More

    ವಿಶೇಷ ಪರಿಸ್ಥಿತಿ ಆಧಾರಿತ ಹೂಡಿಕೆಯೇ ಯಾಕೆ ಆಸಕ್ತಿಕರ ಆಯ್ಕೆ?

    | ಎ.ಎಸ್. ವಿಜಯಕುಮಾರ್ ಪ್ರಿನ್ಸಿಪಾಲ್ ಕನ್ಸಲ್ಟಂಟ್​, ಫೀನಿಕ್ಸ್ ಫೈನಾನ್ಸಿಯಲ್ ಸರ್ವಿಸಸ್.

    ಬೆಂಗಳೂರು: ಈಕ್ವಿಟಿ ಮಾರುಕಟ್ಟೆಯನ್ನು 2020ರಲ್ಲಿ ಸೇರಿಕೊಂಡ ಹೂಡಿಕೆದಾರರು ತಮ್ಮ ಹೂಡಿಕೆ ಪ್ರಯಾಣದಲ್ಲಿ ಒಂದರ ಹಿಂದೊಂದರಂತೆ ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷ ಹಾಗೂ ಅದೇ ಸಮಯದಲ್ಲಿ ಈ ಪರಿಸ್ಥಿತಿಯಿಂದಾಗಿ ಕಚ್ಚಾ ತೈಲ ಅಥವಾ ನಿಕಲ್‌ನಂತಹ ಲೋಹಗಳಂತಹ ಕೆಲವು ಸರಕುಗಳ ಬೆಲೆಗಳಲ್ಲಿ ತೀಕ್ಷ್ಣ ಏರಿಕೆಯೂ ಆಯಿತು. ಪರಿಣಾಮವಾಗಿ ವಿಶಾಲವಾದ ಈಕ್ವಿಟಿ ಮಾರುಕಟ್ಟೆಯಲ್ಲಿ ಶೇ. 10 ತಿದ್ದುಪಡಿ ಮಾಡಿಕೊಳ್ಳಲಿಕ್ಕೂ ಪ್ರೇರಣೆಯೂ ಆಗಿದೆ.

    ಕೆಲವು ತಿಂಗಳ ಹಿಂದೆ ಆಟೋಮೊಬೈಲ್ ಕ್ಷೇತ್ರದಲ್ಲಿ ಸೆಮಿ ಕಂಡಕ್ಟರ್​ಗಳ ಕೊರತೆ ತೀವ್ರ ಒತ್ತಡ ಉಂಟಾಗಿಸಿತ್ತು. ಅದಕ್ಕೂ ಮೊದಲು ವಿಕೋಪದಲ್ಲಿದ್ದ ಕರೊನಾ ಹಾವಳಿ ರಿಯಲ್​ ಎಸ್ಟೇಟ್ ಮೇಲೆ ಭಾರಿ ದುಷ್ಪರಿಣಾಮ ಬೀರಿದ್ದು, ಅದು ರಿಯಾಲ್ಟಿ ಕಂಪನಿಗಳ ಷೇರು ಮೌಲ್ಯಗಳ ಮೇಲೂ ಪರಿಣಾಮ ಉಂಟುಮಾಡಿತ್ತು.

    ಪರಿಸ್ಥಿತಿಗಳ ಬದಲಾವಣೆ ಹೇಗೆ ಕೆಲವೊಂದು ಕ್ಷೇತ್ರಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂಬುದಕ್ಕೆ ಇವೆಲ್ಲ ಕೆಲವು ಉದಾಹರಣೆಗಳಷ್ಟೇ. ಮಾತ್ರವಲ್ಲ, ಇನ್ನೊಂದೆಡೆ ಇಂಥ ಪರಿಸ್ಥಿತಿಗಳನ್ನು ಅವಕಾಶಗಳಾಗಿ ಬದಲಿಸಿಕೊಳ್ಳುವ ಅಗತ್ಯವೂ ಇರುತ್ತದೆ. ಅಂದರೆ ಇಂಥ ಪರಿಸ್ಥಿತಿಗಳಲ್ಲಿ ಉದ್ಭವಿಸುವ ಹೂಡಿಕೆ ಅವಕಾಶಗಳನ್ನು ಅಂದಾಜಿಸಿ ಪರಿಣತಿಯಿಂದ ಬಳಸಿಕೊಳ್ಳಬೇಕು. ಅದಕ್ಕೆ ಉತ್ತಮ ದಾರಿ ಎಂದರೆ ಅಂಥ ಪರಿಸ್ಥಿತಿಗಳನ್ನು ತಮ್ಮ ಪರವಾಗಿ ಗುರುತಿಸುವಂಥ ಫಂಡ್ ಮ್ಯಾನೇಜರ್​​ಗಳಿಗೆ ತಮ್ಮ ಹೂಡಿಕೆಯನ್ನು ನಿರ್ವಹಿಸುವ ಅವಕಾಶ ಮಾಡಿಕೊಡುವುದು.

    ವಿಶೇಷ ಪರಿಸ್ಥಿತಿಗಳನ್ನು ತಮ್ಮದಾಗಿಸಿಕೊಳ್ಳುವ ಹೂಡಿಕೆ ಆಯ್ಕೆಗಳು

    ಆಯಾ ಪ್ರದೇಶಕ್ಕನುಗುಣವಾದ ರಾಜಕೀಯ ಅಥವಾ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳು, ಕಾರ್ಪೋರೇಟ್ ಮರುರಚನೆ, ಸರ್ಕಾರಿ ನೀತಿ ಅಥವಾ ನಿಯಂತ್ರಣಗಳಲ್ಲಿ ಬದಲಾವಣೆ ಅಥವಾ ನಿಗದಿತ ಕಂಪನಿ ಅಥವಾ ಕ್ಷೇತ್ರಗಳಲ್ಲಿನ ತಾತ್ಕಾಲಿಕ ವಿಶಿಷ್ಠ ಸವಾಲುಗಳು ಕೂಡ ಇಲ್ಲಿ ವಿಶೇಷ ಪರಿಸ್ಥಿತಿಗಳು ಎನಿಸಿಕೊಳ್ಳುತ್ತವೆ.
    ಇಂಥ ಯೋಜನೆಗಳಿಗೆ ಸಂಬಂಧಿಸಿದ ಫಂಡ್ ಮ್ಯಾನೇಜರ್​ಗಳು ಉತ್ತಮ ಅವಕಾಶಕ್ಕಾಗಿ ಎಲ್ಲ ಆಯಾಮಗಳಲ್ಲಿ ಯಾವ ರೀತಿ ನೋಟ ಬೀರುತ್ತಾರೆಂದರೆ ಅಲ್ಲಿ ಕಂಪನಿಯೊಂದರ ಷೇರುಗಳನ್ನು ಖರೀದಿಸುವಾಗ ಅದರ ಮೌಲ್ಯ ನಿಜವಾದ ಬೆಲೆಗಿಂತಲೂ ಕಡಿಮೆ ಇರುವಂತೆ ನೋಡಿಕೊಳ್ಳುತ್ತಾರೆ. ಈ ತಾತ್ಕಾಲಿಕ ಮೌಲ್ಯಕುಸಿತ ಮೇಲಿನ ಯಾವುದೇ ವಿಶೇಷ ಪರಿಸ್ಥಿತಿಗಳಿಂದಾಗಿರುತ್ತವೆ. ಇದು ಈ ಫಂಡ್‌ಗಳು ಓಪನ್-ಎಂಡೆಡ್ ಇಕ್ವಿಟಿ ಸ್ಕೀಮ್ ಆಗಿದ್ದರೂ, ಕೆಲವು-ಕೇಂದ್ರೀಕೃತ ಪೋರ್ಟ್‌ಫೋಲಿಯೊಗಳನ್ನು ಹೊಂದುವಂತೆ ಮಾಡುತ್ತದೆ. ಅದೇ ಸಮಯದಲ್ಲಿ, ಈ ನಿಧಿಗಳು ವೈವಿಧ್ಯಮಯ ಪೋರ್ಟ್​ಫೋಲಿಯೊವನ್ನು ಪ್ರಯತ್ನಿಸುತ್ತವೆ ಮತ್ತು ನಿರ್ವಹಿಸುತ್ತವೆ.

    ಹೂಡಿಕೆ ಹೇಗೆ?

    ಇಂಥ ಹೂಡಿಕೆಗಳಲ್ಲಿ ಬಂಡವಾಳ ಹೂಡುವಾಗ ಹೂಡಿಕೆದಾರರು ಫಂಡ್​ ಮ್ಯಾನೇಜರ್​ಗಳ ಟ್ರ್ಯಾಕ್​ ರೆಕಾರ್ಡ್​ ಮೌಲ್ಯಮಾಪನ ಮಾಡುವ ಜತೆಗೆ ಅವರ ಹಿಂದಿನ ಯಶಸ್ಸು, ಅಲ್ಲದೆ ಹಿಂದಿನ ಹೂಡಿಕೆಯ ಪರಿಣಾಮ ಹೇಗಿದೆ ಎಂಬುದನ್ನೂ ಗಮನಿಸಬೇಕು. ಇದರಿಂದ ಅಂಥ ಫಂಡ್ ಮ್ಯಾನೇಜರ್​ಗಳು ಈ ಹಿಂದೆ ಅವಕಾಶಗಳನ್ನು ಪ್ರಯೋಜನವಾಗಿ ಬಳಸಿಕೊಳ್ಳುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದರು ಎಂಬ ಐಡಿಯಾ ಸಿಗುತ್ತದೆ. ಇನ್ನು ಸದ್ಯ ಲಭ್ಯವಿರುವ ಉತ್ತಮ ಕೊಡುಗೆಗಳಲ್ಲಿ ಐಸಿಐಸಿಐ ಪ್ರುಡೆನ್ಷಿಯಲ್​ ಮ್ಯೂಚುವಲ್ ಫಂಡ್​​ನ ಇಂಡಿಯನ್ ಅಪಾರ್ಚುನಿಟೀಸ್ ಫಂಡ್​ ಅತ್ಯಂತ ಸೂಕ್ತ ಎನ್ನುವಂತಿದೆ.

    ಗುತ್ತಿಗೆದಾರ ಸಂತೋಷ್ ಉಡುಪಿಗೆ ಬಂದಿದ್ದೇಕೆ?; ಉದ್ದೇಶ ಏನಿತ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts