More

    ಮಹಿಳೆಯರ ತಲ್ಲಣಗಳೇ ಮಹಿಳಾ ಸಾಹಿತ್ಯ

    ಕೊಪ್ಪಳ: ಮಹಿಳೆಯರ ಆತಂಕ, ತಲ್ಲಣ, ಶೋಷಣೆಗಳ ಅನಾವರಣವೇ ಮಹಿಳಾ ಸಾಹಿತ್ಯ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಅಸಮಾನತೆಯಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಡಾ.ಪಾರ್ವತಿ ಕನಕಗಿರಿ ಅಭಿಪ್ರಾಯಪಟ್ಟರು.

    ಇದನ್ನೂ ಓದಿ:http://ಮಹಿಳೆಯರ ತಲ್ಲಣಗಳೇ ಮಹಿಳಾ ಸಾಹಿತ್ಯ

    ತಾಲೂಕಿನ ಭಾಗ್ಯನಗರದಲ್ಲಿ ಶಕ್ತಿಶಾರದೆ ಮೇಳ ಮತ್ತು ಬೆರಗು ಪ್ರಕಾಶನದಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ಮಹಿಳೆ ವಿಷಯ ಕುರಿತು ಮಾತನಾಡಿದರು.

    ಹೆಣ್ಣು ಮಗಳು, ಗೆಳತಿ, ಪ್ರೇಯಸಿ, ತಾಯಿಯಾಗಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ. ಇಂದಿಗೂ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆತಂಕ.

    ಮಹಿಳೆ ಕೇಂದ್ರೀಕೃತವಾಗಿ ರಚಿಸಿದ ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಶೋಷಣೆಯನ್ನೇ ಪ್ರಧಾನವಾಗಿ ಚಿತ್ರಿಸಲಾಗಿದೆ. ಇದಕ್ಕೆ ಪುರಾಣಗಳೂ ಹೊರತಾಗಿಲ್ಲ ಎಂದರು. ಪ್ರಾಧ್ಯಾಪಕ ಡಾ.ಬಸವರಾಜ ಪೂಜಾರ ಮಾತನಾಡಿ, ಮಹಿಳೆಯರಲ್ಲಿ ಅನೇಕ ಸಂವೇದನಗಳಿವೆ.

    ಆತಂಕ ಮತ್ತು ತಲ್ಲಣಗಳಿವೆ. ಅವುಗಳನ್ನು ಸಂವಹನ ಮಾಧ್ಯಮಗಳ ಮೂಲಕ ಹೊರಹಾಕಬೇಕು ಎಂದರು. ಸಂಘಟಕ ಡಿ.ಎಂ.ಬಡಿಗೇರ, ಸಿದ್ಧಲಿಂಗಪ್ಪ ಕೊಟ್ನೆಕಲ್, ಪವನಕುಮಾರ ಕಮ್ಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts