More

    ಕಾರ್ಮಿಕರ ಸಮಸ್ಯೆ ಸರಿಪಡಿಸಿ

    ಕೊಪ್ಪಳ: ಅರ್ಜಿ ಸಲ್ಲಿಕೆಗೆ ಇರುವ ತೊಡಕುಗಳ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಹಲವು ಲೋಪಗಳಿವೆ. ಈ ಹಿಂದೆ ಅರ್ಜಿ ಸಲ್ಲಿಸಿದ ಅನೇಕರಿಗೆ ಈವರೆಗೂ ಸಹಾಯಧನ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

    ವೈದ್ಯಕೀಯ ಮರುಪಾವತಿ ಯೋಜನೆ ಕೈ ಬಿಡದ ಕಾರಣ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಅನರ್ಹರು ಕಾರ್ಮಿಕ ಕಾರ್ಡ್ ಪಡೆಯುತ್ತಿದ್ದು, ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಹೊಸ ತಂತ್ರಾಂಶ ಬಗ್ಗೆ ಕಾರ್ಮಿಕ ಸಂಘಟನೆಗಳಿಗೆ ತರಬೇತಿ ನೀಡಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ಯೋಜನೆ ಇದ್ದರೂ ಅನುಷ್ಠಾನವಾಗುತ್ತಿಲ್ಲ ಎಂದು ಆರೋಪಿಸಿದರು.

    ಶೈಕ್ಷಣಿಕ ಸಹಾಯಧನ ಪಡೆಯಲು ಇರುವ ತೊಂದರೆ ಸರಿಪಡಿಸಿ ಅರ್ಜಿ ವಿಲೇವಾರಿ ಮಾಡಬೇಕು. ವೈದ್ಯಕೀಯ ಮರುಪಾವತಿ ಯೋಜನೆ ಕೈ ಬಿಟ್ಟು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. ಅನರ್ಹರಿಗೆ ಕಾರ್ಮಿಕ ಕಾರ್ಡ್ ವಿತರಿಸುತ್ತಿರುವ ಸಿಎಸ್‌ಸಿ ಸೆಂಟರ್‌ಗಳಿಗೆ ಬ್ರೇಕ್ ಹಾಕಬೇಕು. ಕಾರ್ಮಿಕ ಸಂಘಟನೆಗಳಿಗೆ ಹೊಸ ತಂತ್ರಾಂಶದ ಕುರಿತು ತರಬೇತಿ ನೀಡಬೇಕು. ಮನೆ ನಿರ್ಮಾಣಕ್ಕೆ ಸಹಾಯಧನ ವಿತರಣೆ ಮಾಡಬೇಕು. ಮಂಡಳಿಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.

    ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಖಾಸೀಂ ಸರ್ದಾರ್, ಪದಾಧಿಕಾರಿಗಳಾದ ಹನುಮೇಶ ಭೋವಿ, ಇಸ್ಮಾಯಿಲ್ ಇಟಗಿ, ರಂಗಪ್ಪ ದೊರೆ, ಮೆಹಬೂಬ್ ಧಪೇದಾರ, ಉಮೇಶ ಅಗಳಕೇರಾ, ಅಮೀರ್ ಖಾನ್, ಅಲ್ಲಾಬೀ, ಸಾವಿತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts