ಬ್ರಹ್ಮ ಮುಹೂರ್ತದ ಪವಾಡ: ಮುಂಜಾನೆ 4 ಗಂಟೆಗೆ ಎದ್ದರೆ ನಿಮ್ಮ ಜೀವನವೇ ಬದಲಾಗುವುದು ಹೇಗೆ? Brahma Muhurta

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಿನ ಜಾವ 3 -4 ಗಂಟೆಯ ನಡುವೆ ಎಚ್ಚರಗೊಳ್ಳುವುದನ್ನು ಬ್ರಹ್ಮ ಮುಹೂರ್ತ ಎನ್ನುತ್ತಾರೆ
  • ಈ ಸಮಯವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ
  • ಬ್ರಹ್ಮ ಮುಹೂರ್ತದ ಸಮಯದಲ್ಲಿ ವಾತಾವರಣವು ಶುಭಕರವಾಗಿರುತ್ತದೆ ಎಂದು ಪುರಾಣಗಳು ಹೇಳುತ್ತವೆ
Brahma Muhurta: ಕೆಲವರು ಪ್ರತಿದಿನ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಸ್ವಯಂ ಪ್ರೇರಿತವಾಗಿ ಎಚ್ಚರಗೊಳ್ಳುತ್ತಾರೆ. ಈ ಸಮಯವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ಭಕ್ತಿ, ಜಪ ಮತ್ತು ಧ್ಯಾನಕ್ಕೆ ಉತ್ತಮ ಸಮಯ ಎಂದು ಹೇಳಲಾಗುತ್ತದೆ. ನೀವೇನಾದರೂ, ಈ ಸಮಯದಲ್ಲಿ ಎದ್ದೇಳುವುದರಿಂದ ಆಗುವ ಪ್ರಯೋಜನಗಳು ಏನು ಎಂಬುದನ್ನು ನೋಡೋಣ ಬನ್ನಿ...

1. ದೇವರೊಂದಿಗೆ ಸಂಪರ್ಕ ಸಾಧಿಸುವ ಸಮಯ

ಬ್ರಹ್ಮ ಮುಹೂರ್ತದ ಸಮಯದಲ್ಲಿ ವಾತಾವರಣವು ಶುಭಕರವಾಗಿರುತ್ತದೆ ಎಂದು ಪುರಾಣಗಳು ಹೇಳುತ್ತವೆ. ಈ ಸಮಯದಲ್ಲಿ ಮಾಡುವ ಪೂಜೆಯು ದೇವರನ್ನು ನೇರವಾಗಿ ತಲುಪುತ್ತದೆ. ನೀವೇನಾದರೂ ಈ ಸಮಯದಲ್ಲಿ ಎಚ್ಚರಗೊಂಡು ಶ್ರದ್ಧೆಯಿಂದ ಪೂಜೆ ಮಾಡಿದರೆ, ನಿಮಗೆ ದೇವರಿಂದ ವಿಶೇಷ ಆಶೀರ್ವಾದಗಳು ಸಿಗುತ್ತವೆ.

2. ಹಿಂದಿನ ಜನ್ಮದ ಪುಣ್ಯದ ಫಲಿತಾಂಶಗಳು

ಧಾರ್ಮಿಕ ನಂಬಿಕೆಗಳ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಲ್ಲರಿಗೂ ಎಚ್ಚರಗೊಳ್ಳುವ ಅವಕಾಶ ಸಿಗುವುದಿಲ್ಲ. ಇದು ಹಿಂದಿನ ಜನ್ಮಗಳಲ್ಲಿ ಮಾಡಿದ ಒಳ್ಳೆಯ ಕಾರ್ಯಗಳ ಪರಿಣಾಮವಾಗಿ ಇದು ಸಂಭವಿಸುತ್ತದೆ. ನೀವೇನಾದರೂ ದೇವರಿಂದ ಆಶೀರ್ವಾದ ಪಡೆಯಬೇಕೆಂದು ಬಯಸಿದರೆ, ಈ ಸಮಯದಲ್ಲಿ ಎದ್ದು ಭಕ್ತಿಯಿಂದ ಪೂಜೆ ಮಾಡಿ.

3. ದೇವರು ಮತ್ತು ದೇವತೆಗಳ ಆಶೀರ್ವಾದ

ಸಾಮಾನ್ಯವಾಗಿ ಬೆಳಗಿನ ಜಾವ ಎಂದರೆ 5-6 ಗಂಟೆ ಎಂದು ಭಾವಿಸುತ್ತಾರೆ. ಆದಾಗ್ಯೂ, ಬೆಳಿಗ್ಗೆ 3-4 ಗಂಟೆಯಿಂದ ಎಚ್ಚರವಾದರೆ, ಅದು ದೇವತೆಗಳ ಆಶೀರ್ವಾದ ಸಂಕೇತವೆಂದು ಹೇಳಲಾಗುತ್ತದೆ.. ಈ ಸಮಯದಲ್ಲಿ ನಿಮ್ಮ ನೆಚ್ಚಿನ ದೇವರನ್ನು ಸ್ಮರಿಸುವುದು, ಪೂಜೆ ಮಾಡುವುದರಿಂದ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ.

4. ಆತ್ಮದ ಜಾಗೃತಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯು ಕೇವಲ ದೇಹವನ್ನು ಮಾತ್ರ ಹೊಂದುವುದಿಲ್ಲ ಜೊತೆಗೆ ಆತ್ಮವನ್ನು ಹೊಂದಿರುತ್ತಾನೆ. ಆತ್ಮವು ಜಾಗೃತಗೊಳ್ಳಲು ಪ್ರಾರಂಭಿಸಿದಾಗ, ವ್ಯಕ್ತಿಯ ಮನಸ್ಸು ಆಧ್ಯಾತ್ಮಿಕತೆಯ ಕಡೆಗೆ ವಾಲುತ್ತದೆ. ಹಾಗಾಗಿ ಬ್ರಹ್ಮ ಮುಹೂರ್ತದಲ್ಲಿ ಕಣ್ಣು ತೆರೆಯುವುದರಿಂದ ಸಹ ಆಧ್ಯಾತ್ಮಿಕ ಪ್ರಗತಿಯ ಸಂಕೇತವಾಗಿದೆ.

5. ಧರ್ಮಗ್ರಂಥದ ಮಹತ್ವ

ಆಯುರ್ವೇದ ಮತ್ತು ಅಷ್ಟಾಂಗ ಹೃದಯದಂತಹ ಧಾರ್ಮಿಕ ಗ್ರಂಥಗಳು ಸೂರ್ಯೋದಯಕ್ಕೆ ಮೊದಲು ಎಚ್ಚರಗೊಳ್ಳಲು ಶಿಫಾರಸು ಮಾಡುತ್ತವೆ. ಈ ಸಮಯದಲ್ಲಿ ನೀವು ಸ್ನಾನ ಮಾಡುವುದು, ಜಪ ಮಾಡುವುದರಿಂದ ಬುದ್ಧಿಶಕ್ತಿಯನ್ನು ಚುರುಕುಗೊಳಿಸುತ್ತದೆ. ಜೊತೆಗೆ ಪಾಪಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಏನು ಮಾಡಬೇಕು?
ನೀವೇನಾದರೂ ಬ್ರಹ್ಮ ಕಾಲದಲ್ಲಿ ಎಚ್ಚರವಾದರೆ, ತಕ್ಷಣ ಮೊಬೈಲ್​ ನೋಡಬೇಡಿ. ಬದಲಿಗೆ ಹಾಸಿಗೆಯನ್ನು ಮಡಚಿ ನೆಲದ ಮೇಲೆ ಕುಳಿತು "ಓಂ" ಎಂದು ಜಪಿಸಿ, ದೇವರ ಹೆಸರನ್ನು ಜಪಿಸಿ. ನಿಮ್ಮ ನೆಚ್ಚಿನ ದೇವರಿಗೆ ನಮಸ್ಕಾರಗಳನ್ನು ನಿಮ್ಮ ಹೃದಯದ ಕೆಳಗಿನಿಂದ ಅರ್ಪಿಸಿರಿ. ಹೀಗೆ ಮಾಡುವುದರಿಂದ ದಿನವಿಡೀ ಸಕಾರಾತ್ಮಕತೆ ಉಳಿಯುತ್ತದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net