More

    ಶಿಕ್ಷಕರ ಕೋರಿಕೆ ವರ್ಗಾವಣೆಗಳಿಗೆ ಆದ್ಯತೆ ಮತ್ತು ಸರ್ಮಪಕ ಮರುಹಂಚಿಕೆ, ವಲಯವಾರು ವರ್ಗಾವಣೆಗಳಿಂದ ವಿನಾಯಿತಿ ಪಡೆಯೋದಕ್ಕೇನು ಮಾನದಂಡ?

    ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾಗಿರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020 ರಲ್ಲಿ ಉಲ್ಲೇಖವಾಗಿರುವ ಅಂಶಗಳಲ್ಲಿ ಸಮರ್ಪಕ ಮರುಹಂಚಿಕೆ, ವಲಯವಾರು ವರ್ಗಾವಣೆಗಳಿಂದ ವಿನಾಯಿತಿಗಳು ಮತ್ತು ಕೋರಿಕೆ ವರ್ಗಾವಣೆಗಳಿಗೆ ಆದ್ಯತೆ ವಿಚಾರ ಪ್ರಸ್ತಾಪವಾಗಿದ್ದು, ಕೆಲವು ಮಾನದಂಡಗಳನ್ನು ರೂಪಿಸಲಾಗಿದೆ. ಸಮರ್ಪಕ ಮರುಹಂಚಿಕೆ, ವಲಯವಾರು ವರ್ಗಾವಣೆಗಳಿಂದ ವಿನಾಯಿತಿಗಳು ಮತ್ತು ಕೋರಿಕೆ ವರ್ಗಾವಣೆಗಳಿಗೆ ಆದ್ಯತೆಯು ಈ ಕೆಳಗಿನ ಉಪಪ್ರಕರಣಗಳಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟಿದ್ದು ಅವು ಇಂತಿವೆ.
    (i)ಶಿಕ್ಷಕ ಅಥವಾ ಆತನ ಪತ್ನಿ ಅಥವಾ ಆಕೆಯ ಪತಿ(Spouse) ಅಥವಾ ಮಕ್ಕಳು, ಶಿಕ್ಷಕನು ಕಾರ್ಯನಿರ್ವಹಿಸುತ್ತಿರುವ ತಾಲೂಕಿನೊಳಗೆ ಚಿಕಿತ್ಸೆಯು ಲಭ್ಯವಿಲ್ಲದೆ ಕೊನೆಯ ಹಂತದ(Terminal) ಖಾಯಿಲೆ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ,
    (ii) ಅಂಗವೈಕಲ್ಯವಿರುವ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ (2016ರ ಕೇಂದ್ರ ಅಧಿನಿಯಮ 49) 2ನೇ ಪ್ರಕರಣದ (ಆರ್​) ಖಂಡದಲ್ಲಿ ಪರಿಭಾಷಿಸಿದಂತೆ ಗುರುತಿಸಿದ ಮಟ್ಟದ ಅಂಗವೈಕಲ್ಯದ ಶಿಕ್ಷಕ ಅಥವಾ ಆತನ ಪತ್ನಿ ಅಥವಾ ಆಕೆಯ ಪತಿ(Spouse) ಅಥವಾ ಮಕ್ಕಳು:
    (iii) ಹನ್ನೆರಡು ವರ್ಷಗಳ ಒಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ವಿಧುರ ಅಥವಾ ವಿಚ್ಚೇದಿತ ಶಿಕ್ಷಕ;
    (iv)ಭಾರತೀಯ ರಕ್ಷಣಾ ದಳಗಳು ಅಥವಾ ಅರೆ ಸೇನಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕ ಅಥವಾ ನಿವೃತ್ತಿ ಹೊಂದಿದ ಅಥವಾ ಶಾಶ್ವತವಾಗಿ ಅಂಗವಿಕಲರಾದ ಅಥವಾ ಮೃತ ಸೈನಿಕರ ಪತಿ ಅಥವಾ ಪತ್ನಿಯಾಗಿರುವ (Spouse) ಶಿಕ್ಷಕ;
    (v) ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಪತಿ ಅಥವಾ ಪತ್ನಿಯಾಗಿರುವ(Spouse) ಶಿಕ್ಷಕ;
    (vi) ಶಿಕ್ಷಕಿಯಾಗಿದ್ದರೆ ಐವತ್ತು ವರ್ಷ ಮತ್ತು ಪುರುಷ ಶಿಕ್ಷಕನಾಗಿದ್ದಲ್ಲಿ ಐವತ್ತೈದು ವರ್ಷ ಮೀರಿದ ಶಿಕ್ಷಕರು;
    (vii) ಗರ್ಭಿಣಿ ಶಿಕ್ಷಕಿ ಅಥವಾ ಒಂದು ವರ್ಷದ ಒಳಗಿನ ಮಗುವನ್ನು ಹೊಂದಿರುವ ಶಿಕ್ಷಕಿ;
    (2) ಮೇಲೆ ಉಲ್ಲೇಖಿಸಿರುವ (i)ರಿಂದ (iv)ನೇ ಖಂಡಗಳ ಅಡಿಯಲ್ಲಿ ಬರುವ ಪ್ರವರ್ಗಗಳು ಸಮರ್ಪಕ ಮರುಹಂಚಿಕೆ ಮತ್ತು ವಲಯವಾರು ವರ್ಗಾವಣೆ ಎರಡಕ್ಕೂ ಹಾಗೂ ಕೋರಿಕೆ ವರ್ಗಾವಣೆ ಪ್ರಕಾರ ಆದ್ಯತೆಗೆ ಕೂಡ ಅರ್ಹರಾಗಿರುತ್ತಾರೆ. ಆದ್ಯತೆಗಳನ್ನು ಶಿಕ್ಷಕನ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರವೇ ಕ್ಲೇಮು ಮಾಡಬಹುದು.
    (3) ಮೇಲೆ ಉಲ್ಲೇಖಿಸಿರುವ (i)ರಿಂದ (iv)ನೇ ಖಂಡಗಳ ಅಡಿಯಲ್ಲಿ ಬರುವ ಪ್ರವರ್ಗಗಳನ್ನು ವಿಶೇಷ ಪ್ರವರ್ಗಗಳು ಎಂದು ವರ್ಗೀಕರಿಸಲಾಗಿದೆ. ಇವುಗಳ ಅಡಿಯಲ್ಲಿ ಮಾಡಲಾದ ವರ್ಗಾವಣೆಗಳನ್ನು 7ನೇ ಪ್ರಕರಣದ ಅಡಿಯಲ್ಲಿ ನಿರ್ದಿಷ್ಟ ಪಡಿಸಿದ ಶೇಕಡ ಹದಿನೈದರ ವರ್ಗಾವಣೆ ಮಿತಿಗೆ ಸೇರಿಸುವಂತಿಲ್ಲ.
    (4) ಮೇಲೆ ಉಲ್ಲೇಖಿಸಿರುವ (vi) ಮತ್ತು (vii)ನೇ ಖಂಡಗಳಲ್ಲಿ ಬರುವ ಪ್ರವರ್ಗಗಳು ಸಮರ್ಪಕ ಮರುಹಂಚಿಕೆ ಮತ್ತು ವಲಯವಾರು ವರ್ಗಾವಣೆಗಳ ಅಡಿಯಲ್ಲಿನ ವಿನಾಯಿತಿಗಳಿಗೆ ಮಾತ್ರವೇ ಅರ್ಹರಾಗತಕ್ಕದ್ದು.
    (5) ಮೇಲೆ ಉಲ್ಲೇಖಿತ (v)ನೇ ಪ್ರವರ್ಗದ ಪ್ರಕಾರ ಬರುವ ಶಿಕ್ಷಕರಿಗೆ ಕೋರಿಕೆ ವರ್ಗಾವಣೆಯ ಅವಧಿಯಲ್ಲಿ ಪ್ರಾಶಸ್ತ್ಯವನ್ನು ನೀಡಬೇಕು. ಶಿಕ್ಷಕನು, ಆತನ ಪತ್ನಿ ಅಥವಾ ಆಕೆಯ ಪತಿಯು ಕಾರ್ಯನಿರ್ವಹಿಸುತ್ತಿರುವ ತಾಲೂಕಲ್ಲದೆ ಬೇರೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ, ಆತನ ಪತ್ನಿ ಅಥವಾ ಆಕೆಯ ಪತಿಯು ಕಾರ್ಯನಿರ್ವಹಿಸುತ್ತಿರುವ ತಾಲೂಕಿಗೆ ಮಾತ್ರವೇ ವರ್ಗಾವಣೆಯನ್ನು ಕೋರುವುದಕ್ಕೆ ಅನುಮತಿ ನೀಡಬಹುದು. ಇಬ್ಬರೂ ಅದೇ ತಾಲೂಕಿನಲ್ಲಿದ್ದರೆ ಆಗ ಆದ್ಯತೆ ಮೇಲೆ ಅರ್ಜಿಸಲ್ಲಿಸು ಅವರು ಅರ್ಹರಲ್ಲ. ಆದಾಗ್ಯೂ, ಸಮರ್ಪಕ ಮರುಹಂಚಿಕೆ ಮತ್ತು ವಲಯವಾರು ವರ್ಗಾವಣೆ ಅವಧಿಯಲ್ಲಿ ಹೆಚ್ಚುವರಿ ಶಿಕ್ಷಕನನ್ನು ಆತನ ಪತ್ನಿ ಅಥವಾ ಆಕೆಯ ಪತಿಯು ಕಾರ್ಯನಿರ್ವಹಿಸುತ್ತಿರುವ ತಾಲೂಕಿನೊಳಗೆ ಸ್ಥಳ ನಿಯುಕ್ತಿಗೊಳಿಸಬೇಕು.

    ಕೌನ್ಸೆಲಿಂಗ್ ಮೂಲಕ ವರ್ಗಾವಣೆಯ ಕುರಿತು ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಯಲ್ಲಿ ಏನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts