More

    ವಿಜೃಂಭಣೆಯ ವೀರಾಂಜನೇಯ ಬ್ರಹ್ಮರಥೋತ್ಸವ

    ಹುಣಸೂರು: ಇತಿಹಾಸ ಪ್ರಸಿದ್ಧ ಹುಣಸೂರು ತಾಲೂಕಿನ ಬಾಚಳ್ಳಿ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿಯ 68ನೇ ವರ್ಷದ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ದೇವರ ತೇರನ್ನು ಎಳೆದು ಪುನೀತರಾದರು.
    ಭಾನುವಾರ ಮಧ್ಯಾಹ್ನ 1.30ಕ್ಕೆ ವೀರಾಂಜನೇಯಸ್ವಾಮಿಯ ಬೆಳ್ಳಿ ವಿಗ್ರಹ ಹಾಗೂ ರಾಮ-ಲಕ್ಷ್ಮಣ-ಸೀತೆಯ ಉತ್ಸವಮೂರ್ತಿಯನ್ನು ರಥಕ್ಕೇರಿಸಿದ ನಂತರ ಪೂಜೆ ಸಲ್ಲಿಸಲಾಯಿತು. ಜಾತ್ರಾ ಮಾಳದಿಂದ ಭಕ್ತರು ರಥವನ್ನು ಎಳೆದು ದೇವಸ್ಥಾನದ ಹಿಂಭಾಗಕ್ಕೆ ತಂದು ನಿಲ್ಲಿಸಿದರು. ನಂತರ ಹನುಮ ಭಕ್ತರು ರಥವನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಇದಕ್ಕೂ ಮುನ್ನ ಶನಿವಾರದಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನವ ವಧುವರರು ಹಾಗೂ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಹಣ್ಣು-ದವನ ಎಸೆದು ಭಕ್ತಿ ಭಾವ ಮೆರೆದರು.

    ಈ ಜಾತ್ರೆಗೆ ಬಾಚಳ್ಳಿಬಯಲಿನ ರೈತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಕುಟುಂಬ ಸಮೇತರಾಗಿ ತಂಡೋಪತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಸರದಿ ಸಾಲಿನಲ್ಲಿ ನಿಂತು ಜೀರ್ಣೋದ್ಧಾರಗೊಳ್ಳುತ್ತಿರುವ ದೇವಾಲಯದಲ್ಲಿನ ಆಂಜನೇಯಸ್ವಾಮಿಯ ದರ್ಶನ ಮಾಡಿದರು. ಈ ಬಾರಿ ಜಾತ್ರೆಗೆ ನೂರಕ್ಕೂ ಹೆಚ್ಚು ಜೋಡೆತ್ತುಗಳು, ಬೀಜದ ಹೋರಿ ಕಟ್ಟಲಾಗಿತ್ತು. ವ್ಯಾಪಾರವೂ ಭರ್ಜರಿಯಾಗಿತ್ತು.

    ಪ್ರಸಾದ ವ್ಯವಸ್ಥೆ: ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ದಾನಿಗಳು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಬಿಸಿಲಿನ ಝಳದಿಂದ ಬಾಯಾರಿದವರಿಗೆ ಬಾಚಳ್ಳಿ ರಸ್ತೆಯಲ್ಲಿ ನಂದಿ ಟ್ರೇಡರ್ಸ್‌ನವರು ಮಜ್ಜಿಗೆ-ಪಾನಕ ವಿತರಿಸಿದರು.
    ರಥೋತ್ಸವದಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ಮಾಜಿ ಸಚಿವ ಎಚ್.ವಿಶ್ವನಾಥ್ ಭಾಗವಹಿಸಿದ್ದರು. ವೃತ್ತ ನಿರೀಕ್ಷಕ ಪೂವಯ್ಯ, ಎಸ್‌ಐ ಶಿವಪ್ರಕಾಶ್ ನೇತೃತ್ವದಲ್ಲಿ ಪೊಲೀಸರು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರು.

    ಇಂದು ತೆಪ್ಪೋತ್ಸವ: ಜ.27ರಂದು ಬೆಳಗ್ಗೆ 10ಕ್ಕೆ ಗ್ರಾಮದ ಬಳಿಯ ಉದ್ದೂರು ನಾಲೆಯಲ್ಲಿ ವೀರಾಂಜನೇಯಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts