More

    ರಾಷ್ಟ್ರೀಯ ನೇಮಕಾತಿ ನೀತಿ ಕೈಬಿಡಿ

    ವಿಜಯಪುರ: ರಾಷ್ಟ್ರೀಯ ನೇಮಕಾತಿ ನೀತಿ ವಿರೋಧಿಸಿ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಕಾರ್ಯದರ್ಶಿ ರಾಕೇಶ ಕಲ್ಲೂರ ಮಾತನಾಡಿ, ನಾನ್ ಗೆಜೆಟೆಡ್ ಹುದ್ದೆಗಳಿಗೆ ಕೇಂದ್ರ ಸರ್ಕಾರ ಏಕರೂಪವಾಗಿ ನೇಮಕಾತಿ ಮಾಡಲು ನೂತನ ನೀತಿಯೊಂದನ್ನು ರಚನೆ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಹೊಸ ರಾಷ್ಟ್ರೀಯ ನೀತಿ ಜಾರಿಯಾದಲ್ಲಿ ಪ್ರಾದೇಶಿಕ ಭಾಷೆಯನ್ನು ಐಚ್ಛಿಕವಾಗಿ ಓದಿರುವ ಕನ್ನಡಿಗರಾದ ನಮಗೆ ಕಡ್ಡಾಯವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕಾದ್ದರಿಂದ ಕರ್ನಾಟಕದ ಅಭ್ಯರ್ಥಿಗಳು ಅದರಲ್ಲಿಯೂ ಗ್ರಾಮೀಣ ಭಾಗದವರಿಗೆ ಯಾವುದೇ ಕಾರಣಕ್ಕೂ ಈ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರದ ಈ ನೀತಿಯಿಂದ ಕರ್ನಾಟಕದಲ್ಲಿ ಆಡಳಿತ ನಡೆಸಲು ಹೊರ ರಾಜ್ಯದ ಅಧಿಕಾರಿಗಳು ನೇಮಕವಾದಾಗ ಆ ಅಧಿಕಾರಿಗಳಿಗೆ ಇಲ್ಲಿನ ಭಾಷೆ ಕಲೆ, ಸಂಸ್ಕೃತಿ, ಸಂಪ್ರದಾಯ, ವಿಚಾರಗಳು, ಸಮುದಾಯಗಳ ಹಿನ್ನೆಲೆ, ಪ್ರಾದೇಶಿಕತೆ ಅರಿವು ಇವುಗಳ ಕೊರತೆ ಉಂಟಾಗುತ್ತದೆ. ಇದರಿಂದ ಆಡಳಿತ ಸುಗಮವಾಗುವದಿಲ್ಲ. ಕರ್ನಾಟಕ ಭೌಗೋಳಿಕವಾಗಿ ಗ್ರಾಮೀಣ ಪ್ರದೇಶವನ್ನೇ ಹೆಚ್ಚಾಗಿ ಹೊಂದಿದ್ದು, ಇಲ್ಲಿನ ಜನರಿಗೆ ಹೊರ ರಾಜ್ಯದ ಬೇರೆ ಭಾಷೆಗಳ ಅಧಿಕಾರಿಗಳೊಂದಿಗೆ ಸಂವಹಿಸಲು ಯಾವುದೇ ರೀತಿಯಲ್ಲಿ ಸಾಧ್ಯವಾಗುವುದಿಲ್ಲ. ರಾಷ್ಟ್ರೀಯ ನೇಮಕಾತಿ ನೀತಿ ಕೈ ಬಿಡಬೇಕೆಂದು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಬಿ.ಬಿ.ಇಂಗಳಗಿ ಮಾತನಾಡಿ, ಈಗಾಗಲೇ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕರ್ನಾಟಕದ ಗ್ರಾಮೀಣ ಭಾಗದ ಬಹುತೇಕ ವಿದ್ಯಾವಂತ ಯುವ ಜನತೆ ನಿರುದ್ಯೋಗದಿಂದ ಗುಳೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ವಲಸೆಯನ್ನು ಹತೋಟಿಗೆ ತರಲು ಆಗುತ್ತಿಲ್ಲ. ಹೀಗಿರುವಾಗ ಕೇಂದ್ರದ ರಾಷ್ಟ್ರೀಯ ನೇಮಕಾತಿ ನೀತಿ ರಚನೆಯಾದಲ್ಲಿ ರಾಜ್ಯದ ನಿರುದ್ಯೋಗಿಗಳಿಗೆ ತೊಂದರೆಯಾಗುತ್ತದೆ ಎಂದರು.
    ಪಿಂಟು ಗೊಬ್ಬೂರ, ಮುದಕ್ಕಸ ಇನಾಮದಾರ, ಮೈಲಾರಿ ನಜರಿ, ರಾಜು ಕೊಟ್ಟಲಗಿ, ಸಂತೋಷ ಶಾಪೇಟಿ, ನವೀನಕುಮಾರ ನೇಮಶೆಟ್ಟಿ, ಬಸವರಾಜ ಸಿಂಗನಳ್ಳಿ, ಶ್ರೀಶೈಲ ಪಾಟೀಲ, ಹುಸೇನಬಾನು ಹತ್ತರಕಿಹಾಳ, ಶಿವಗಂಗಾ ಕಟ್ಟಿಮನಿ ಮತ್ತಿತರರಿದ್ದರು.

    ರಾಷ್ಟ್ರೀಯ ನೇಮಕಾತಿ ನೀತಿ ಕೈಬಿಡಿ
    ರಾಷ್ಟ್ರೀಯ ನೇಮಕಾತಿ ನೀತಿ ಕೈಬಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts