More

    ಬಾರ್ ಡಾನ್ಸರ್​​ನ ಕೊಲೆ ಮಾಡಿದವನು ಯಾರು? ಪೊಲೀಸರ ತನಿಖೆಯಿಂದ ಹೊರಬಿತ್ತು ಸತ್ಯ!

    ಬೆಂಗಳೂರು: ಆರ್.ಟಿ. ನಗರದ ನೃಪತುಂಗ ಲೇಔಟ್‌ನ ಮನೆಯಲ್ಲಿ ನಡೆದಿದ್ದ ಬಾರ್​ ನರ್ತಕಿ ಜಾರಾ (28) ಕೊಲೆ ಸಂಬಂಧ ಮೃತಳ ಭಾವನನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ. ಜಾಲಹಳ್ಳಿಯ ನವಾಜ್ ಪಾಷಾ (28) ಬಂಧಿತ. ಬ್ಲೂ ಡಾರ್ಟ್​ನಲ್ಲಿ ನೌಕರನಾಗಿದ್ದ. ಮಾರ್ಚ್ 26ರ ರಾತ್ರಿ ಬಾರ್ ನೃತ್ಯಗಾತಿ ಮನೆಗೆ ಬಂದು ಆಕೆಯನ್ನು ಹತ್ಯೆ ಮಾಡಿದ್ದ. ಮಾರನೇ ದಿನ ಸಹೋದರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಚತ್ತೀಸ್‌ಗಢ ಮೂಲದ ಜಾರಾಗೆ ತಂದೆ-ತಾಯಿ ಇರಲಿಲ್ಲ. ಇಬ್ಬರು ಸಹೋದರರು ಮತ್ತು ಒಬ್ಬ ತಂಗಿ ಜತೆ 2016ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಜಾರಾ ಬಂದಿದ್ದಳು. ಬಾರ್‌ನಲ್ಲಿ ನೃತ್ಯಗಾತಿ ಆಗಿ ಕೆಲಸ ಮಾಡುತ್ತಿದ್ದಳು. 6 ತಿಂಗಳ ಹಿಂದೆ ತಂಗಿಗೆ ನವಾಜ್ ಜತೆಗೆ ಮದುವೆ ಮಾಡಿದ್ದಳು. ಈಕೆಯ ಸಹೋದರರು ಜಾಲಹಳ್ಳಿಯಲ್ಲಿ ನೆಲೆಸಿದ್ದರು. ಅಸ್ಸಾಂ ಮೂಲದ ಯುವಕನ ಜತೆಗೆ ಜಾರಾಗೂ ಮದುವೆ ನಿಶ್ಚಯವಾಗಿತ್ತು.

    ಇದನ್ನೂ ಓದಿ: ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌

    ಬಾರ್ ಡಾನ್ಸರ್​​ನ ಕೊಲೆ ಮಾಡಿದವನು ಯಾರು? ಪೊಲೀಸರ ತನಿಖೆಯಿಂದ ಹೊರಬಿತ್ತು ಸತ್ಯ!
    ಕೊಲೆ ಆರೋಪಿ ನವಾಜ್

    ಇದಕ್ಕೂ ಮೊದಲು ನವಾಜ್ ಮತ್ತು ಜಾರಾ ಅನ್ಯೋನ್ಯವಾಗಿದ್ದರು. ಜಾರಾ ಮದುವೆ ನಿಶ್ಚಯದ ಬಳಿಕ ನವಾಜ್, ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಮಾರ್ಚ್ 26ರ ರಾತ್ರಿ 8ರಲ್ಲಿ ಜಾರಾ ಮನೆಗೆ ಹೋಗಿದ್ದ ನವಾಜ್ ಪಾಷಾಗೂ ಮತ್ತು ಆಕೆಯ ನಡುವೆ ಮದುವೆ ವಿಚಾರಕ್ಕೆ ಜಗಳ ಶುರುವಾಗಿದೆ. ವಿಕೋಪಕ್ಕೆ ತಿರುಗಿದಾಗ ಆರೋಪಿ ಚಾಕುವಿನಿಂದ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಆನಂತರ ಮನೆ ಡೋರ್ ಮತ್ತು ಗೇಟ್ ಲಾಕ್ ಮಾಡಿಕೊಂಡು ಹೋಗಿದ್ದ.

    ಶನಿವಾರ ಮಧ್ಯಾಹ್ನ 12 ಗಂಟೆ ಯುವತಿ ಸಹೋದರ ಮುಸ್ತಾಫಾ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡ ಆರ್.ಟಿ.ನಗರ ಪೊಲೀಸರಿಗೆ ಪರಿಚಿತರ ಕೈವಾಡ ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆದರೆ, ಯಾರು ಮಾಡಿದ್ದಾರೆ ಎಂಬುದು ಹಂತ ಹಂತವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾಗ ಮೃತಳ ಭಾವ ನವಾಜ್‌ನೇ ಆರೋಪಿ ಎಂಬುದು ಗೊತ್ತಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮೈಮೇಲೇ ಲಾರಿ ಚಲಿಸಿ 3 ವರ್ಷದ ಮಗು ಸ್ಥಳದಲ್ಲೇ ಸಾವು; ಪುತ್ರಿಯೊಂದಿಗೆ ದಂಪತಿ ಸಾಗುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ

    ದಾರಿ ತಪ್ಪಿಸಿದ್ದ ಹಂತಕ: ಬಾರ್​ ಗರ್ಲ್ ಜಾರಾ ಕೊಲೆ ಬಳಿಕ ಘಟನಾ ಸ್ಥಳಕ್ಕೆ ಬಂದಿದ್ದ ನವಾಜ್ ಪಾಷಾ, ತನಗೆ ಏನೂ ತಿಳಿಯದಂತೆ ವರ್ತಿಸಿದ್ದ. ದೂರು ಕೊಡಲು ಪತ್ನಿ, ಬಾಮೈದುನ ಜತೆಗೆ ಪೊಲೀಸ್ ಠಾಣೆಗೆ ಬಂದು ಅಮಾಯಕನಂತೆ ವರ್ತಿಸಿ ತನಿಖೆ ಆ ರೀತಿ ಮಾಡಿ ಈ ರೀತಿ ಮಾಡಿ, ಇವರು ಮಾಡಿರಬೇಕು, ಅವರ ಮೇಲೆ ಶಂಕೆ ಇರುವುದಾಗಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಿದ್ದ. ಕೊನೆಗೆ ಜಾರಾ ಮೊಬೈಲ್​ಫೋನ್​ ಕರೆಗಳ ಪರಿಶೀಲನೆ ನಡೆಸಿದಾಗ ಆಕೆ ಜತೆ ಅತಿ ಹೆಚ್ಚು ಬಾರಿ ನವಾಜ್ ಸಂಭಾಷಣೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಜತೆಗೆ ಮನೆ ಸಮೀಪ ಆತನ ಮೊಬೈಲ್​ಫೋನ್​ ನೆಟ್‌ವರ್ಕ್ ಪತ್ತೆಯಾಗಿತ್ತು. ಈ ಎಲ್ಲ ಸಾಕ್ಷ್ಯಾಧಾರಗಳ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಮನೆಯಲ್ಲೇ ಕೊಲೆಯಾಗಿ ಹೋದಳು ಬಾರ್ ಡಾನ್ಸರ್​; ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮರ್ಡರ್​

    ಬಿಎಂಟಿಸಿ ಖಾಸಗೀಕರಣಕ್ಕೆ ಮೊದಲ ಹೆಜ್ಜೆ?; ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ತಂತ್ರ!

    ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts