More

    ಮಹಾರಾಷ್ಟ್ರದಲ್ಲಿ ಎನ್​ಆರ್​​ಸಿ​ ಅನುಷ್ಠಾನ ಸಾಧ್ಯವೇ ಇಲ್ಲ, ಆದರೆ ಸಿಎಎ ಬೆಂಬಲಿಸುತ್ತೇನೆ: ಮುಖ್ಯಮಂತ್ರಿ ಉದ್ಧವ್​ ಠಾಕ್ರೆ

    ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ(ಎನ್​ಆರ್​ಸಿ) ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹೇಳಿದ್ದಾರೆ.

    ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಹಲವು ರಾಜ್ಯಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈಗ ಮಹಾರಾಷ್ಟ್ರ ಕೂಡ ಅದೇ ಸಾಲಿಗೆ ಸೇರಿದೆ.

    ಇಂದು ಉದ್ಧವ್ ಠಾಕ್ರೆಯವರು ಸಂದರ್ಶನವೊಂದರಲ್ಲಿ ಮಾತನಾಡಿದ ವಿಡಿಯೋದ ಪ್ರೋಮೋವೊಂದು ಬಿಡುಗಡೆಯಾಗಿದ್ದು ಅದರಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಮಹಾರಾಷ್ಟ್ರದಲ್ಲಿ ಅನುಷ್ಠಾನಕ್ಕೆ ತರುವುದಿಲ್ಲ ಎಂದು ಹೇಳಿದ್ದನ್ನು ಕೇಳಬಹುದಾಗಿದೆ. ಈ ಸಂದರ್ಶನ ಮಾಡಿದ್ದು ಶಿವಸೇನಾ ಮುಖಂಡ ಹಾಗೂ ಸಾಮ್ನಾ ಪತ್ರಿಕೆಯ ಎಡಿಟರ್​ ಸಂಜಯ್​ ರಾವತ್​.

    ತಮ್ಮ ಪೌರತ್ವವನ್ನು ಸಾಬೀತುಪಡಿಸುವುದು ಹಿಂದು ಮತ್ತು ಮುಸ್ಲಿಂ ಇಬ್ಬರಿಗೂ ಕಷ್ಟದ ಕೆಲಸ. ನಮ್ಮ ರಾಜ್ಯದಲ್ಲಿ ಯಾರೂ ಅಂತಹ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಲು ನಾನು ಬಿಡುವುದಿಲ್ಲ. ಹಾಗಾಗಿ ಎನ್​ಆರ್​ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

    ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಯಾರ ಪೌರತ್ವವನ್ನೂ ಕಸಿದುಕೊಳ್ಳುತ್ತಿಲ್ಲ. ದೇಶದಿಂದ ಯಾರನ್ನೂ ಹೊರಹಾಕುತ್ತಿಲ್ಲ. ಹಾಗಾಗಿ ನಾನು ಅದಕ್ಕೆ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಸಂಸತ್ತಿನಲ್ಲೂ ಸಿಎಬಿ ಪಾಸ್​ ಆಗುವಾಗ ಶಿವಸೇನೆ ವೋಟು ಹಾಕಿತ್ತು. ಆದರೆ ಅದರ ಮೈತ್ರಿ ಪಕ್ಷ ಕಾಂಗ್ರೆಸ್​ ವಿರೋಧಿಸಿತ್ತು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts