More

    ಎಲ್ಲರಲ್ಲೂ ಸಹಕಾರ ಮನೋಭಾವ ಅಗತ್ಯ

    ವಿಜಯಪುರ: ಸಹಕಾರ ಎಂಬುದು ಸಹಬಾಳ್ವೆಯ ಅಡಿಪಾಯ. ಸಮಾಜದ ವ್ಯವಸ್ಥೆ ಸಹಕಾರ ತತ್ವದ ಮೇಲೆ ರೂಪಿತವಾಗಿದೆ. ಎಲ್ಲರಲ್ಲೂ ಸಹಕಾರದ ಮನೋಭಾವ ಇರಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಾಹಿತಿ ಸಂಗಮೇಶ ಬದಾಮಿ ಹೇಳಿದರು.
    ನಗರದಲ್ಲಿ ಸಿದ್ಧ್ದಸಿರಿ ಸೌಹಾರ್ದ ಸಹಕಾರಿ ಸಂಸ್ಥೆಯ 131ನೇ ನೂತನ ಶಾಖೆಯನ್ನು ಶುಕ್ರವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ಧ ಯಾವಾಗಲೂ ತಯಾರಿಯಲ್ಲಿರುವುದು, ಸಿರಿ ಸಂಪತ್ತು ಸೌಹಾರ್ದ ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬುದು ಸಹಕಾರಿ ಕ್ಷೇತ್ರದ ಧ್ಯೇಯವಾಗಿದೆ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಬಸನಗೌಡ ರಾ.ಪಾಟೀಲ (ಯತ್ನಾಳ) ಮಾತನಾಡಿ, ಮನುಷ್ಯ ಜೀವನದಲ್ಲಿ ಸಾಧನೆಗಳನ್ನು ಮಾಡಬೇಕು. ಮಾತನಾಡುವುದಷ್ಟೇ ಸಾಧನೆಯಲ್ಲ. ಮನಸ್ಸಿಲ್ಲದೆ ಮಾಡುವ ಕೆಲಸ ಯಶಸ್ಸು ತರಲಾರದು. ಕ್ರಿಯಾಶೀಲ ಬದುಕು ಜೀವನದ ಉನ್ನತಿಗೆ ಕಾರಣ. ಪ್ರಾಚೀನತೆ ಮತ್ತು ಆಧುನಿಕತೆ ಜೊತೆಯಲ್ಲಿ ಸಾಗಿದರೆ ಬದುಕಿನಲ್ಲಿ ಶ್ರೇಯಸ್ಸು ಮತ್ತು ಶಾಂತಿ ಪಡೆಯಲು ಸಹಕಾರಿಯಾಗುತ್ತದೆ ಎಂದರು.

    ಸ್ವಾಮಿ ನರೇಶಾನಂದಾಜೀ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಜಯ ಪಾಟೀಲ, ಡಾ.ಮುಕುಂದ ಗಲಗಲಿ, ಗಂಗಾಧರ ತೆಲಗಿ, ಅಶೋಕ ಸೌದಾಗರ, ಸಂತೋಷ ಪಾಟೀಲ, ಸಂತೋಷ ಬಿರಾದಾರ, ರಾಜಶೇಖರ ಪಾಟೀಲ, ರವಿಕಿರಣ ಆಲಗೂರ, ಅಶೋಕ ಹಂಜಿ, ಸಂಜಯ ಜಂಬೂರೆ, ಸಂಜಯ ಜಾಧವ, ಅಮರಣ್ಣವರ, ಅಂಬಾದಾಸ ಚವಾಣ್, ರಾಘವ ಅಣ್ಣಿಗೇರಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts