More

    ಹರಿಣಗಳ ನಾಡಲ್ಲಿ ಕರೊನಾ ಹಾವಳಿ; ಟೀಮ್ ಇಂಡಿಯಾದ ದ. ಆಫ್ರಿಕಾ ಪ್ರವಾಸಕ್ಕೆ ಆತಂಕ!

    ನವದೆಹಲಿ: ಭಾರತ ತಂಡದ ಮುಂಬರುವ ಪ್ರವಾಸಕ್ಕೆ ಪೂರ್ವಭಾವಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ಕರೊನಾ ವೈರಸ್ ಪ್ರಕರಣಗಳು ಏರಿಕೆಯಾಗುತ್ತಿರುವುದು ಹೊಸ ಆತಂಕವನ್ನು ಸೃಷ್ಟಿಸಿದೆ. ಸದ್ಯಕ್ಕೆ ಪ್ರವಾಸ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಸಿಸಿಐ ತಿಳಿಸಿದ್ದರೂ, ಆಟಗಾರರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳು ಎದುರಾಗುವ ಅಥವಾ ಪ್ರವಾಸವೇ ರದ್ದುಗೊಳ್ಳುವ ಭೀತಿ ಎದುರಾಗಿದೆ.

    ಡಿಸೆಂಬರ್ 17ರಿಂದ ನಡೆಯಲಿರುವ ಸುಮಾರು 7 ವಾರಗಳ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಲಿದೆ. ಜೊಹಾನ್ಸ್‌ಬರ್ಗ್, ಸೆಂಚುರಿಯನ್, ಪಾರ್ಲ್ ಮತ್ತು ಕೇಪ್‌ಟೌನ್‌ನಲ್ಲಿ ಈ ಪಂದ್ಯಗಳು ನಡೆಯಲಿವೆ. ಈ ಪೈಕಿ ದಕ್ಷಿಣ ಆಫ್ರಿಕಾದ ಉತ್ತರದಲ್ಲಿರುವ ನಗರಗಳಾದ ಜೊಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾದಲ್ಲಿ (ಸೆಂಚುರಿಯನ್ ಸಮೀಪ) ಹೊಸ ರೂಪಾಂತರಿ ಬಿ.1.1.529 ವೈರಸ್ ಪ್ರಕರಣಗಳು ಭಾರಿ ಏರಿಕೆ ಕಂಡಿವೆ. ಈ ಹೊಸ ವೈರಸ್ ಎದುರು ಲಸಿಕೆ ಪರಿಣಾಮಕಾರಿ ಎನಿಸಿಲ್ಲ, ಇದರ ಹರಡುವಿಕೆಯೂ ವೇಗವಾಗಿದೆ ಮತ್ತು ಲಕ್ಷಣಗಳೂ ಅತ್ಯಂತ ಗಂಭೀರವಾಗಿವೆ.

    ಭಾರತ ತಂಡ ಕಿವೀಸ್ ವಿರುದ್ಧ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಡಿಸೆಂಬರ್ 8 ಅಥವಾ 9ರಂದು ಮುಂಬೈನಿಂದ ಜೊಹಾನ್ಸ್‌ಬರ್ಗ್‌ಗೆ ಬಾಡಿಗೆ ವಿಮಾನದಲ್ಲಿ ತೆರಳಲಿದೆ. ಸದ್ಯಕ್ಕೆ ತಂಡಕ್ಕೆ ಯಾವುದೇ ಹಾರ್ಡ್ ಕ್ವಾರಂಟೈನ್ ನಿಬಂಧನೆಗಳಿಲ್ಲ. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಎ ತಂಡಕ್ಕೂ ಯಾವುದೇ ಕ್ವಾರಂಟೈನ್ ಇರಲಿಲ್ಲ. ಆದರೆ ತಂಡದ ಪ್ರವಾಸದ ವೇಳೆ ಪ್ರಕರಣಗಳು ಇನ್ನಷ್ಟು ಏರಿಕೆಯಾದರೆ 3-4 ದಿನಗಳ ಹಾರ್ಡ್ ಕ್ವಾರಂಟೈನ್ ಎದುರಾಗುವ ಸಾಧ್ಯತೆಗಳಿವೆ.
    ಹಾಲಿ ಭಾರತ ಎ ತಂಡದ ಸರಣಿಯ ಮೇಲೆ ಕರೊನಾ ಪ್ರಕರಣಗಳ ಏರಿಕೆ ಯಾವುದೇ ಪರಿಣಾಮ ಬೀರಿಲ್ಲ. ಯಾಕೆಂದರೆ ಈ ಸರಣಿ ಬ್ಲೋಮ್‌ಫೌಂಟೇನ್‌ನಲ್ಲಿ ನಡೆಯುತ್ತಿದ್ದು, ಇದು ದಕ್ಷಿಣ ಆಫ್ರಿಕಾದ ದಕ್ಷಿಣ ಭಾಗದಲ್ಲಿದೆ. ಸದ್ಯ ದೇಶದ ಉತ್ತರ ಭಾಗದಲ್ಲಿ ಮಾತ್ರ ಪ್ರಕರಣಗಳು ಏರಿಕೆಯಾಗಿವೆ.

    ನೆದರ್ಲೆಂಡ್ಸ್ ತಂಡ ವಾಪಸ್
    ಮೂರು ಏಕದಿನ ಪಂದ್ಯಗಳ ಸರಣಿ ಆಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ನೆದರ್ಲೆಂಡ್ಸ್ ಕ್ರಿಕೆಟ್ ತಂಡ ಕರೊನಾ ಭೀತಿಯಿಂದ ಪ್ರವಾಸ ರದ್ದುಗೊಳಿಸಿದೆ. ಶುಕ್ರವಾರ ಸೆಂಚುರಿಯನ್‌ನಲ್ಲಿ ಮೊದಲ ಏಕದಿನ ಪಂದ್ಯವಾಡಿದ ಬೆನ್ನಲ್ಲೇ ತವರಿಗೆ ಮರಳಲು ನೆದರ್ಲೆಂಡ್ಸ್ ನಿರ್ಧರಿಸಿದೆ. ಇದು ಭಾರತ ಸಹಿತ ಇತರ ತಂಡಗಳೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ಭಯ ಪಡುವಂತೆ ಮಾಡಿದೆ.

    ಕಾನ್ಪುರ ಟೆಸ್ಟ್‌ನಲ್ಲಿ ತಂದೆಯ ಕನಸು ನನಸಾಗಿಸಿದ ಶ್ರೇಯಸ್ ಅಯ್ಯರ್

    ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಸೆಂಚುರಿ; ಬಾಲ್ಯದ ಕೋಚ್ ಹಾದಿಯಲ್ಲೇ ಸಾಗಿದ ಮುಂಬೈ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts