More

    ಜಲಾಮೃತ ಯೋಜನೆಗೆ ಆರ್ಥಿಕ ಸಂಕಷ್ಟ

    | ಮಂಜುನಾಥ ಕೋಳಿಗುಡ್ಡ, ಬೆಳಗಾವಿ

    ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆಗಳ ಪುನಶ್ಚೇತನಗೊಳಿಸುವ ‘ಜಲಾಮೃತ’ ಯೋಜನೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ 190 ಕೆರೆಗಳ ಹೂಳೆತ್ತಲು ಈ ಮೊದಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಕೈಬಿಟ್ಟಿದೆ.

    ಬರ ಪರಿಹಾರ ನಿಭಾಯಿಸಲು ಮುಂದಾಗಿದ್ದ ಸರ್ಕಾರ ಜಲಾಮೃತ ಯೋಜನೆಯಡಿ ರಾಜ್ಯದ 35 ಸಾವಿರಕ್ಕೂ ಅಕ ಕೆರೆಗಳ ಹೂಳೆತ್ತಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಆರ್ಥಿಕ ಸಮಸ್ಯೆ, ಅತಿವೃಷ್ಟಿಯಿಂದ ಉಂಟಾದ ಹಾನಿ ಮತ್ತು ಸದ್ಯ ಕೆರೆಗಳಲ್ಲಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಹೂಳೆತ್ತುವ ಕಾಮಗಾರಿ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ.

    ಜಲಾಮೃತ ಯೋಜನೆಯಡಿ ಈಗಾಗಲೇ ಪಂಚಾಯತ್ ರಾಜ್ ಮತ್ತು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು 21.5 ಕೋಟಿ ರೂ.ವೆಚ್ಚದಲ್ಲಿ ಜಿಲ್ಲೆಯ 190 ಕೆರೆಗಳ ಹೂಳೆತ್ತಲು ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಅತಿವೃಷ್ಟಿಯಿಂದ ಉಂಟಾದ ಸಾವಿರಾರೂ ಕೋಟಿ ರೂ. ಹಾನಿ ಪರಿಹಾರ, ಬೆಳೆಸಾಲ ಮನ್ನಾ ಇನ್ನಿತರ ನೆರೆ ಪರಿಹಾರ ಕಾಮಗಾರಿಗಳಿಗೆ ಅನುದಾನ ತೊಡಗಿಸಿರುವ ಹಿನ್ನೆಲೆಯಲ್ಲಿ ಹೂಳೆತ್ತುವ ಕ್ರಿಯಾ ಯೋಜನೆಗಳಿಗೆ ನೀಡಿದ್ದ ಅನುಮತಿ ತಡೆ ಹಿಡಿಯಲಾಗಿದೆ.

    ಶೇ. 70ರಷ್ಟು ಕೆರೆಗಳಲ್ಲಿ ನೀರು

    ಈಗಾಗಲೇ ಕೆರೆ ಸಂಜೀವಿನಿ 1 ಮತ್ತು 2ನೇ ಯೋಜನೆಯಡಿ ಜಿಲ್ಲೆಯ ಪ್ರಮುಖ ಕೆರೆಗಳ ಹೂಳೆತ್ತಲಾಗಿದೆ. ಇದೀಗ ಜಲಾಮೃತ ಯೋಜನೆಯಡಿ ದೊಡ್ಡ, ಸಣ್ಣ ಮತ್ತು ಮಧ್ಯಮ ಗಾತ್ರದ ಕೆರೆಗಳಲ್ಲಿನ ಹೂಳೆತ್ತಲು ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಹೆಚ್ಚು ಹಾನಿಯಾಗಿರುವ ಹಾಗೂ ಶೇ. 70ರಷ್ಟು ಕೆರೆಗಳು ನೀರಿನಿಂದ ತುಂಬಿದ್ದರಿಂದ ಸದ್ಯ ಹೂಳೆತ್ತುವ ಪ್ರಸ್ತಾವನೆ ಕೈಬಿಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು ತಿಳಿಸಿದ್ದಾರೆ.


    4.75 ಕೋಟಿ ರೂಪಾಯಿ ಅನುದಾನ

    ಪ್ರವಾಹಕ್ಕಿಂತ ಮೊದಲು ಕೆರೆಗಳಲ್ಲಿ ನೀರಿನ ಪ್ರಮಾಣಕ್ಕಿಂತ ಮಣ್ಣಿನ ಪ್ರಮಾಣ ಹೆಚ್ಚಾಗಿದ್ದರಿಂದ ಮಳೆ ನೀರಿನ ಸಂಗ್ರಹ ಕಡಿಮೆಯಾಗಿ ಅಂತರ್ಜಲಮಟ್ಟ ವೃದ್ಧಿಯಾಗುತ್ತಿರಲಿಲ್ಲ. ಹೀಗಾಗಿ ಭವಿಷ್ಯದ ದಿನಗಳಲ್ಲಿ ನೀರಿನ ಸಮಸ್ಯೆ ಜಟಿಲಗೊಳ್ಳಬಾರದು ಎಂಬ ಉದ್ದೇಶದಿಂದ ಸರ್ಕಾರವು ಕಳೆದ ಮೂರು ವರ್ಷಗಳ ಅವಯಲ್ಲಿ ಕೆರೆ ಸಂಜೀವಿನಿ 1 ಮತ್ತು 2ಯೋಜನೆ ಜಾರಿಗೊಳಿಸಿತ್ತು. ಕೆರೆ ಸಂಜೀವಿನಿ-1 ಯೋಜನೆಯಡಿ ಜಿಲ್ಲೆಯ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ಹಾಗೂ ಹೂಳೆತ್ತಲು ಪ್ರತಿ ತಾಲೂಕಿಗೆ 50 ಲಕ್ಷ ರೂ.ನಂತೆ 4.75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಮಳೆ ಆರಂಭವಾಗಿದ್ದರಿಂದ ಕೆರೆ ಪುನಶ್ಚೇತನಗೊಳಿಸುವ ಕಾಮಗಾರಿ ಅರ್ಧದಲ್ಲಿಯೇ ಕೈಬಿಡಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ಕೆರೆಗಳ ಹೂಳೆತ್ತುವ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಅನುಮತಿ ದೊರೆತಿಲ್ಲ. ಕೆರೆಗಳಲ್ಲಿ ನೀರು ತುಂಬಿದ್ದರಿಂದ ಹೂಳೆತ್ತುವ ಕಾಮಗಾರಿ ಕೈಗೊಂಡಿಲ್ಲ.
    ಡಾ. ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts