More

    ಕಲಘಟಗಿ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಿಂದ ರಾಜೀನಾಮೆ; ಬಿಜೆಪಿ ಸೇರ್ಪಡೆ ಬಗ್ಗೆ ಹೇಳಿದ್ದೇನು?

    ಹುಬ್ಬಳ್ಳಿ: ಇದೀಗ ಕಲಘಟಗಿ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ಪಕ್ಷದ ನಡೆಗೆ ಬೇಸತ್ತಿದ್ದು ರಾಜೀನಾಮೆ ನೀಡಲಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ಟಿಕೆಟ್​ ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿಗೆ ಕಾಂಗ್ರೆಸ್​ ಟಿಕೆಟ್ ನೀಡದೇ ಇದ್ದು ಇದರಿಂದಾಗಿ ದುಃಖಿತರಾಗಿದ್ದಾರೆ. ಈ ಸಂದರ್ಭ ದಿಗ್ವಿಜಯ ಚ್ಯಾನಲ್​ ಜತೆ ಮಾತನಾಡಿದ್ದಾರೆ.

    ಕಾಂಗ್ರೆಸ್ ನಡೆಗೆ ಬೇಸತ್ತ ನಾಗರಾಜ ಛಬ್ಬಿ

    ಪಕ್ಷದಿಂದ ಟಿಕೆಟ್​ ಸಿಗದೇ ಇದರಿಂದಾಗಿ ನೊಂದಿರುವ ನಾಗರಾಜ್ ಛಬ್ಬಿ “ಕಾಂಗ್ರೆಸ್ ಪಕ್ಷದ ನಡೆಯಿಂದಾಗಿ ತುಂಬಾ ನೋವಾಗಿದೆ. ಪಕ್ಷದ ನಡೆಗೆ ಬೇಸತ್ತು ಕಾಂಗ್ರೆಸ್ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ನನ್ನ ನಿಷ್ಠೆಯನ್ನು ಪಕ್ಷದ ಮುಖಂಡರು ಗುರುತಿಸಿಲಿಲ್ಲ. ನನಗೆ ಮನ್ನಣೆ ‌ನೀಡಲಿಲ್ಲ” ಎಂದು ಹೇಳಿದ್ದಾರೆ.

    ಛಬ್ಬಿ ಬಿಜೆಪಿ ಸೇರುತ್ತಾರಾ?

    ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಪತ್ರ ರವಾನಿಸುವುದಾಗಿ ಛಬ್ಬಿ ಹೇಳಿದ್ದು ದಿಗ್ವಿಜಯ ನ್ಯೂಸ್ ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಬಿಜೆಪಿಗೆ ಸೇರುತ್ತಾರಾ ಎಂದು ಪ್ರಶ್ನಿಸಿದಾಗ “ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಎರಡು ಮೂರು ದಿನಗಳಲ್ಲಿ ತಿಳಿಸಲಿದ್ದೇನೆ. ಸದ್ಯ ಯಾವುದೇ ಅಂತಹ ವಿಚಾರವಿಲ್ಲ ಎಲ್ಲರ ಅಭಿಪ್ರಾಯ ತೆಗದುಕೊಳ್ಳುವೆ. ಟಿಕೆಟ್ ಕೊಡುವವರು ಭರವಸೆ ನೀಡದ್ದರು ಹೀಗಾಗಿ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದೆ. ಆದರೆ ಅ ಭರವಸೆಯನ್ನ ಹುಸಿ ಮಾಡಿದ್ದಾರೆ. ಅನಿವಾರ್ಯವಾಗಿ ಪಕ್ಷ ಬಿಡಬೇಕಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯೋದಿಲ್ಲ. ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ನನ್ನ ಜೊತೆ ನನ್ನ ಕೆಲ ಬೆಂಬಲಿಗರೂ ಸಹ ಪಕ್ಷ ತೊರೆಯಲಿದ್ದಾರೆ” ಎಂದಿದ್ದು ಬಿಜೆಪಿ ಸೇರ್ಪಡೆ ಬಗ್ಗೆ ನಾಗರಾಜ್ ಛಬ್ಬಿ “ಶೀಘ್ರವೇ ನಿರ್ಧಾರ ಪ್ರಕಟಿಸಲಿದ್ದೇನೆ” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts