More

    ಮರಾಠಾ ಸಮಾಜಕ್ಕೆ ‘2 ಎ’ ಮಾನ್ಯತೆ ನೀಡಿ

    ವಿಜಯಪುರ: ಪ್ರವರ್ಗ 2 ಎ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮರಾಠಾ ಸಮಾಜದವರು ಬುಧವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
    ರಾಜ್ಯ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಮರಾಠಾ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಮಾಜದ ಏಳಿಗೆಗೆ ಪೂರಕ ಯೋಜನೆಗಳನ್ನು ಪ್ರಕಟಿಸಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಾನೇ ನೀಡಿದ ಭರವಸೆಯನ್ನು ಈಡೇರಿಸಿಲ್ಲವೆಂದು ಆಕ್ರೋಶ ಹೊರಹಾಕಿದರು.
    ವೀರ ಶಿವಾಜಿ ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಜಾಧವ ಮಾತನಾಡಿ, ಈ ಹಿಂದೆ ವಿಧಾನ ಸಭೆ ಚುನಾವಣೆ ಸಂದರ್ಭ ಬೀದರ ಜಿಲ್ಲೆಯಲ್ಲಿ ಪ್ರಚಾರದ ವೇಳೆ ಮರಾಠಾ ಸಮಾಜವನ್ನು 3ಬಿಯಿಂದ 2ಎಗೆ ಸೇರ್ಪಡೆಗೊಳಿಸುವುದಾಗಿ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದರು. ಅಧಿಕಾರಕ್ಕೆ ಬಂದ ಕೇವಲ 24 ಗಂಟೆಯಲ್ಲೇ ಈ ಭರವಸೆ ಈಡೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಈವರೆಗೂ ಆ ಬೇಡಿಕೆ ಈಡೇರಿಲ್ಲ. ಪ್ರಸಕ್ತ ಬಜೆಟ್‌ನಲ್ಲಾದರೂ ಆ ಬಗ್ಗೆ ಉಲ್ಲೇಖಿಸಬಹುದೆಂಬ ವಿಶ್ವಾಸವೂ ಮರೆಯಾಗಿದೆ. ಸರ್ಕಾರ ಸಮಾಜವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
    ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮರಾಠಾ ಸಮಾಜವನ್ನು ಪ್ರವರ್ಗ 2ಎಗೆ ಸೇರ್ಪಡೆಗೊಳಿಸಬೇಕು. ಮರಾಠಾ ಸಮಾಜದ ವಿದ್ಯಾರ್ಥಿಗಳಿಗಾಗಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ವಸತಿ ನಿಲಯಗಳನ್ನು ಕಟ್ಟಬೇಕು. ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಪೂರಕ ಬಜೆಟ್‌ನಲ್ಲಿ ಈ ಎಲ್ಲ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಮುಖಂಡರಾದ ಮಾರುತಿ ತಾ.ನಿಕ್ಕಂ, ಸದಾಶಿವ ಚವಾಣ, ಗಜಾನನ ಪವಾರ, ಅಂಬಾದಾಸ ಸಿಂದಗಿ, ಸಂತೋಷ ಪವಾರ, ಜ್ಯೋತಿಬಾ ನಿಕ್ಕಂ, ಶಂಕರ ತೊರವತ, ತುಕಾರಾಮ ನಲವಡೆ, ಪರಶುರಾಮ ಮುಳವಾಡ, ಶಿವಾಜಿ ಮಾನೆ, ತುಳಸಿರಾಮ ಸೂರ್ಯವಂಶಿ, ಭಗವಂತ ಪವಾರ ಮತ್ತಿತರರಿದ್ದರು.

    ಮರಾಠಾ ಸಮಾಜಕ್ಕೆ ‘2 ಎ’ ಮಾನ್ಯತೆ ನೀಡಿ
    ಮರಾಠಾ ಸಮಾಜಕ್ಕೆ ‘2 ಎ’ ಮಾನ್ಯತೆ ನೀಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts