More

    ಹುದ್ದೆಗಳ ಭರ್ತಿ ಮುಂದೂಡಲು ಆಗ್ರಹ

    ವಿಜಯಪುರ: ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಸ್ವರ್ಧಾತ್ಮಕ ಪರೀಕ್ಷೆಗಳ ವಿಳಂಬ ನೀತಿಯಿಂದ ತೀವ್ರ ತೊಂದರೆಯುಂಟಾಗಿದ್ದು ಪದವೀಧರರ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದೂಡಲು ಆಗ್ರಹಿಸಿ ಎಬಿವಿಪಿಯಿಂದ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
    ಪ್ರತಿ ವರ್ಷ ಪದವೀಧರರ ಪರೀಕ್ಷೆಗಳು ಮೇ ಕೊನೆಯಲ್ಲಿ ಮುಕ್ತಾಯಗೊಂಡು ಜೂನ್ ಮಧ್ಯಂತರದಲ್ಲಿ ಲಿತಾಂಶ ಪ್ರಕಟಗೊಳ್ಳುತ್ತಿತ್ತು. ಈ ಬಾರಿ ಕರೊನಾ ಮಹಾಮಾರಿಯಿಂದಾಗಿ ಪದವೀಧರರ ಪರೀಕ್ಷೆಗಳು ನಡೆದಿಲ್ಲ. ಆದರೆ, ಪ್ರತಿ ವರ್ಷದಂತೆ ಈ ವರ್ಷವೂ ಪದವಿಧರರ ಹುದ್ದೆಗಳನ್ನು ಭರ್ತಿ ಮಾಡುತ್ತಿರುವ ಕಾರಣ ಪರೀಕ್ಷೆ ಬರೆಯದ ಪದವಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷದ ಪದವೀಧರರು ಸದರಿ ಹುದ್ದೆಗಳಿಗೆ ಅರ್ಹರಲ್ಲ ಎಂಬ ನಿಯಮ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಪದವೀಧರರ ಹುದ್ದೆ ಭರ್ತಿ ಮುಂದೂಡಲು ಕಾರ್ಯಕರ್ತರು ಆಗ್ರಹಿಸಿದರು.
    ಎಬಿವಿಪ ಸದಸ್ಯರಾದ ವಿಜಯಮಹಾಂತೇಶ ಅಳಗುಂಡಗಿ, ಚೇತನ ಕುಲಕರ್ಣಿ, ಮಂಜುನಾಥ ಗೋಣಿ, ಆಶಿಶ್ ಪವಾರ ಮತ್ತಿತರರಿದ್ದರು.

    ಹುದ್ದೆಗಳ ಭರ್ತಿ ಮುಂದೂಡಲು ಆಗ್ರಹ
    ಹುದ್ದೆಗಳ ಭರ್ತಿ ಮುಂದೂಡಲು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts