More

    ವಿಜಯನಗರ ಜಿಲ್ಲಾ ಕುರುಬ ಸಮಾಜ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಹೊಸಪೇಟೆ: ಕುರುಬ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಲಾ ಕಾಲೇಜುಗಳು, ವಸತಿ ನಿಲಯಗಳನ್ನು ಸ್ಥಾಪಿಸಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ.ಎರೆಗೌಡ ಡೊಳ್ಳು ಕರೆ ನೀಡಿದರು.

    ನಗರದ ಹಂಪಿ ರಸ್ತೆಯ ತಾಲೂಕು ಕುರುಬರ ಸಂಘದ ಸಂಕೀರ್ಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಕುರುಬರ ಸಂಘದ ಕಚೇರಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಹಿಂದಿನ ಕಾಲದಲ್ಲಿ ಸಂಘ ಕಟ್ಟಿಕೊಳ್ಳುವ ಕಲ್ಪನೆ ಇರಲಿಲ್ಲ. ಕಾಲಾನಂತರ ಮೇಲ್ವರ್ಗಗಳು ಸಂಘ ಕಟ್ಟಿಕೊಂಡು ಶೈಕ್ಷಣಿಕ ಕೇಂದ್ರಗಳು, ಮಠಗಳು, ವಸತಿ ನಿಲಯಗಳನ್ನು ಕಟ್ಟಿ ಅಭಿವೃದ್ಧಿ ಹೊಂದಲು ಪ್ರಾರಂಭಿಸಿದ ನಂತರ ಇತರ ಸಮುದಾಯಗಳು ಅವುಗಳನ್ನು ಅನುಕರಿಸಿದವು. ಸಮಾಜಗಳ ಸಂಘಟಿತ ಹೋರಾಟದಿಂದ ಎಲ್ಲ ರೀತಿಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

    ಎಚ್.ಬಿ.ಹಳ್ಳಿ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಹಕ್ಕ-ಬುಕ್ಕರು ಕಟ್ಟಿದ ವಿಜಯನಗರ ಸಾಮ್ರಾಜ್ಯದಲ್ಲಿ ಜಿಲ್ಲಾ ಕುರುಬರ ಸಂಘ ಕಟ್ಟಿದ್ದೇವೆ. ಸಂಘದ ಎಲ್ಲ ಪದಾಧಿಕಾರಿಗಳು ವೈಯಕ್ತಿಕ ದ್ವೇಷ, ಪ್ರತಿಷ್ಠೆಗಳನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಅಯ್ಯಳಿ ತಿಮ್ಮಪ್ಪ ಮಾತನಾಡಿ, ಸಂಘದ ಪದಾಧಿಕಾರಿಗಳು ಜಿಲ್ಲಾ ಪ್ರವಾಸ ಕೈಗೊಂಡು 511 ರೂ. ಗಳಿಗೆ ಸದಸ್ಯತ್ವ ಅಭಿಯಾನ ಕೈಗೊಳ್ಳಬೇಕು. ಸಂಘ ಬಲಿಷ್ಠಗೊಳಿಸಬೇಕು ಎಂದು ಹೇಳಿದರು.


    ಕೂಡ್ಲಿಗಿ ಅಧ್ಯಕ್ಷ ಬೊಪ್ಪಲಾಪುರ ಬಸವರಾಜ, ಹಡಗಲಿ ಅಧ್ಯಕ್ಷ ಹೊಸಕೇರಿ ಬೀರಪ್ಪ, ಹರಪನಹಳ್ಳಿ ಅಧ್ಯಕ್ಷ ಕೆ.ಗೋಣಿ ಬಸಪ್ಪ, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಕೆ.ರವಿಕುಮಾರ್, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಿಕಾರ್ಜುನ, ಕನಕ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ತಿಮ್ಮಪ್ಪ, ಟಿ.ವಿಶ್ವನಾಥ, ಇಂಗಳಿಗಿ ಉದೇದಪ್ಪ, ಹುಲುಗಪ್ಪ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts