More

    ಜಾರಿಯಾಗುವುದೇ ನೋಟಿಸ್​?

    ವಿಕ್ರಮ ನಾಡಿಗೇರ ಧಾರವಾಡ
    ವಾಣಿಜ್ಯ, ಸರ್ಕಾರಿ ಕಚೇರಿ ಸೇರಿ ಎಲ್ಲ ಬಗೆಯ ಉದ್ಯಮಗಳು, ಸಂಸ್ಥೆಗಳ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬ ಸಂಶಯ ಜನರಲ್ಲಿ ಮೂಡಿದೆ.
    ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಭೆಯಲ್ಲಿ ಸರ್ಕಾರ ಅಥವಾ ಸ್ಥಳಿಯ ಪ್ರಾಧಿಕಾರಗಳ ಅನುಮೋದನೆ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ತಮ್ಮ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಪ್ರದಶಿರ್ಸಬೇಕು ಎಂದು ಸೂಚಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿರುವ ಜಿಮಖಾನಾ ಕ್ಲಬ್​ ನಾಮಫಲಕ ಇನ್ನೂ ಆಂಗ್ಲ ಭಾಷೆಯಲ್ಲೇ ರಾರಾಜಿಸುತ್ತಿದೆ. ಹೀಗಾಗಿ ಈ ಆದೇಶ ಎಷ್ಟರ ಮಟ್ಟಿಗೆ ಪಾಲನೆ ಆಗಲಿದೆ ಎಂಬ ಸಂದೇಹ ಮೂಡಿದೆ.
    ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್​ಗಳು, ಸಮಾಲೋಚನ ಕೇಂದ್ರಗಳು, ಪ್ರಯೋಗಾಲಯಗಳು, ಮನೋರಂಜನ ಕೇಂದ್ರಗಳು, ಹೋಟೆಲ್​ಗಳು, ಶಿಕ್ಷಣ ಸಂಸ್ಥೆಗಳು, ಅಂಗಡಿ, ಬ್ಯಾಂಕ್​, ಜಿಲ್ಲೆಯ ರಸ್ತೆಗಳು, ಬಡಾವಣೆ ಹೆಸರು ಸೇರಿ ಎಲ್ಲ ಹಂತದ ಫಲಕಗಳಲ್ಲಿ ಕನ್ನಡ ಅಳಡಿಸಬೇಕು.
    ಸರ್ಕಾರದ ಆದೇಶದಂತೆ ನಾಮಲಕ ಬದಲಾಯಿಸಲು ಮಾ. 20 ಕೊನೇ ದಿನ. ಈ ಅವಧಿಯಲ್ಲಿ ನಾಮಫಲಕ ಬದಲಾಯಿಸದ ಸಂಸ್ಥೆಗಳಿಗೆ ನೋಟಿಸ್​ ಜಾರಿ ಮಾಡಲಾಗುತ್ತಿದೆ. ಈ ಆದೇಶ ಪಾಲನೆಗೆ ಇನ್ನು 2 ದಿನ ಮಾತ್ರ ಬಾಕಿ ಇದ್ದರೂ ಜಿಮಖಾನಾ, ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೂ ಆದೇಶ ಪಾಲನೆಗೆ ಅಷ್ಟೊಂದು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಇವರಿಗೂ ನೋಟಿಸ್​ ಜಾರಿ ಆಗುವುದೇ? ಅಥವಾ ಆದೇಶ ಪಾಲನೆ ಹೆಸರಿನಲ್ಲಿ ಖಾಸಗಿಯವರ ಮೇಲೆ ಮಾತ್ರ ದಂಡ ಪ್ರಯೋಗವೇ? ಎಂಬ ಗುಸು ಗುಸು ಶುರುವಾಗಿದೆ.
    ಇಂತಹ ಗಾಸಿಪ್​ಗಳಿಗೆ ಕಾರಣ ನೀಡದೆ, ಆದೇಶ ಪಾಲನೆ ಮಾಡದ ಎಲ್ಲರೂ ಒಂದೇ ಎಂದು ಅರಿತು ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
    ನೋಟಿಸ್​ ಬಳಿಕ ಬೀಳಲಿದೆ ದಂಡ:: ನಾಮಫಲಕಗಳಲ್ಲಿ ಕನ್ನಡ ಅಳವಡಿಸಲು ಮಾ. 20 ಕೊನೇ ದಿನ. ಅದಾದ ಬಳಿಕವೂ ನಾಮಲಕ ಬದಲಾಯಿಸದವರಿಗೆ ಸಂಬಂಧಿಸಿದ ಪ್ರಾಧಿಕಾರದಿಂದ ಕಾರಣ ಕೇಳಿ ನೋಟಿಸ್​ ಜಾರಿ ಆಗುತ್ತದೆ. ಇದಾದ 15 ದಿನಗಳಲ್ಲಿ ಕನ್ನಡ ಅಳವಡಿಕೆ ಮಾಡದಿದ್ದರೆ ಮೊದಲ ಹಂತವಾಗಿ 5 ಸಾವಿರ ರೂ. ಜುಲ್ಮಾನೆ ಭರಿಸಬೇಕು. ಅದಕ್ಕೂ ಕ್ಯಾರೆ ಎನ್ನದಿದ್ದರೆ 2ನೇ ಹಂತದಲ್ಲಿ 10 ಸಾವಿರ ರೂ. ಹಾಗೂ ಅಂತಿಮವಾಗಿ 20 ಸಾವಿರ ರೂ. ದಂಡ ವಿಧಿಸಲಾಗುವುದು. ಇಷ್ಟೆಲ್ಲ ಪ್ರಯೋಗಗಳ ಬಳಿಕವೂ ಕನ್ನಡ ಅಳವಡಿಸದಿದ್ದರೆ ಲೈಸನ್ಸ್​ ರದ್ದತಿಗೆ ಕ್ರಮವಾಗಲಿದೆ.


    ನಾಮ ಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ವಿಚಾರವಾಗಿ ಎಲ್ಲ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ಇದಲ್ಲದೆ ಅಧಿಕಾರಿಗಳು ಪರಿಶೀಲನೆ ಸಹ ನಡೆಸಿದ್ದಾರೆ. ಆದೇಶ ಪಾಲನೆಗೆ ಮಾ. 20 ಕೊನೇ ದಿನ. ನಿಗದಿತ ಅವಧಿಯಲ್ಲಿ ಫಲಕ ಬದಲಾಯಿಸದಿದ್ದರೆ ಸಂಬಂಧಪಟ್ಟ ಪ್ರಾಧಿಕಾರದವರು ನೋಟಿಸ್​ ಜಾರಿ ಮಾಡುತ್ತಾರೆ. ಇದಾದ ಬಳಿಕವೂ ಬದಲಾವಣೆ ಮಾಡದಿದ್ದರೆ ದಂಡ ವಿಧಿಸಲಾಗುವುದು.
    ಕುಮಾರ ಬೆಕ್ಕೇರಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts