More

    ತಳವಾರ-ಪರಿವಾರ ಸಮಾಜಕ್ಕೆ ನ್ಯಾಯ ಒದಗಿಸಿ

    ವಿಜಯಪುರ: ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್‌ಟಿ) ಪ್ರಮಾಣ ಪತ್ರ ನೀಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಲು ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವ ಹಲವು ಮುಖಂಡರು ಶುಕ್ರವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
    ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ರಾಜ್ಯದಲ್ಲಿನ ತಳವಾರ ಮತ್ತು ಪರಿವಾರ ಸಮಾಜಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ನಡೆದ ಸತತ ಹೋರಾಟದ ಲವಾಗಿ ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಳವಾರ ಮತ್ತು ಪರಿವಾರ ಸಮಾಜಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸಿ ರಾಜ್ಯ ಪತ್ರ ಹೊರಡಿಸಿದೆ. ಅದಾಗ್ಯೂ ಕೆಲ ಅಧಿಕಾರಿಗಳು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ತಳವಾರ ಮತ್ತು ಪರಿವಾರ ಸಮಾಜಕ್ಕೆ ಅನ್ಯಾಯವಾಗುತ್ತಿರುವುದು ಖಂಡನೀಯ ಎಂದರು.
    ತಳವಾರ- ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ಸ್ಪಷ್ಟ ಆದೇಶವಿದ್ದರೂ ಅಧಿಕಾರಿಗಳು ಅನವಶ್ಯಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ವರ್ತನೆಯಿಂಧ ಸರ್ಕಾರಕ್ಕೆ ಕಪ್ಪು ಚುಕ್ಕೆ ಬರಲಿದೆ. ಅಲ್ಲದೇ ಭವಿಷ್ಯದಲ್ಲಿ ನೂರಾರು ಕನಸು ಹೊತ್ತುಕೊಂಡಿರುವ ಆ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕೂಡಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದು ಬೆಳ್ಳುಬ್ಬಿ ಒತ್ತಾಯಿಸಿದರು.
    ಮುಖಂಡರಾದ ಎಸ್.ಎ. ದೇಗಿನಾಳ, ಮಲ್ಲು ಕೋಲಕಾರ, ರಾಜು ಮುಳವಾಡ, ಗಣಪತಿ ಸುಣಗಾರ, ಹಿಂಗಪ್ಪಾ ವಾಲೀಕಾರ, ಶ್ರೀಧರ ಜೀರಗಾಳ, ಬಸವರಾಜ ತಳವಾರ, ಅರವಿಂದ ನಾಯ್ಕೋಡಿ, ಮಲ್ಲು ದಳವಾಯಿ, ಈರಣ್ಣ ಕೋಲಾರ, ರಾವುತ ಕುಮಟಗಿ, ಬಸವರಾಜ ವಾಲೀಕಾರ, ಭರತ ಕೋಳಿ, ವಿರುಪಾಕ್ಷಿ, ಕೋಲಕಾರ, ಪುಂಡಲಿಕ ಬಳೂತಿ, ಪ್ರಫುಲ್ ಕುಮಾರ ಗಡ್ಡಿ, ಮಂಜುನಾಥ ಚಿಗರಿ ಮತ್ತಿತರರಿದ್ದರು.

    ತಳವಾರ-ಪರಿವಾರ ಸಮಾಜಕ್ಕೆ ನ್ಯಾಯ ಒದಗಿಸಿ
    ತಳವಾರ-ಪರಿವಾರ ಸಮಾಜಕ್ಕೆ ನ್ಯಾಯ ಒದಗಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts