More

    ಬರ್ತ್​ಡೇ ದಿನವೇ ಬದ್ಧ ವೈರಿಗಳ ಜತೆ ಮಾಂಸದೂಟ ಸವಿದ ಕಮಲ್​ ಹಾಸನ್​!!

    ಚೆನ್ನೈ: ಕಾಲಿವುಡ್​ ಸೂಪರ್​ ಸ್ಟಾರ್ ಕಮಲ್​ ಹಾಸನ್​ ಲಾಕ್​ಡೌನ್​ನಿಂದ ಹೊರಬಂದಿದ್ದಾರೆ. ಸಿನಿಮಾ ಕೆಲಸಗಳತ್ತ ಮುಖಮಾಡಿದ್ದಾರೆ. ಅರ್ಧಕ್ಕೆ ಶೂಟಿಂಗ್​ ಮುಗಿಸಿಕೊಂಡಿದ್ದ ಸಿನಿಮಾಗಳ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆಯೇ ಅವರ ಜನ್ಮದಿನ ಬಂದ ಹಿನ್ನೆಲೆಯಲ್ಲಿ, ಈ ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

    ಇದನ್ನೂ ಓದಿ: ಆ್ಯಕ್ಟ್​ 1978 ಬಿಡುಗಡೆಗೆ ದಿನಾಂಕ ನಿಗದಿ

    ಹೌದು ಬದ್ಧ ವೈರಿಗಳ ಜತೆ ಕೂತು ಬಾಳೆ ಎಲೆಮೇಲೆ ಬಾಡೂಟ ಸವಿದಿದ್ದಾರೆ. ಅದಾದ ಬಳಿಕ ಕತ್ತಿಯಿಂದ ಅವರ ಸಂಹಾರವನ್ನೂ ಮಾಡಿದ್ದಾರೆ. ಅಷ್ಟಕ್ಕೂ ಇದೆಲ್ಲವೂ ಸಿನಿಮಾ ಕಥೆ. ಕಮಲ್ ಜನ್ಮದಿನದ ಪ್ರಯುಕ್ತ ಶನಿವಾರ ಸಂಜೆ ಬಿಡುಗಡೆಯಾದ ‘ವಿಕ್ರಂ’ ಚಿತ್ರದ ಟೀಸರ್​ನ ಝಲಕ್​.

    1986ರಲ್ಲಿ ಕಮಲ್​ ನಟಿಸಿದ್ದ ವಿಕ್ರಂ ಚಿತ್ರದ ಶೀರ್ಷಿಕೆಯನ್ನೇ ಇದೀಗ ಮತ್ತೊಮ್ಮೆ ಬಳಸಿಕೊಂಡಿದ್ದು, ನೂತನ ಸಿನಿಮಾದ ಟೈಟಲ್​ ಟೀಸರ್​ಗೆ ಅಭಿಮಾನಿ ವಲಯದಿಂದ ಅಭೂತಪೂರ್ವ ಮೆಚ್ಚುಗೆ ಸಿಗುತ್ತಿದೆ. ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಕಮಲ್​ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

    ಟೀಸರ್​ ತುಣುಕು ಇಲ್ಲಿದೆ…

    ಶತ್ರುಗಳ ಜತೆ ಊಟ ಮಾಡಿದ ಬಳಿಕ ಈಗ ಶುರುಮಾಡೋಣವೇ ಎಂದು ಕತ್ತಿ ಎಸೆದಾಗ ವಿಕ್ರಂ ಶೀರ್ಷಿಕೆ ಅನಾವರಣವಾಗುತ್ತದೆ. ಸದ್ಯ ಶೀರ್ಷಿಕೆ ಟೀಸರ್ ಸಲುವಾಗಿ ಶೂಟಿಂಗ್​ ಮಾಡಲಾಗಿದ್ದು, ಶೀಘ್ರದಲ್ಲಿ ಚಿತ್ರೀಕರಣಕ್ಕೆ ತಂಡ ಚಾಲನೆ ನೀಡಲಿದೆ. ಇತ್ತ ವಿಜಯ್ ಜತೆ ಮಾಸ್ಟರ್ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ನಿಮಗೊಂದು ಸಿಹಿ ಸುದ್ದಿ … ಶುರುವಾಯ್ತು ವೆಬ್​ಸೀರೀಸ್​ನ ಚಿತ್ರೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts