More

    ಮತದಾರರ ಬಳಿ ಧೈರ್ಯವಾಗಿ ಮತ ಕೇಳಿ: ಶಾಸಕ ತಿಪ್ಪಾರೆಡ್ಡಿ ಹೇಳಿಕೆ

    ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳು ಮನೆ ಮನೆಗೂ ಮುಟ್ಟಿವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಮತದಾರರ ಬಳಿ ಹೋಗಿ ಧೈರ್ಯವಾಗಿ ಮತ ಕೇಳಬಹುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾರ್ಯಕರ್ತರಿಗೆ ತಿಳಿಸಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ನಗರ ಮಂಡಲ ಪದಾಧಿಕಾರಿಗಳ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿ, ಎಲ್ಲ ಯೋಜನೆಗಳನ್ನು ಕ್ಷೇತ್ರದ ಮತದಾರರಿಗೆ ತಲುಪಸಿದ್ದೇನೆ. ನಗರದ ಎಲ್ಲ ಕಡೆ ಸಿಸಿ ರಸ್ತೆ, ಬೀದಿ ದೀಪ, ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. 35 ವಾರ್ಡ್‌ಗಳಲ್ಲಿ ನಮ್ಮ ಮತದಾರರಿದ್ದಾರೆ ಎಂದರು.

    ಪಕ್ಷದ ಕಾರ್ಯಕರ್ತರು ಯಾವುದೇ ಮುಜುಗರವಿಲ್ಲದೆ ಮತದಾರರ ಬಳಿ ಹೋಗಿ ಚುನಾವಣೆಯಲ್ಲಿ ಮತ ಕೇಳಬೇಕು. ಎಲ್ಲಿಯಾದರೂ ದೂರುಗಳು ಬಂದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.

    ಕೊಳಗೇರಿಗಳಲ್ಲಿ 40,000 ಜನ ವಾಸಿಸುತ್ತಿದ್ದಾರೆ. ಅಲ್ಲಿ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳೋಣ. ಸ್ಲಂನಲ್ಲಿ ಮನೆಗಳಿಗೆ ಖಾತೆ ಇಲ್ಲದಿದ್ದರೂ ಖಾತೆ ಮಾಡಿಸಬೇಕು. ಇಲ್ಲಿ ಯಾವುದೇ ಜಾತಿ, ವರ್ಗದ ಪ್ರಶ್ನೆ ಇಲ್ಲ. ಎಲ್ಲರಿಗೂ ಸರ್ಕಾರದ ಸವಲತ್ತುಗಳನ್ನು ಮುಟ್ಟಿಸುವುದಷ್ಟೇ ನಮ್ಮ ಕೆಲಸ ಎಂದು ಹೇಳಿದರು.

    ತಾಪಂ, ಜಿಪಂ ಹಾಗೂ 2023ರಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಕೇಳಲು ಪಕ್ಷದಲ್ಲಿ ಸಾಕಷ್ಟು ಆಧಾರಗಳಿವೆ. ನಗರೋತ್ಥಾನ ಯೋಜನೆಯಡಿ ನಗರಕ್ಕೆ 40 ಕೋಟಿ ರೂ. ಬಂದಿದೆ. ಇದರಲ್ಲಿ ರಸ್ತೆ, ಉದ್ಯಾನವನ, ದೀಪಗಳಿಗೆ ಬಳಸಲಾಗಿದೆ. ಇನ್ನು 25 ಕೋಟಿ ರೂ. ತರುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಬಿಜೆಪಿ ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ, ಪಕ್ಷದ ಕೆಲಸಕ್ಕೆ ಪ್ರತಿಯೊಬ್ಬರು ಸಮಯ ಮೀಸಲಿಡಬೇಕಿದೆ. ನಗರದ 35 ವಾರ್ಡ್‌ಗಳಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಶಾಸಕರು ಮೂಲ ಸೌಲಭ್ಯ ಕಲ್ಪಿಸಿದ್ದಾರೆ. ಜತೆಗೆ ನಗರಸಭೆ ಸದಸ್ಯರು ನನ್ನ ಜತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬುರುಡೆ ಕಟ್ಟೆ, ಉಪಾಧ್ಯಕ್ಷ ಚಂದ್ರಿಕಾ ಲೋಕನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ಹರೀಶ್, ಸುರೇಶ್, ತಾಪಂ ಮಾಜಿ ಅಧ್ಯಕ್ಷ ಕಲ್ಲಂ ಸೀತರಾಮ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts