More

    ಮುದ್ರಾ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ 30 ಕೋಟಿ ರೂ. ಸಾಲ

    ಬೆಂಗಳೂರು: ಕಳೆದೊಂದು ದಶಕದಲ್ಲಿ ಉದ್ಯಮಶೀಲತೆ ಮತ್ತು ಸುಲಭವಾದ ಜೀವನಶೈಲಿ ಮೂಲಕ ಮಹಿಳೆಯರ ಸಬಲೀಕರಣ ವೇಗ ಪಡೆದುಕೊಂಡಿದ್ದು, ಮುದ್ರಾ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ 30 ಕೋಟಿ ರೂ. ಸಾಲ ನೀಡಲಾಗಿದೆ ಎಂದು ನಿರ್ಮಲಾ ಹೇಳಿದ್ದಾರೆ.

    ಹತ್ತು ವರ್ಷಗಳ ಅವಧಿಯಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ ಶೇ.28 ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಕೋರ್ಸ್‌ಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಶೇ.43 ದಾಖಲಾತಿ ಹೊಂದಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಪ್ರಸ್ತಾಪಿಸಿದ್ದಾರೆ.

    ಉದ್ಯಮಶೀಲತೆ, ಸುಲಭ ಜೀವನ ಮತ್ತು ಘನತೆಯ ಮೂಲಕ ಮಹಿಳೆಯರ ಸಬಲೀಕರಣ ಈ ಹತ್ತು ವರ್ಷಗಳಲ್ಲಿ ವೇಗ ಪಡೆದುಕೊಂಡಿದ್ದು, ಈ ಎಲ್ಲ ಕ್ರಮಗಳು ಉದ್ಯೋಗಿಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರತಿಫಲಿಸುತ್ತದೆ ಎಂದಿದ್ದಾರೆ.

    ತ್ರಿವಳಿ ತಲಾಕ್: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನ ಮೀಸಲಿಡುವುದು, ತ್ರಿವಳಿ ತಲಾಕ್ ಅನ್ನು ಕಾನೂನುಬಾಹಿರಗೊಳಿಸುವುದು, ಗ್ರಾಮೀಣ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೇ.70 ಕ್ಕೂ ಹೆಚ್ಚು ಮನೆಗಳನ್ನು ಮಹಿಳೆಯರಿಗೆ ಏಕಮಾತ್ರ ಅಥವಾ ಜಂಟಿ ಮಾಲೀಕರಾಗಿ ನೀಡುವುದು ಅವರ ಘನತೆಯನ್ನು ಹೆಚ್ಚಿಸಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts