More

    ಇಳಕಲ್ಲದಲ್ಲಿ ಗಮನ ಸೆಳೆದ ಮಹಿಳೆಯರ ಪಥಸಂಚಲನ

    ಇಳಕಲ್ಲ: ನಗರದಲ್ಲಿ ಪ್ರಥಮ ಬಾರಿಗೆ ಹಿಂದು ಸೇವಿಕಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳೆಯರ ರಾಷ್ಟ್ರಾಭಿಮಾನದ ಪಥ ಸಂಚಲನ ಸಂಭ್ರಮದಿಂದ ನಡೆಯಿತು.

    ಮಹಿಳೆಯರು ಶ್ವೇತ ವಸ್ತ್ರಧಾರಿಗಳಾಗಿ ಕೈಯಲ್ಲಿ ಲಾಠಿ ಹಿಡಿದು ಶಿಸ್ತಿನ ಸಿಪಾಯಿಗಳಂತೆ ಪಥ ಸಂಚಲನದಲ್ಲಿ ಸಾಗಿದರು. ಅವರಿಗೆ ಮಾರ್ಗದುದ್ದಕ್ಕೂ ಜನರು ಹೂಮಳೆ ಸುರಿಸಿ ಸ್ವಾಗತಿಸಿದರು. ಅಲ್ಲಲ್ಲಿ ಮಕ್ಕಳು ರಾಷ್ಟ್ರ ನಾಯಕರ ವೇಷ ಧರಿಸಿ ರಾಷ್ಟ್ರಾಭಿಮಾನ ಮೆರೆದರು.

    ವೀರಾಂಜನೇಯ ದೇವಸ್ಥಾನದಿಂದ ಆರಂಭವಾದ ಪಥಸಂಚಲನ ನೀಲಕಂಠೇಶ್ವರ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಕೊಪ್ಪರದಪೇಟೆ ಬನಶಂಕರಿ ದೇವಸ್ಥಾನ, ಶ್ರೀರಾಮ ಮಂದಿರ, ತರಕಾರಿ ಮಾರುಕಟ್ಟೆ, ಬಸವನಗುಡಿ, ತುಳಸಿ ಆಸ್ಪತ್ರೆ, ಸಾಲಪೇಟೆ, ಕಂಠಿ ವೃತ್ತ, ಗ್ರಾಮ ಚಾವಡಿ, ಗಾಂಧಿ ಚೌಕ, ಜಡೇ ಶಂಕರಲಿಂಗ ದೇವಸ್ಥಾನ, ಕೋಳಿಪೇಟೆ, ಎಸಿಒ ಶಾಲೆ, ವಿಜಯ ಮಹಾಂತೇಶ ಗದ್ದುಗೆ ಮಾರ್ಗವಾಗಿ ಬಸವ ಪಬ್ಲಿಕ್ ಶಾಲೆ ಆವರಣ ತಲುಪಿತು. ಅಲ್ಲಿ ಸೇವಿಕಾ ಸಮಿತಿ ಸದಸ್ಯೆಯರು ಹಲವಾರು ಕವಾಯತುಗಳನ್ನು ನಡೆಸಿ ನೆರೆದವರನ್ನು ರೋಮಾಂಚನಗೊಳಿಸಿದರು. ನಂತರ ಸಾರ್ವಜನಿಕರ ಸಭೆ ನಡೆಯಿತು.

    ಪಥ ಸಂಚಲನ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts