More

    ಪ್ರಾಥಮಿಕ ಶಾಲೆಗಳ ಆರಂಭ ಯಾವಾಗ? ಸಿಎಂ ಹೇಳಿದ್ದೇನು?

    ಬೆಂಗಳೂರು: ಕರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದಲ್ಲಿ 9, 10 ನೇ ಇಯತ್ತೆಗೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಇತರ ತರಗತಿಗಳಿಗೆ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇದೇ ತಿಂಗಳ ಕೊನೆಯ ವೇಳೆಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಭವಿಷ್ಯ ಸ್ಪಷ್ಪವಾಗಲಿದೆ ಎಂದಿದ್ದಾರೆ.

    ಇಂದು ನಗರದ ಪ್ರೌಢಶಾಲೆಯೊಂದಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಸಿಎಂ ಬೊಮ್ಮಾಯಿ ಅವರು, ಶಾಲೆ ಆರಂಭವಾದ ಬಗ್ಗೆ ವಿದ್ಯಾರ್ಥಿಗಳು ಅಷ್ಟೊಂದು ಸಂಭ್ರಮ-ಸಡಗರದಲ್ಲಿ ಇರುವುದು ಕಂಡು ಸರ್ಕಾರದ ಪ್ರಯತ್ನ ಸಾರ್ಥಕಗೊಳಿಸಿದ ಭಾವ ಮೂಡಿಸಿದೆ. ಮಕ್ಕಳಲ್ಲಿನ ಉತ್ಸಾಹ ಸ್ಫೂರ್ತಿ ತುಂಬುವಂತಿದೆ ಎಂದರು.

    ಇದನ್ನೂ ಓದಿ: “ಆನ್​​ಲೈನ್​​ಗಿಂತ ಆಫ್​​ಲೈನ್‌ ಕ್ಲಾಸೇ ಬೆಸ್ಟ್ ಸರ್, ತುಂಬಾ ಖುಷಿಯಾಗಿದೆ”

    ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಒಂದರಿಂದ ಎಂಟನೇ ತರಗತಿ ಶಾಲೆಗಳ ಪುನರಾರಂಭದ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ತಜ್ಞರಿಗೆ‌ ವರದಿ ಸಲ್ಲಿಸಲು ಕೇಳಲಾಗಿದೆ. ಈ ವರದಿ ಬಂದ ಬಳಿಕ ಈ ತಿಂಗಳಾಂತ್ಯಕ್ಕೆ ಸ್ಥೂಲವಾಗಿ ಚರ್ಚಿಸಿ ಭವಿಷ್ಯ ನಿರ್ಧರಿಸಲಾಗುವುದು ಎಂದು ತಿಳಿಸಿದರು.

    ಮಾಗಡಿ ರಸ್ತೆಯ ಫುಡ್​ ಫ್ಯಾಕ್ಟರಿಯಲ್ಲಿ ಸ್ಫೋಟ! ಇಬ್ಬರ ಸಜೀವ ದಹನ

    ಇಂದು ರಾಜ್ಯದಲ್ಲಿ ಪ್ರೌಢಶಾಲೆ-ಕಾಲೇಜು ಪುನರಾರಂಭದ ಸಂಭ್ರಮ! ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಮಾತು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts