More

    ಮದ್ಯ ನಿಷೇಧಿಸಿ ಸಮಾಜದ ಸ್ವಾಸ್ಥೃ ಕಾಪಾಡಿ

    ವಿಜಯಪುರ: ಭಾರತದಲ್ಲಿ ಜನಿಸಿದ ಬುದ್ಧ ಭಾರತದಲ್ಲೇ ಪರಕೀಯನಾಗಿದ್ದಾನೆ ಎಂದು ನ್ಯಾಯವಾದಿ ಹಾಗೂ ಪ್ರಗತಿಪರ ಚಿಂತಕ ಶ್ರೀನಾಥ ಪೂಜಾರಿ ಹೇಳಿದರು.
    ಬುದ್ಧ ಪೂರ್ಣಿಮೆ ನಿಮಿತ್ತ ನಗರದ ಬುದ್ಧ ವಿಹಾರದಲ್ಲಿ ಗುರುವಾರ ಪ್ರಾರ್ಥನೆ ಸಲ್ಲಿಸಿ ಮಹಿಳಾ ಮುನ್ನಡೆ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಮದ್ಯ ವಿರೋಧಿ ಭಿತ್ತಪತ್ರ ಪ್ರದರ್ಶನದ ನೇತೃತ್ವ ವಹಿಸಿ ಅವರು ಮಾತನಾಡಿದರು.
    ಬುದ್ಧ ಬೋಧಿಸಿದ ಸತ್ಯದ ಮಾರ್ಗದಲ್ಲಿ ನಡೆದರೆ ಯಾವ ಕಷ್ಟಗಳು ಮನುಷ್ಯರನ್ನು ಬಾಧಿಸವು. ಆದರೆ, ಇಂದು ಪ್ರತಿಯೊಬ್ಬರೂ ದುಶ್ಚಟಗಳ ದಾಸರಾಗಿ ಅನ್ಯಾಯದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಮದ್ಯಪಾನ, ಧೂಮಪಾನದಂಥ ವಿನಾಶಕಾರಿ ಮಾರ್ಗದಲ್ಲಿ ಸಾಗುತ್ತಿರುವುದರಿಂದ ಹಲವಾರು ಕುಟುಂಬಗಳು ಬೀದಿಗೆ ಬರುತ್ತಿವೆ. ಭಗವಾನ್ ಬುದ್ಧರ ವಾಣಿಯಂತೆ ಮದ್ಯ ನಿಷೇಧಿಸಿ ಪ್ರತಿಯೊಬ್ಬರೂ ಸಮಾಜದ ಸ್ವಾಸ್ಥೃ ಕಾಪಾಡಲು ಮುಂದಾಗಬೇಕೆಂದು ಹೇಳಿದರು.
    ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳಾದ ವೆಂಕಟೇಶ ವಗ್ಗ್ಯಾನವರ, ಭಾಗ್ಯಶ್ರೀ ವಗ್ಗಾೃನವರ, ಶಾಂತು ಶಹಾಪುರ, ಭಾರತಿ ಹೊಸಮನಿ, ಶಿವು ಮ್ಯಾಗೇರಿ, ನಾಗರಾಜ ಲಂಬು, ದಲಿತ ವಿದ್ಯಾರ್ಥಿ ಪರಿಷತ್‌ನ ರಾಕೇಶ ಕುಮಟಗಿ, ರಮೇಶ ಹಾದಿಮನಿ, ಶೇಖರ ಚೂರಿ, ಪವನ ಚವಡಿಕರ್ ಮತ್ತಿತರರು ಇದ್ದರು.

    ಮದ್ಯ ನಿಷೇಧಿಸಿ ಸಮಾಜದ ಸ್ವಾಸ್ಥೃ ಕಾಪಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts