More

    ಸಾರಿಗೆ ಅಧಿಕಾರಿ ಮನೆಗೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ

    ಪಟ್ನಾ : ಬಿಹಾರದಲ್ಲಿ ಕದ್ದ ವಾಹನಗಳಿಗೆ ನಕಲಿ ದಾಖಲೆಪತ್ರಗಳನ್ನು ಮಾಡಿಕೊಡುವ ಹಗರಣ ನಡೆಸುವ ಆರೋಪ ಹೊತ್ತಿರುವ ಜಿಲ್ಲಾ ಸಾರಿಗೆ ಅಧಿಕಾರಿ (ಡಿಟಿಒ) ಒಬ್ಬರ ಮನೆಗೆ ವಿಜಿಲೆನ್ಸ್​ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಮ್ಮ ಆದಾಯಕ್ಕಿಂತ 1.24 ಕೋಟಿ ರೂ.ಗಳಿಗೂ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೆನ್ನಲಾದ ಬಿಎಎಸ್​ ಅಧಿಕಾರಿ ರಜನೀಶ್​ ಲಾಲ್​ರ ಮೂರು ಫ್ಲ್ಯಾಟ್​ಗಳ ದಾಖಲೆಪತ್ರಗಳನ್ನೂ ಪರಿಶೀಲಿಸಲಾಗುತ್ತಿದೆ.

    2020ರ ಫೆಬ್ರವರಿ 3 ಕ್ಕೆ ಮುಜಫ್ಫಪುರದ ಡಿಟಿಒ ಆಗಿ ಅಧಿಕಾರ ವಹಿಸಿಕೊಂಡ ರಜನೀಶ್​ಲಾಲ್​ಗೆ 2021 ರ ಮಾರ್ಚ್​ನಲ್ಲಿ ಛಾಪ್ರದ ಡಿಟಿಒ ಆಗಿ ಹೆಚ್ಚುವರಿ ಚಾರ್ಜ್​ ನೀಡಲಾಗಿದೆ. ಈ ಪ್ರದೇಶಗಳಲ್ಲಿ ನಕಲಿ ದಾಖಲೆಪತ್ರಗಳ ಸೃಷ್ಟಿಯ ಜಾಲವಿದ್ದು, ಅದರಲ್ಲಿ ರಜನೀಶ್​ ಲಾಲ್ ಕೈವಾಡವಿದೆ ಎಂದು ಜನವರಿಯಲ್ಲಿ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ಬಜೆಟ್ ಮಂಡನೆಗೆ ಪ್ರತಿಪಕ್ಷ ಅಡ್ಡಿ, ಖರ್ಚು-ವೆಚ್ಚದ ಮಾಹಿತಿ ಕೇಳಿದ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ

    ಈ ಬಗ್ಗೆ ತನಿಖೆ ನಡೆಯುತ್ತಿರುವ ಜೊತೆಯಲ್ಲೇ , ವಿಜಿಲೆನ್ಸ್​ ಅಧಿಕಾರಿಗಳು ಇಂದು ಪಟ್ನಾದ ಕಂಕರ್​ಬಾಗ್ ಪ್ರದೇಶದಲ್ಲಿರುವ ಲಾಲ್​ರ ಮನೆಗಳಿಗೆ ದಾಳಿಯಿಟ್ಟರು. ಮನೆಗಳು ಮತ್ತು ಇತರ ಆಸ್ತಿಗಳ ದಾಖಲಾತಿಗಳನ್ನು ಪರಿಶೀಲಿಸಿದರು. 50 ಲಕ್ಷಕ್ಕೂ ಹೆಚ್ಚು ನಗದು ಮತ್ತು ಚಿನ್ನ-ಬೆಳ್ಳಿ ಆಭರಣಗಳನ್ನು ಜಪ್ತಿಪಡಿಸಿಕೊಂಡರು. ತನಿಖೆ ಮುಂದುವರಿದಿದೆ. (ಏಜೆನ್ಸೀಸ್)

    ನಟಿ ಶಬಾನಾ ಆಜ್ಮಿಗೆ ಆನ್​ಲೈನ್​ ಧೋಖಾ?!

    ಕರೊನಾ ಮಧ್ಯೆ ಪರೀಕ್ಷೆ ಏಕೆ? ಫಲಿತಾಂಶ ಯಾವಾಗ? ಆಂಧ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts