More

    ಸಿಮೆಂಟ್ ಕಮೀಷನ್ ಕೊಡದಿದ್ದಕ್ಕೆ ತಂದೆ-ಮಗನಿಗೆ ಹಲ್ಲೆ, ಜೀವ ಬೆದರಿಕೆ

    ಶಿವಮೊಗ್ಗ: ಸಿಮೆಂಟ್ ಚೀಲದ ಮೇಲೆ ಕಮೀಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ವಿನೋಬನಗರ ಸಿಐಟಿಬಿ ಕಾಂಪ್ಲೆಕ್ಸ್‌ನ ರೇಣುಕಾ ಟ್ರೇಡರ್ಸ್‌ನ ಮಾಲೀಕ ಮತ್ತು ಅವರ ಪುತ್ರನಿಗೆ ಲಾರಿ ಚಾಲಕ ಸೇರಿ ಮೂವರು ಹಲ್ಲೆ ನಡೆಸಿದ್ದಾರೆ.
    ಟ್ರೇಡರ್ಸ್‌ನ ಮಾಲೀಕ ನಾಗೇಶ್‌ರಾವ್ ಮತ್ತು ಅವರ ಪುತ್ರ ಎನ್.ಸುದರ್ಶನ್ ಹಲ್ಲೆಗೆ ಒಳಗಾದವರು. ಚಾಲಕ ಹನುಮಂತ, ಆಕಾಶ್ ಮತ್ತು ಪ್ರಮೋದ್ ಹಲ್ಲೆ ನಡೆಸಿದವರು.
    ನಾಗೇಶ್‌ರಾವ್ ಅವರು 22 ವರ್ಷಗಳಿಂದ ಟ್ರೇಡರ್ಸ್ ನಡೆಸಿಕೊಂಡು ಬಂದಿದ್ದು ಅ.13ರಂದು ಸಂಜೆ ತಂದೆ-ಮಗ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಬಂದ ಹನುಮಂತ 20 ಚೀಲ ಸಿಮೆಂಟ್ ಖರೀದಿಸುವುದಾಗಿ ಹೇಳಿ 350 ರೂ. ಬ್ಯಾಗ್‌ಗೆ 400 ರೂ. ಬಿಲ್ ಹಾಕಿಕೊಟ್ಟು ಪ್ರತಿ ಚೀಲಕ್ಕೆ 50 ರೂ. ಕಮೀಷನ್ ಕೊಡುವಂತೆ ಕೇಳಿದ್ದ.
    ಸ್ವಲ್ಪ ಹೊತ್ತಿನಲ್ಲೇ ಸಿಮೆಂಟ್ ಖರೀದಿಸಲು ಆತ ಹೇಳಿದ್ದ ವ್ಯಕ್ತಿ ಬಂದು ಪ್ರತಿ ಬ್ಯಾಗ್‌ಗೆ 345 ರೂ.ನಂತೆ 20 ಚೀಲ ಜೆಜಿ ಸಿಮೆಂಟ್ ಖರೀದಿಸಿದ್ದರು. ಆನಂತರ ಮತ್ತೆ ಅಂಗಡಿಗೆ ಬಂದ ಹನುಮಂತ ತಮ್ಮ ಕಮೀಷನ್ ಕೊಡುವಂತೆ ಕೇಳಿದ್ದ. ಕಮೀಷನ್ ಕೊಡಲು ನಿರಾಕರಿಸಿದಾಗ ಆಕಾಶ್ ಮತ್ತು ಪ್ರಮೋದ್ ಅವರನ್ನು ಕರೆಯಿಸಿ ತಂದೆ-ಮಗನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಈ ಬಗ್ಗೆ ನಾಗೇಶ್‌ರಾವ್ ಅವರು ವಿನೋಬನಗರ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts