More

    ಜಗತ್ತು ಸಹಜಸ್ಥಿತಿಗೆ ಮರಳುವುದು ಯಾವಾಗ? ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಏನು ಹೇಳಿದ್ದಾರೆ ಓದಿ!

    ನವದೆಹಲಿ: ಜನರು ಕರೊನಾ ವೈರಸ್​ನೊಂದಿಗೇ ಬದುಕಲು ಕಲಿಯುವ ‘ಸ್ಥಳೀಯತೆ’ಯ ಹಂತ(ಎಪಿಡೆಮಿಕ್ ಸ್ಟೇಜ್)ವನ್ನು ಭಾರತ ಪ್ರವೇಶಿಸುತ್ತಿರಬಹುದು. ದೇಶದಲ್ಲಿ ಕಡಿಮೆ ಅಥವಾ ಮಧ್ಯಮ ಮಟ್ಟದಲ್ಲಿ ರೋಗಪ್ರಸರಣ ನಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಜೊತೆಗೆ, ಜಾಗತಿಕ ಮಟ್ಟದಲ್ಲಿ 2022ರ ಅಂತ್ಯದ ವೇಳೆಗೆ ಶೇ. 70 ರಷ್ಟು ಲಸಿಕಾಕರಣ ಮುಗಿದು, ಎಲ್ಲಾ ದೇಶಗಳು ಸಹಜ ಜೀವನಕ್ಕೆ ಮರಳಬಹುದಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿದ್ದಾರೆ.

    ಜನಸಂಖ್ಯೆಯು ವೈರಸ್‌ನೊಂದಿಗೆ ಬದುಕಲು ಕಲಿಯುವುದು ಸ್ಥಳೀಯತೆಯ ಹಂತವಾಗಿದೆ. ವೈರಸ್ ಜನಸಂಖ್ಯೆಯನ್ನು ಆವರಿಸಿರುವ ‘ಸಾಂಕ್ರಾಮಿಕ’ ಹಂತಕ್ಕಿಂತ ಇದು ತುಂಬಾ ಭಿನ್ನವಾಗಿರುತ್ತದೆ. ಭಾರತದ ಗಾತ್ರ, ಜನಸಂಖ್ಯೆಯ ಬಹುರೂಪತೆ, ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೋಗನಿರೋಧಕತ್ವ ಇರುವ ಸಂದರ್ಭಗಳನ್ನು ಗಮನಿಸಿದರೆ, ಸೋಂಕಿನ ಮಟ್ಟವು ಕೆಲವೆಡೆಗಳಲ್ಲಿ ಕಂಡುಬರುವ ಏರಿಳಿತದೊಂದಿಗೆ, ಇದೇ ರೀತಿ ಕಡಿಮೆ ಮಟ್ಟದಲ್ಲೇ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಡಿಜಿಟಲೀಕರಣದತ್ತ ಗ್ರಾಪಂ ಗ್ರಂಥಾಲಯಗಳು: ಕೋಟಿ ದಾಟಿದ ಓದುಗರು

    ದ ವೈರ್​ ಸುದ್ದಿ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ, ಡಾ.ಸೌಮ್ಯ ಅವರು, ಭಾರತದ ಕೋವಾಕ್ಸಿನ್‌ ಕರೊನಾ ಲಸಿಕೆಗೆ ಡಬ್ಲ್ಯುಎಚ್‌ಒನ ತಾಂತ್ರಿಕ ಗುಂಪು ತನ್ನ ಅಧಿಕೃತ ಲಸಿಕೆಗಳಲ್ಲಿ ಒಂದಾಗಿರಲು ಸೆಪ್ಟೆಂಬರ್ ತಿಂಗಳ ನಡುವಿನಲ್ಲಿ ಅನುಮೋದನೆ ನೀಡಬಹುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಕ್ಕಳಲ್ಲಿ ಕೋವಿಡ್​ 19 ಸೋಂಕಿನ ಬಗ್ಗೆ ಪಾಲಕರು ಚಿಂತೆಗೀಡಾಗುವ ಅಗತ್ಯವಿಲ್ಲ. ಸೆರೊ ಸರ್ವೇ ಮತ್ತು ವಿವಿಧ ದೇಶಗಳ ಅನುಭವಗಳ ಆಧಾರದ ಮೇಲೆ ಮಕ್ಕಳಿಗೆ ಸೋಂಕು ತಗುಲಿದರೂ, ಬಹುತೇಕ ಮೆದುಪ್ರಮಾಣದ ಅನಾರೋಗ್ಯ ಉಂಟಾಗುತ್ತಿದೆ. ತುಂಬಾ ಸಮಸ್ಯೆಯಾಗುವ ಪ್ರಕರಣಗಳ ಸಂಖ್ಯೆ ದೊಡ್ಡವರಿಗೆ ಹೋಲಿಸಿದರೆ ಕಡಿಮೆ ಇರುವುದು ಕಂಡುಬಂದಿದೆ ಎಂದಿರುವ ಡಾ. ಸೌಮ್ಯ, ಆದಾಗ್ಯೂ ಮಕ್ಕಳ ಚಿಕಿತ್ಸೆಗೆ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು ಉತ್ತಮ ವಿಷಯವಾಗಿದೆ ಎಂದಿದ್ದಾರೆ. (ಏಜೆನ್ಸೀಸ್)

    ಪ್ರಾಥಮಿಕ ಶಾಲೆಗಳ ಆರಂಭ ಯಾವಾಗ? ಸಿಎಂ ಹೇಳಿದ್ದೇನು?

    ಮಾನಸಿಕ ಒತ್ತಡ ನಿಯಂತ್ರಣಕ್ಕೆ ಈ ಯೋಗಾಸನ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts