More

    ಹಣದಿಂದ‌ ಏನು ಬೇಕಾದ್ರೂ ಮಾಡಬಹುದು ಎನ್ನುವ ಸಮಾಜದಲ್ಲಿಂದು ನಾವಿದ್ದೇವೆ: ಸಂತೋಷ್​ ಹೆಗ್ಡೆ ಬೇಸರ

    ಆನೇಕಲ್: ಹಣದಿಂದ‌ ಏನು ಬೇಕಾದರೂ ಮಾಡಬಹುದು ಎನ್ನುವ ಸಮಾಜದಲ್ಲಿ ನಾವಿದ್ದೇವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಅವರು ಬೇಸರ ಹೊರಹಾಕಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲಿರುವ ಅಲಯನ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಮುಟ್ಕೋರ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂತೋಷ್​ ಹೆಗ್ಡೆ ಮಾತನಾಡಿದರು.

    ಇದನ್ನೂ ಓದಿ: ಹೀರೋ ಆಗುವ ಕನಸು ಕಂಡಿದ್ದ ಯುವಕನಿಗೆ ಶಾಕ್​ ಕೊಟ್ಟ ನಿರ್ದೇಶಕಿ! ಅಶ್ಲೀಲ ಚಿತ್ರದ ಸುಳಿಗೆ ಸಿಲುಕಿ ಪರದಾಟ

    ಜೈಲಿಗೆ ಹೋಗಿ ಜಾಮೀನು ಪಡೆದು ಹೊರಗೆ ಬರುತ್ತಿದ್ದಂತೆ ಅಂಥವರಿಗೆ ಭವ್ಯ ಸ್ವಾಗತ ಕೋರುತ್ತಾರೆ. ಜೈಕಾರ ಕೂಗಿ ಸ್ವಾಗತ ಮಾಡುವ ಪರಿಸ್ಥಿತಿ ಬಂದಿದೆ. ಇಂತಹ ಘಟನೆ ಬಗ್ಗೆ ನಾನು ಒಮ್ಮೆ ಪ್ರಶ್ನೆ ಮಾಡಿದ್ದೆ. ಆಗ ಮಹಾತ್ಮ ಗಾಂಧಿ ಕೂಡ ಜೈಲಿಗೆ ಹೋಗಿಲ್ಲವೇ ಅಂತ ನನ್ನನ್ನೇ ಕೇಳಿದರು. ಹಣ ಇದ್ರೆ ಏನು ಬೇಕಾದರೂ ಮಾಡುವ ಜನ ಇದ್ದಾರೆ. ಇಂತಹ ಹಣದಿಂದ‌ ಏನು ಬೇಕಾದರೂ ಮಾಡಬಹುದು ಎನ್ನುವ ಸಮಾಜದಲ್ಲಿ ನಾವಿದ್ದೇವೆ. ನಮ್ಮ ದೇಶದ ಪರಿಸ್ಥಿತಿ ಬದಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕರ್ನಾಟಕ ಲೋಕಾಯುಕ್ತದಲ್ಲಿ ನನ್ನ ಅವಧಿಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೆ. ಸಮಾಜದಲ್ಲಿ ಹಣಕ್ಕೆ ಮಾತ್ರ ಬೆಲೆ ಎಂಬ ಸ್ಥಿತಿ ಇಂದು ಬಂದೊದಗಿದೆ. ವ್ಯಕ್ತಿತ್ವಕ್ಕೆ ಬೆಲೆ ಎಂಬುವುದು ದೂರ ಆಗುತ್ತಿದೆ. ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ನನ್ನ ಅವದಿಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖ್ಯಮುಂತ್ರಿಗಳ ತನಿಖೆ ಮಾಡಿದ್ದೆ ಎಂದರು.

    ಮತದಾರರಿಗೆ ಆಮಿಷ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಮತದಾರರೇ ಉತ್ತಮ ಮಟ್ಟದಲ್ಲಿರುವ ವ್ಯಕ್ತಿಗಳು. ಮತದಾರರ ಕೈಯಿಂದಲೇ ಪ್ರಜಾಪ್ರಭುತ್ವ ಉಳಿಯಬೇಕಿದೆ. ಪ್ರತಿಯೊಬ್ಬ ಮತದಾರರು ಉತ್ತಮ ವ್ಯಕ್ತಿಯನ್ನ ಆಯ್ಕೆ ಮಾಡಬೇಕು. ಜನತಾ ಸೇವೆಗೆ ಬಂದಿದ್ದಾರಾ ಅಥವಾ ಬೇರೆ ಉದ್ದೇಶಕ್ಕೆ ಬಂದಿದ್ದಾರಾ ಎಂದು ನೋಡಿ ಮತ ಹಾಕಬೇಕು. ಜನರ ಹಿತಾಸಕ್ತಿ ಇರುವಂತ ಅಭ್ಯರ್ಥಿ ಆಯ್ಕೆಯಾದರೆ ಪ್ರಜಾಪ್ರಭುತ್ವ ಉಳಿಯುತ್ತದೆ. ಹಣ ಹಾಗೂ ಜಾತಿ, ಧರ್ಮದ ಆಮಿಷಕ್ಕೆ ಒಳಗಾಗದೆ ಉತ್ತಮ ವ್ಯಕ್ತಿಯನ್ನ ಚುನಾಯಿಸಬೇಕು ಎಂದು ಸಲಹೆ ನೀಡಿದರು.

    ಇದನ್ನೂ ಓದಿ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ! ಹೇಗೆ ಅಂತಾ ಗೊತ್ತಾದ್ರೆ ನಿಮ್ಮ ಹುಬ್ಬೇರೋದು ಖಚಿತ

    ಹಣ, ಒಡೆವೆ, ಸಾರಾಯಿ ಪಡೆದುಕೊಂಡು ಮತಹಾಕುತ್ತಾರೆ ಎನ್ನುವುದನ್ನ ಕೇಳಿದ್ದೇನೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದರು. ಇದೇ ವೇಳೆ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಚುನಾವಣೆ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾನೂನಿನಲ್ಲಿ ಎರಡು ವರ್ಷ ಮೇಲ್ಪಟ್ಟು ಶಿಕ್ಷೆಯಾದ್ರೆ ಅವರು ಚುನಾವಣೆಗೆ ನಿಲ್ಲಲು ಅರ್ಹರಲ್ಲ. ಈಗಿರುವ ಕಾನೂನು ಪದ್ಧತಿಯಲ್ಲಿ ಶಿಕ್ಷೆಯಾಗಬೇಕಂದ್ರೆ 50-60 ವರ್ಷ ಬೇಕು. ಹೀಗಾಗಿ ಸಾಕಷ್ಟು ಮಂದಿ ಜಾಮೀನಿನ ಮೇಲೆ ಹೊರಗೆ ಇರುತ್ತಾರೆ. ಜಾಮೀನಿನ ಮೇಲೆ ಹೊರಗಿದ್ದವರು ಚುನಾವಣೆಗೆ ನಿಲ್ಲಬಾರದು ಎನ್ನುವ ಕಾನೂನಿಲ್ಲ. ಆದ್ದರಿಂದ ಈ ಕಾನೂನು ಬದಲಾವಣೆ ಆಗಬೇಕಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಮಾ.1ರಿಂದ ಬಿಜೆಪಿ ವಿಜಯಸಂಕಲ್ಪ ಯಾತ್ರೆ: ಸಚಿವ ಸಿ.ಸಿ.ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಹಿತಿ

    ಮದ್ವೆ ದಿನವೇ ಹೃದಯಾಘಾತಕ್ಕೆ ವಧು ಸಾವು: ನಿಲ್ಲದ ವಿವಾಹ, ಮೃತಳ ತಂಗಿಗೆ ತಾಳಿ ಕಟ್ಟಿದ ವರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts