಾರೆ. 2008ರಲ್ಲಿ ಇಲ್ಲಿ ಮಾತೆ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಸದ್ಯಕ್ಕೆ ಸಾಯಿಜ್ಞಾನ ಸಿಬಿಎಸ್‍ಇ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಳ ಹಾಗೂ ಉತ್ತಮ ವ್ಯಕ್ತಿತ್ವವುಳ್ಳ ಇವರು ಜಿಲ್ಲೆಯಲ್ಲಿ ರಮೇಶ ಸರ್ ಎಂದೇ ಖ್ಯಾತಿ ಪಡೆದಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುವ ಜೊತೆಗೆ ಬ್ರಾಹ್ಮಣ ಸಮಾಜದಲ್ಲೂ ತಮ್ಮನ್ನು ಸಕ್ರಿಯ ತೊಡಗಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts