More

    ಬುದ್ಧ ಜಗತ್ತಿಗೆ ಮಹಾಗುರು

    ವಿಜಯಪುರ: ಬುದ್ಧ ದೇವರಲ್ಲ, ದೇವದೂತನೂ ಅಲ್ಲ, ದೈವಸಂಭೂತನೂ ಅಲ್ಲ. ಆದರೆ, ತನ್ನ ಸ್ವಸಾಮರ್ಥ್ಯದಿಂದ ಅತ್ಯುನ್ನತ ಜ್ಞಾನ ಪಡೆದು ಜಗತ್ತಿಗೆ ಪರಮ ತತ್ವ ಬೋಧಿಸಿದ ಮಹಾಗುರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
    ಕರೊನಾ ನಿಯಮಗಳಿಗೆ ಒಳಪಟ್ಟು ಕನ್ನಡ ಸಾಹಿತ್ಯ ಪರಿಷತ್ ಸಭಾಭವನದ ಆವರಣದಲ್ಲಿ ಗುರುವಾರ ಭಗವಾನ್ ಬುದ್ಧ ಹಾಗೂ ಗುರುದೇವ ರವೀಂದ್ರನಾಥ ಟ್ಯಾಗೋರ್‌ರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ’
    ಗೌತಮ ಬುದ್ಧ ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ ಹಾಗೂ ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗ ಕಂಡು ಹಿಡಿದ ದಾರ್ಶನಿಕ. ಬುದ್ಧ ಕಂಡು ಹಿಡಿದ ವಿಪಶ್ಶನ, ಧ್ಯಾನ ಮಾರ್ಗವು ದುಃಖ ಮತ್ತು ಪಾಪ ಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ ಎಂದರು.
    ಮಧ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ, ದಯೆ, ಸಮತೆ, ಪ್ರೀತಿ, ಅನುಕಂಪ ಹಾಗೂ ಜ್ಞಾನದೊಂದಿಗೆ ಅಷ್ಟಾಂಗ ಮಾರ್ಗಗಳನ್ನು ತೋರಿಸಿಕೊಟ್ಟ. ಈ ಸತ್ಯವನ್ನು ನಾವು ಪರಿಪಾಲಿಸಿದರೆ ಸಮ್ಮ ಜೀವನದಲ್ಲಿ ಬುದ್ಧತ್ವ ಪಡೆಯಬಹುದು ಎಂದರು.
    ರವೀಂದ್ರನಾಥ ಟ್ಯಾಗೋರರ ಅಂಕಿತನಾಮ ಗುರುದೇವ. ಅವರು ಬಂಗಾಳಿ ಮಹಾವಿದ್ವಾಂಸ. ಕವಿ, ಕಾದಂಬರಿಕಾರ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿಸಿದ ‘ಗೀತಾಂಜಲಿ’ ಕಾವ್ಯಕ್ಕೆ ನೊಬೆಲ್ ಸಾಹಿತ್ಯ ಪ್ರಶಸ್ತಿದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು ಎಂದರು.
    ಪರಿಷತ್‌ನ ಕಾರ್ಯದರ್ಶಿ ಬಸವರಾಜ ಕುಂಬಾರ, ಪದಾಧಿಕಾರಿಗಳಾದ ದಾಕ್ಷಾಯಿಣಿ ಬಿರಾದಾರ, ಎಸ್.ವೈ. ನಡುವಿನ ಕೇರಿ, ಶಿವಲಿಂಗ ಕಿಣಗಿ, ಎಂ.ಆರ್. ಕಬಾಡೆ ಮತ್ತಿತರರು ಇದ್ದರು.

    ಹಿರೇಮಠ ಅಕಾಡೆಮಿ

    ಕಿತ್ತೂರ ರಾಣಿ ಚನ್ನಮ್ಮ ನಗರದ ಹಿರೇಮಠ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಶರಣಗೌಡ ಪಾಟೀಲ ಬುದ್ಧನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅಕಾಡೆಮಿ ನಿರ್ದೇಶಕ ಬಸವೇಶ ಹಿರೇಮಠ, ಪ್ರೊ.ರಾಜೇಂದ್ರಕುಮಾರ ಬಿರಾದಾರ, ಯಮನೂರಪ್ಪ ಅರಬಿ, ಶಿವಾಜಿ ಮೋರೆ, ಸಿದ್ದರಾಮ ರಬ್ಬಾ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts