More

    ಹೊತ್ತಿ ಉರಿಯುತ್ತಿದೆ ಹೊಸಕೋಟೆ

    ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೊಲೆ, ಮೂವರ ಮೇಲೆ ಮಾರಣಾಂತಿಕ ಹಲ್ಲೆಕಾಂಗ್ರೆಸ್ ಬಿಜೆಪಿ ಜಟಾಪಟಿ

    ವಿಜಯವಾಣಿ ಸುದ್ದಿಜಾಲ ನಂದಗುಡಿ/ಹೊಸಕೋಟೆ
    ತೀವ್ರ ಜಿದ್ದಾಜಿದ್ದಿನ ಮತಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಹೊಸಕೋಟೆಯಲ್ಲಿ ದ್ವೇಷದ ದಳ್ಳುರಿ ಮುಂದುವರಿದಿದೆ. ಅದು ಚುನಾವಣಾ ಲಿತಾಂಶದ ಬಳಿಕ ಮತ್ತಷ್ಟು ಭುಗಿಲೆದ್ದಿದೆ. ಪರಿಣಾಮವಾಗಿ ಪ್ರತ್ಯೇಕ ಪ್ರಕರಣಗಳಲ್ಲಿ ನಂದಗುಡಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಕೊಲೆಯಾಗಿದ್ದರೆ, ಕಸಬಾ ಹೋಬಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ.
    ಚುನಾವಣಾ ಫಲಿತಾಂಶದ ಬಳಿಕ ಹೊಸಕೋಟೆ ತಾಲೂಕಿನ ಡಿ.ಶೆಟ್ಟಹಳ್ಳಿಯಲ್ಲಿ ಕೃಷ್ಣಪ್ಪ ಎಂಬುವರ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದಕ್ಕೆ ಆಕ್ಷೇಪಿಸಿದ ಕೃಷ್ಣಪ್ಪ (55) ಹಾಗೂ ಕುಟುಂಬದವರ ಮೇಲೆ ಹಲ್ಲೆ ನಡೆಲಾಗಿದೆ. ಈ ವೇಳೆ ಕೃಷ್ಣಪ್ಪ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಪತ್ನಿ ಹಾಗೂ ಪುತ್ರನ ಮೇಲೂ ಹಲ್ಲೆ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಆರೋಪಿಗಳಾದ ಆದಿತ್ಯ ಗಣೇಶ್, ಹರೀಶ್, ಚನ್ನಕೇಶವ ಎಂಬುವರ ಮೇಲೆ ದೂರು ದಾಖಲಾಗಿದೆ.

    ಮತ ಹಾಕಿದ್ದಕ್ಕೆ ಏಟು: ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಕುರುಬರಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ನವೀನ್ ಕುಮಾರ್ ಎಂಬಾತನ ಮೇಲೆ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ವೆಂಕಟೇಶ್, ನಾರಾಯಣಸ್ವಾಮಿ, ಹರೀಶ್ ಹಾಗೂ ಅಶ್ವತ್ಥ್‌ನಾರಾಯಣ ಎಂಬುವರು ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಹೊಸಕೋಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
    ಭಾನುವಾರ ಜಮೀನಿನ ಕೆಲಸ ಮುಗಿಸಿಕೊಂಡು ಮನೆೆಗೆ ವಾಪಸ್ ಆಗುತ್ತಿದ್ದ ನವೀನ್ ಎಂಬುವರ ಮೇಲೆ ಮುಗಿಬಿದ್ದ ಆರೋಪಿಗಳು ಕಾಂಗ್ರೆಸ್‌ಗೆ ಮತ ಹಾಕಿದ್ದೀಯಾ ಎಂದು ಜಗಳ ತೆಗೆದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ಮಧ್ಯೆ ಪ್ರವೇಶಿಸಿದ್ದಾರೆ. ಆರೋಪಿಗಳು ಮುಂದಿನ ದಿನಗಳಲ್ಲಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ನವೀನ್‌ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


    ಶವವಿಟ್ಟು ಪ್ರತಿಭಟನೆ: ನಂದಗುಡಿ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾನುವಾರು ಸಾವಿರಾರು ಬಿಜೆಪಿ ಕಾರ್ಯಕರ್ತರು ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು. ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪಟ್ಟು ಹಿಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್ ಹಾಗೂ ಜಿಪಂ ಮಾಜಿ ಸದಸ್ಯ ಸಿ.ನಾಗರಾಜ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ೋಷಣೆ ಕೂಗಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು. ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆದಿತ್ಯನನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ದಿವಾಕರ್ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.


    ದಾಯಾದಿಗಳ ಕಲಹ: ನಂದಗುಡಿ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಕೃಷ್ಣಪ್ಪ ತನ್ನ ಸೋದರನ ಮಗನಿಂದಲೇ ಹತ್ಯೆಯಾಗಿದ್ದಾನೆ ಎನ್ನಲಾಗಿದೆ. ಎರಡೂ ಕುಟುಂಬದ ಸದಸ್ಯರು ಕಾಂಗ್ರೆಸ್ ಹಾಗೂ ಬಿಜೆಪಿ ಪರವಾಗಿ ಗುರುತಿಸಿಕೊಂಡಿದ್ದರು. ಎರಡು ಕುಟುಂಬದ ನಡುವೆ ವೈಷಮ್ಯ ಮೂಡಿತ್ತು. ಇದು ಚುನಾವಣಾ ಲಿತಾಂಶದ ಬಳಿಕ ಸ್ಫೋಟಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಚಿಕ್ಕಪ್ಪನಿಂದಲೇ ಹಲ್ಲೆ: ಕಸಬಾ ಹೋಬಳಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಚಿಕ್ಕಪ್ಪ ನಾರಾಯಣಸ್ವಾಮಿ ಪ್ರಮುಖ ಆರೋಪಿಯಾಗಿದ್ದಾನೆ. ಮತಹಾಕಿದ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ನಡೆಸಲಾಗಿದೆ. ಈ ವೇಳೆ ಮಧ್ಯೆ ಪ್ರವೇಶಿಸಿ ಸಹೋದರನ ಮೇಲೂ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

    ಆಸ್ಪತ್ರೆಗೆ ಮಾಜಿ ಸಚಿವ ಭೇಟಿ: ಆಸ್ಪತ್ರೆಗೆ ಮಾಜಿ ಸಚಿವ ಎಂಟಿಬಿ ನಾಗರಾಜು ಭೇಟಿ ನೀಡಿ ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿದರು. ಚುನಾವಣೆ ಫಲಿತಾಂಶ ಪ್ರಕಟವಾದ 4 ಗಂಟೆಯಲ್ಲಿ ಇಂತಹ ಘಟನೆ ನಡೆದಿದೆ. ಮನೆ ಮುಂದೆ ಪಟಾಕಿ ಹೊಡೆದ ಬಗ್ಗೆ ಕೇಳಲು ಬಂದವರ ಮೇಲೆ ಹಲ್ಲೆ ನಡೆಸೋದು ಶಾಸಕರ ಹಿಂಬಾಲಕರ ವರ್ತನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts