More

    ಮೂಢನಂಬಿಕೆ ವಿರುದ್ಧ ಹೋರಾಟ ಅವಶ್ಯ

    ವಿಜಯಪುರ: ಮಹಿಳೆಯರು ಮೂಢನಂಬಿಕೆ ತೊರೆದು ಅದರ ವಿರುದ್ಧ ಹೋರಾಟ ಮಾಡಿದಾಗ ಮಾತ್ರ ಸ್ತ್ರೀ ಸಬಲೀಕರಣ ಸಾಧ್ಯ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.

    ನಗರದ ಗಣಪತಿ ಚೌಕ್‌ನಲ್ಲಿರುವ ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಹಿಳಾ ಬ್ಯಾಂಕ್ ಸಂಸ್ಥಾಪಕಿ ಮಲ್ಲಮ್ಮ ಎಂ.ಬಿರಾದಾರ ಮಾತನಾಡಿ, ಹಿಂದಿನ ಕಾಲದಿಂದಲೂ ಶೋಷಣೆಗೆ ಒಳಗಾದ ಹೆಣ್ಣು ಇಂದು ಉನ್ನತ ಸ್ಥಾನ ಪಡೆದು ತಿಳಿವಳಿಕೆ ಉಳ್ಳವಳಾಗಿದ್ದಾಳೆ ಎಂದು ತಿಳಿಸಿದರು.

    ಬ್ಯಾಂಕ್‌ನ ಅಧ್ಯಕ್ಷೆ ಮೀನಾಕ್ಷಿ ಆರ್ ಕಲ್ಲೂರ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.

    ಇದೇ ವೇಳೆ ಭುವನೇಶ್ವರಿ ಪಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷೆ ಸುನಂದಾ ಎಸ್. ಬಿರಾದಾರ, ನಿರ್ದೇಶಕಿ ಅನ್ನಪೂರ್ಣ ಎಸ್. ಶಿರಡೋಣ, ಸ್ಮೀತಾ ಎಸ್ ಪಾಟೀಲ, ಪದ್ಮಜಾ ಜೀ.ಪಾಟೀಲ, ಇಂದುಮತಿ ಎಂ. ಸಜ್ಜನ, ರೇಖಾ ಎಸ್.ಕಲ್ಲೂರ. ಶಾಂತಾ ಎಸ್.ಬಿರಾದಾರ, ರಾಜೇಶ್ವರಿ ಟಿ.ದೇಸಾಯಿ, ಶೈಲಜಾ ಎಸ್.ನಾಡಗೌಡ, ಚಂದ್ರಕ್ಕ ಬಿ.ಮೇತ್ರಿ, ರೇಖಾ ಎನ್.ನಂದಿ, ಕಸ್ತೂರಿಬಾಯಿ ವಿ.ಬರಗಿ, ಸುಮನ್ ವೈ.ಮಾಯವಂಶಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts