More

    ವಿದ್ಯಾಕಾಶಿ ನರೇಗಲ್ಲಗೆ ಬೇಕಿದೆ ಕ್ರೀಡಾಂಗಣ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
    ಗದಗ ಜಿಲ್ಲೆಯ ವಿದ್ಯಾಕಾಶಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನರೇಗಲ್ಲ ಪಟ್ಟಣದಲ್ಲಿ ಹತ್ತಾರು ಶಾಲೆ, ಕಾಲೇಜುಗಳಿದ್ದು, ಕ್ರೀಡಾಂಗಣ ಅತ್ಯವಶ್ಯವಾಗಿದೆ. ಕ್ರೀಡಾಂಗಣ ಇಲ್ಲದ ಕಾರಣ ಕ್ರೀಡಾಳುಗಳು ಪರದಾಡು ಸ್ಥಿತಿ ನಿರ್ವಣವಾಗಿದೆ.
    ಪಟ್ಟಣದಲ್ಲಿ ಕ್ರೀಡಾಂಗಣ ಇಲ್ಲದ ಕಾರಣ ಕ್ರೀಡಾಪಟುಗಳು ಅನಿವಾರ್ಯವಾಗಿ ಶಾಲೆ, ಕಾಲೇಜುಗಳ ಆಟದ ಮೈದಾನ, ರಸ್ತೆ, ಹೊರವಲಯದ ಖಾಲಿ ಹೊಲಗಳಲ್ಲಿ ಕ್ರಿಕೆಟ್ ಸೇರಿ ನಾನಾ ಕ್ರೀಡೆಗಳಿಗೆ ತರಬೇತಿ ನಡೆಸುತ್ತಿದ್ದಾರೆ. ಸುಸಜ್ಜಿತ ಕ್ರೀಡಾಂಗಣ ನಿರ್ವಣವಾದರೆ ಕ್ರೀಡಾಭ್ಯಾಸಕ್ಕೆ ಅನುಕೂಲವಾಗಲಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸುವ ಅರ್ಹತೆ ಹೊಂದಿರುವ ಕ್ರೀಡಾಳುಗಳು ಇಲ್ಲಿದ್ದಾರೆ. ಆದರೆ, ಅವರಿಗೆ ಸೂಕ್ತ ತರಬೇತಿ ಹೊಂದಲು ಕ್ರೀಡಾಂಗಣ ಇಲ್ಲದಂತಾಗಿದೆ.
    ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕ್ರೀಡಾಂಗಣ ಸೇರಿ ಮತ್ತಿತರ ಪೂರಕ ಸೌಲಭ್ಯಗಳು ಇಲ್ಲದಂತಾಗಿದೆ. ಕ್ರೀಡೆಗೆ ಉತ್ತೇಜನ ನೀಡುವ ಮೈದಾನ ಇಲ್ಲದಿರುವುದು ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.
    ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆ ಹೊಂದಿದ ಕೀರ್ತಿಗೆ ಪಾತ್ರವಾಗಿರವ ನರೇಗಲ್ಲ ಪಟ್ಟಣವು ಐದು ಮಜರೆ ಗ್ರಾಮಗಳನ್ನೊಳಗೊಂಡಿದೆ. ಹತ್ತಾರು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನರೇಗಲ್ಲ ಪಪಂ ವ್ಯಾಪ್ತಿಯಲ್ಲಿ 7 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 4 ಖಾಸಗಿ. 1 ಸರ್ಕಾರಿ ಪ್ರೌಢಶಾಲೆ, 3 ಖಾಸಗಿ, 1 ಸರ್ಕಾರಿ ಪದವಿ ಪೂರ್ವ ಕಾಲೇಜು, 3 ಖಾಸಗಿ, 1 ಸರ್ಕಾರಿ ಪದವಿ ಕಾಲೇಜು, 1 ಖಾಸಗಿ ಕಾಲೇಜ್ ಅನ್ನು ಹೊಂದುವ ಮೂಲಕ ಈ ಭಾಗದ ಶೈಕ್ಷಣಿಕ ಕೇಂದ್ರವಾಗಿದೆ. ಆದರೆ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಹಂಬಲಿಸುತ್ತಿರುವ ಯುವ ಪೀಳಿಗೆಗೆ ಪೂರಕವಾದ ಕ್ರೀಡಾಂಗಣ, ಸಲಕರಣೆಗಳನ್ನು ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆ ಸಂಪೂರ್ಣ ವಿಫಲವಾಗಿದೆ.
    ನರೇಗಲ್ಲ ಹೋಬಳಿಯಲ್ಲಿ ದೊಡ್ಡ ಮಟ್ಟದ ಯುವಕರ ಪಡೆಯಿದೆ. ಕ್ರಿಕೆಟ್, ಕಬಡ್ಡಿ, ವಾಲಿಬಾಲ್​ನಂತಹ ಕ್ರೀಡೆಗಳು ವರ್ಷವಿಡೀ ನಡೆಯುತ್ತಿರುತ್ತವೆ. ಆದರೆ, ಕ್ರೀಡಾಂಗಣದ ಕೊರತೆಯಿಂದ ಸರ್ಕಾರಿ ಶಾಲೆಗಳ ಬಯಲು ಜಾಗ, ಹೊರವಲಯದ ಜಮೀನುಗಳಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದೆ.


    ನರೇಗಲ್ಲ ಪಟ್ಟಣದಲ್ಲಿ ನೂರಾರು ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ತರಬೇತಿ ಹಾಗೂ ಸೌಕರ್ಯ ಇಲ್ಲದಿರುವುದರಿಂದ ಹೆಚ್ಚಿನ ಸಾಧನೆ ಮಾಡಲಾಗುತ್ತಿಲ್ಲ. ಖೋ ಖೋ, ಕಬಡ್ಡಿ, ಅಟ್ಯಾ-ಪಟ್ಯಾ, ಸೇರಿ ಅನೇಕ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಇಲ್ಲಿದ್ದಾರೆ. ಕ್ರೀಡಾಪಟುಗಳು ರಸ್ತೆಯ ಬದಿಯಲ್ಲಿ, ಖಾಸಗಿ ಮೈದಾನದಲ್ಲಿ ಕ್ರೀಡಾಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ, ಜನಪ್ರತಿನಿಧಿಗಳು, ಅಧಿಕಾರಿಗಳು ನರೇಗಲ್ಲ ಪಟ್ಟಣಕ್ಕೆ ಸುಸಜ್ಜಿತವಾದ ಕ್ರೀಡಾಂಗಣ ನಿರ್ವಣಕ್ಕೆ ಮುಂದಾಗಬೇಕು.
    | ಅಶೋಕ ಬೇವಿನಕಟ್ಟಿ, ಹಠಯೋಗಿ ಕ್ರೀಡಾ ಸಂಘದ ಮುಖ್ಯಸ್ಥ


    ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ವಣಕ್ಕಾಗಿ ಯಾವುದೇ ಬೇಡಿಕೆ ಬಂದಿಲ್ಲ. ಬೇಡಿಕೆಯೊಂದಿಗೆ ಅಗತ್ಯ ಜಮೀನು ನೀಡಿದಲ್ಲಿ ಕ್ರೀಡಾಂಗಣ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು.
    | ವಿಠಲ ಜಾಬಗೌಡರ, ಜಿಲ್ಲಾ ಸಹಾಯಕ ನಿರ್ದೆಶಕ, ಕ್ರೀಡಾ ಮತ್ತು ಯುವಜನ ಸಬಲೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts