More

    ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಚುನಾವಣಾ ಪ್ರಚಾರಕ್ಕೆ ನಿಷೇಧ

    ಕಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರಿಗೆ ಒಂದು ದಿನ ಚುನಾವಣಾ ಪ್ರಚಾರ ಮಾಡಲು ನಿಷೇಧ ಹೇರಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

    ಸಿಲುಗುರಿಯಲ್ಲಿ ನಡೆದಿದ್ದ ಚುನಾವಣಾ ಪ್ರಚಾರದಲ್ಲಿ ದಿಲೀಪ್ ಘೋಷ್ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಸೀತಾಲಕುಚಿಯಲ್ಲಿ ನಡೆದಂತಹ ಘಟನೆಗಳು ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ನಡೆಯಲಿವೆ ಎಂದು ಅವರು ಹೇಳಿದ್ದರು. ನಾಲ್ಕನೇ ಹಂತದ ಮತದಾನದ ವೇಳೆ ಸೀತಾಲಕುಚಿ ವಿಧಾನಸಭಾ ಕ್ಷೇತ್ರದಲ್ಲಿ ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ನಾಲ್ವರು ಸಾರ್ವಜನಿಕರು ಬಲಿಯಾಗಿದ್ದರು.

    ಇದನ್ನೂ ಓದಿ: ಸಿದ್ದರಾಮಯ್ಯ ಅವರಿಗೆ ಭಾಷಾ ಪ್ರಯೋಗವೇ ಗೊತ್ತಿಲ್ಲ: ಸಚಿವ ಈಶ್ವರಪ್ಪ ಟೀಕೆ

    ಇದರ ಬೆನ್ನಲ್ಲೇ ದಿಲೀಪ್ ಘೋಷ್, ಸೀತಾಲಕುಚಿಯಂತಹ ಘಟನೆಗಳು ಮತ್ತಷ್ಟು ನಡೆಯಲಿವೆ ಎಂದು ಹೇಳಿದ್ದರು. ಈ ಕುರಿತು ಚುನಾವಣಾ ಆಯೋಗ ದಿಲೀಪ್ ಘೋಷ್ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಏಪ್ರಿಲ್ 15 ರ ಸಾಯಂಕಾಲ 6 ಗಂಟೆಯಿಂದ ಏಪ್ರಿಲ್ 16ರ ಸಂಜೆ 6 ಗಂಟೆಯವರೆಗೆ ನಿಷೇಧ ಹೇರಲಾಗಿದೆ.

    ದಿಲೀಪ್ ಘೋಷ್ ವಿರುದ್ಧ ಟಿಎಂಸಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

    ಬೆಂಗಳೂರಲ್ಲಿ ಅವಿವಾಹಿತ ಅಕ್ಕ-ತಂಗಿ ಅನುಮಾನಾಸ್ಪದ ಸಾವು

    ಸೇಬುಹಣ್ಣನ್ನು ಆರ್ಡರ್ ಮಾಡಿದವನಿಗೆ ಬಂದಿದ್ದು ದುಬಾರಿ ಬೆಲೆಯ ಆ್ಯಪಲ್ ಮೊಬೈಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts