More

    ಕೂಲಿ ಕಾರ್ಮಿಕರಿಗಾಗಿ ನಿರಂತರ ಖಾತ್ರಿ ಕೆಲಸ; ಕುಕನೂರು ತಾಪಂ ಇಒ ಸೋಮಶೇಖರ ಬಿರಾದಾರ್ ಹೇಳಿಕೆ

    ಕುಕನೂರು: ಗ್ರಾಮೀಣ ಕೂಲಿ ಕಾರ್ಮಿಕರಿಗೆ ಏ.1 ರಿಂದ ಜೂನ್ 30 ರವರೆಗೆ ನರೇಗಾ ಯೋಜನೆಯಡಿ ನಿರಂತರ ಕೆಲಸ ನೀಡಲಾಗುವುದು ಎಂದು ತಾಪಂ ಇಒ ಸೋಮಶೇಖರ ಬಿರಾದಾರ್ ಹೇಳಿದರು.

    ತಾಲೂಕಿನ ಬೆಣಕಲ್ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿ ಸೋಮವಾರ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಲ ಸಂರಕ್ಷಣೆಗೆ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಸುಧಾರಣೆ, ಚೆಕ್ ಡ್ಯಾಮ್ ಹೂಳೆತ್ತುವುದು ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಮಳೆಗಾಲಕ್ಕೂ ಮುನ್ನ ಜಲಮೂಲಗಳ ಪುಶ್ಚೇತನವಾಗಲಿದೆ. ಬೇಸಿಗೆಯಲ್ಲಿ ಕಾರ್ಮಿಕರಿಗೆ ನಿರಂತರ ಕೆಲಸ ಸಿಗಲಿದೆ. ಕೆಂದ್ರ ಸರ್ಕಾರ ಕೂಲಿ ಮೊತ್ತ 20 ರೂ. ಹೆಚ್ಚಿಸಿದ್ದು, ಪರಿಕರ ವೆಚ್ಚ ಸೇರಿ 319 ಕೂಲಿ ಸಿಗಲಿದೆ. ಮಹಿಳಾ ಕೂಲಿಕಾರರು ನರೇಗಾ ಕೆಲಸದಲ್ಲಿ ಭಾಗವಹಿಸಬೇಕು. ಕೇಂದ್ರ ಸರ್ಕಾರ ಹೊಸ ತಂತ್ರಜ್ಞಾನ ಜಾರಿಗೆ ತಂದಿದ್ದು, ಇದರಿಂದ ಕೂಲಿಕಾರರಿಗೆ ಸ್ಥಳದಲ್ಲಿಯೇ ಹಾಜರಾತಿ ಹಾಕುವುದರಿಂದ ಕೂಲಿ ಪಾವತಿಯಲ್ಲಿ ಯಾವುದೆ ಸಮಸ್ಯೆ ಬರುವುದಿಲ್ಲ ಎಂದರು.

    ತಾಪಂ ಸಹಾಯಕ ನಿರ್ದೇಶಕ ರಾಮಣ್ಣ ದೊಡ್ಡಮನಿ, ಗ್ರಾಪಂ ಉಪಾಧ್ಯಕ್ಷ ವಿರುಪಣ್ಣ ಪೂಜಾರ, ಸದಸ್ಯ ಶಿವಕುಮಾರ ಸೊಪ್ಪಿಮಠ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಎಂಐಎಸ್ ಸಂಯೋಜಕ ಗಿರೀಶ್ ಗೂಡೂರ, ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಬಿಎಫ್‌ಟಿ ಸಂತೋಷ ದೊಡ್ಡಮನಿ, ಗ್ರಾಮ ಕಾಯಕ ಮಿತ್ರ ಸವಿತಾ ಮುತ್ತಾಳ, ಎಂಬಿಕೆ ಸುನೀತಾ ಬಡಿಗೇರ, ದೇವಪ್ಪ ಮರಿಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts