More

    ಗುಡಿ ಕೈಗಾರಿಕೆಯಿಂದ ಆರ್ಥಿಕತೆ ವೃದ್ಧಿ

    ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆಯಂತಹ ವಿವಿಧ ಸ್ವಂತ ಉದ್ಯೋಗಗಳನ್ನು ಕೈಗೊಂಡು ಆರ್ಥಿಕವಾಗಿ ಬೆಳವಣಿಗೆಯಾಗಲು ಸಾಕಷ್ಟು ಅವಕಾಶಗಳಿವೆ. ಅವುಗಳಲ್ಲಿ ಅಗರಬತ್ತಿ ಉದ್ಯಮವೂ ಒಂದು. ಈ ಉದ್ಯಮಕ್ಕೆ ನಿರಂತರ ಬೇಡಿಕೆಯಿದೆ. ಅದನ್ನು ಬಳಸಿ ಸ್ವಂತ ಉದ್ಯೋಗಿಗಳಾಗಿ ಎಂದು ದಾವಣಗೆರೆಯ ಯಶಸ್ವಿ ಅಗರಬತ್ತಿ ಉದ್ಯಮಿ ಪಿ. ಪ್ರಕಾಶ್ ಹೇಳಿದರು.
    ನಗರದ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳವರೆಗೆ ನಡೆದ ಅಗರಬತ್ತಿ ತಯಾರಿಕೆ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
    ಅಗರಬತ್ತಿ ಉದ್ಯಮವನ್ನು ಸ್ವ ಸಹಾಯ ಸಂಘಗಳ ಮೂಲಕ ಗುಂಪು ಚಟುವಟಿಕೆಯಾಗಿ ಕೈಗೊಂಡರೆ ಉದ್ಯೋಗಗಳ ಸೃಷ್ಟಿಯಾಗುತ್ತದೆ. ಹಾಗೂ ಉದ್ಯಮವನ್ನು ವಿಸ್ತರಿಸಲು ಸಹಾಯಕವಾಗುತ್ತದೆ ಎಂದರು.
    ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ರಾಜೇಂದ್ರ ಡಿ. ಜೈನಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಂಸ್ಥೆಯಲ್ಲಿ ಕಲಿತ ವಿಷಯಗಳನ್ನು ಕೈಗೊಳ್ಳುವ ಉದ್ಯಮದಲ್ಲಿ ಅಳವಡಿಸಿಕೊಳ್ಳಲು ವಿನಂತಿಸಿದರು. ಅಲ್ಲದೆ, ಕಠಿಣ ಪರಿಶ್ರಮದಿಂದ ದುಡಿಯುವ ಮೂಲಕ ದೇಶದ ಪ್ರಗತಿಗೆ ನಾವೆಲ್ಲರೂ ಶ್ರಮಿಸೋಣ ಎಂದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಹತ್ತಿ ನಿರೂಪಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಬಸವರಾಜ ಸನಪಾ ವಂದಿಸಿದರು. 25 ಶಿಬಿರಾರ್ಥಿಗಳು ಭಾಗವಹಿಸಿದ್ದು ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts