More

    ಮತಎಣಿಕೆ ಕೇಂದ್ರದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಪಶ್ಚಿಮ ಬಂಗಾಳದ ಕಾಂಗ್ರೆಸ್​ ಏಜೆಂಟ್​!

    ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ 294 ಸ್ಥಾನಗಳ ಮತಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಮಧ್ಯೆ ಕಾಂಗ್ರೆಸ್​ ಅಭ್ಯರ್ಥಿಯ ಏಜೆಂಟ್​ ಒಬ್ಬರು ಮತಎಣಿಕೆ ಕೇಂದ್ರದಲ್ಲೇ ಪ್ರಜ್ಞೆ ತಪ್ಪಿಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.

    ಉತ್ತರ 24 ಪರಗಣ ಜಿಲ್ಲೆಯ ಪನಿಹಟಿ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ತಾಪಸ್​ ಮಜುಮ್ದರ್​ ಅವರ ಏಜೆಂಟ್​ ಗೋಪಾಲ್​ ಸೋಮ್​ ಅವರು ಮತಎಣಿಕೆ ನಡುವೆಯೇ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದರು. ತಕ್ಷಣ ಅವರನ್ನು ಆಂಬ್ಯುಲೆನ್ಸ್​ ಸಹಾಯದ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

    ಸದ್ಯದ ಟ್ರೆಂಡ್​ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ 21 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೈವೋಲ್ಟೇಜ್​ ಕ್ಷೇತ್ರ ನಂದಿಗ್ರಾಮದಲ್ಲಿ ಹಾಲಿ ಸಿಎಂ ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆ ಆಗಿದ್ದು, ಎದುರಾಳಿ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

    LIVE| ಪಂಚರಾಜ್ಯಗಳ ಅಧಿಕಾರದ ಗದ್ದುಗೆ ಯಾರ ಮುಡಿಗೆ? ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನಡೆ

    ಕೇರಳದ ಪಲಕ್ಕಾಡ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋಮ್ಯಾನ್​ ಇ. ಶ್ರೀಧರನ್​ ಮುನ್ನಡೆ

    ಪರ್ಯಾಯ ಚಿತ್ರಗಳ ಪಿತಾಮಹ ಸತ್ಯಜಿತ್ ರೇ; ಇಂದು ಬರ್ತ್​ಡೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts