More

    ಆಸ್ತಿಗಿಂತ ಉತ್ತಮ ಆರೋಗ್ಯವೇ ಶ್ರೀಮಂತಿಕೆ

    ಕಮತಗಿ: ಆಸ್ತಿ, ಹಣ ಗಳಿಕೆ ನಿಜವಾದ ಶ್ರೀಮಂತಿಕೆ ಅಲ್ಲ, ಆರೋಗ್ಯ ಕಾಪಾಡಿಕೊಳ್ಳುವುದೇ ಅತಿ ದೊಡ್ಡ ಶ್ರೀಮಂತಿಕೆ ಎಂದು ಯುವ ಉದ್ಯಮಿ ಸಂತೋಷ ಹೊಕ್ರಾಣಿ ಹೇಳಿದರು.

    ಪಟ್ಟಣದ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ವಿಶ್ವಚೇತನ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಆರೋಗ್ಯವು ನಿಜವಾದ ಸಂಪತ್ತು ಮತ್ತು ಸಮೃದ್ಧಿಯಾಗಿದೆ. ಆರೋಗ್ಯಕರ ದೇಹ ಮತ್ತು ಮನಸ್ಸು ಹೊಂದಿರುವ ಯಾರಾದರೂ ತಮ್ಮ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು. ಆರೋಗ್ಯವು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕವಾಗಿ ಸಾಮಾನ್ಯ ಯೋಗಕ್ಷೇಮ ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ಆರೋಗ್ಯವಾಗಿರದಿದ್ದರೆ ಅವನಿಗೆ ಆನಂದಿಸಲು ಕಷ್ಟವಾಗುತ್ತದೆ. ಆದ್ದರಿಂದ ಆರೋಗ್ಯದ ಕಡೆಗೆ ಪ್ರತಿಯೊಬ್ಬರೂ ಹೆಚ್ಚು ಕಾಳಜಿವಹಿಸಬೇಕು ಎಂದರು.

    ಗುಳೇದಗುಡ್ಡದ ಖ್ಯಾತ ವೈದ್ಯ ಡಾ. ಚಂದ್ರಕಾಂತ ಎಸ್. ಜವಳಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಿದರೆ ಮಾತ್ರ ಸಂತಸದಿಂದಿರಲು ಸಾಧ್ಯ ಎಂದರು. ಕಮತಗಿ ಹಿರೇಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

    ಶ್ರೀನಿವಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಮಹಾಂತೇಶ ಅಂಗಡಿ, ಡಾ. ಜಗದೀಶ ಕಾಟವಾ, ಡಾ. ಸವಿತಾ ಹಾಲವಾರ, ಡಾ. ಪ್ರತಿಭಾ ಕಡ್ಲಿಮಟ್ಟಿ, ಡಾ. ಚಂದ್ರಕಾಂತ ರಕ್ಕಸಗಿ, ಡಾ. ಸುಮಾ ರಕ್ಕಸಗಿ, ಸಂಸ್ಥೆ ಅಧ್ಯಕ್ಷ ವೀರಭದ್ರಪ್ಪ ಮುರಾಳ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts