More

    ಕಾರ್ಮಿಕರ ಹಿತ ಕಾಪಾಡಲು ಒತ್ತಾಯ

    ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ಖಂಡಿಸಿ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
    ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು ಸಾವಿರಾರು ಜನ ಇದ್ದು, ಅವರಿಗೆ ಈವರೆಗೆ ಸರ್ಕಾರದಿಂದ ಯಾವುದೇ ಸಹಾಯ ಸವಲತ್ತುಗಳು ಸಿಗುತ್ತಿಲ್ಲ. ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಸರ್ಕಾರದ ಕಾರ್ಮಿಕ ನೀತಿಯೇ ಕಾರಣ ಎಂದರು.
    ಜ್ಯೋತಿರಾಮ ಪವಾರ ಮಾತನಾಡಿ, ಕಾರ್ಮಿಕರು ಸರ್ಕಾರದ ಯೋಜನೆಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಹೊಂದಿಲ್ಲ. ಹೀಗಾಗಿ ಕಾರ್ಮಿಕ ಕಾನೂನು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ಕಾರ್ಮಿಕರ ಅರ್ಜಿಗಳನ್ನು ಸಕಾಲಕ್ಕೆ ಸ್ವೀಕರಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕೆಂದರು.
    ಐಟಿ-ಬಿಟಿ ಅಧ್ಯಕ್ಷ ಮಹ್ಮದ್ ರಫೀಕ್ ಟಪಾಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾರ್ಮಿಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಬಳಿಕ ಬಂದ ಬಿಜೆಪಿ ಸರ್ಕಾರ ಆ ಎಲ್ಲ ಯೋಜನೆಗಳನ್ನು ತಡೆದು ಬಂಡವಾಳಶಾಹಿ ಪರ ಕಾಯ್ದೆಗಳನ್ನು ಜಾರಿಗೊಳಿಸಿದೆ ಎಂದರು.
    ಮುಖಂಡರಾದ ಮಹ್ಮದ್ ಹನೀಫ್ ಮಕಾನದಾರ, ಬಾಬು ಯಾಳವಾರ, ಅಬ್ದುಲ್ ರಜಾಕ್ ಹೋರ್ತಿ, ವಸಂತ ಹೊನಮೊಡೆ, ಇಲಿಯಾಸ್ ಸಿದ್ದಿಕಿ, ತಾಜುದ್ದೀನ್ ಖಲೀಫ್, ಇರ್ಫಾನ್ ಶೇಖ, ಡಿ.ಎಂ. ಬಡದಾಳೆ, ರವೀಂದ್ರ ಜಾಧವ, ರಜಾಕ್ ಕಾಖಂಡಕಿ, ಮುಕುಂದ ಸಾಳುಂಕೆ, ದಾವಲಸಾಬ ಬಾಗವಾನ, ಆಯುಬ್ ನದಾಫ್, ಮಂಜುಳಾ ಜಾಧವ, ಲಕ್ಷ್ಮಿಬಾಯಿ ಬಳ್ಳಾರಿ, ಹುಲಿಗೆಮ್ಮ ಬಳ್ಳಾರಿ, ಜಾವೀದ್ ಶೇಖ, ಆಸೀಫ್ ಪುಂಗಿವಾಲೆ, ಅಜಾದ್ ಅಗಸಿಮನಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts